ಕರ್ನಾಟಕ

karnataka

ETV Bharat / state

ಕಾಲೇಜಿಗೆ ಟಾಪರ್​ ಆಗಿದ್ದ ಆ ಯುವತಿ ಪ್ರಿಯತಮ ಔಟಿಂಗ್​ ಕರೆದುಕೊಂಡು ಹೋಗದಿದ್ದಕ್ಕೆ ಆತ್ಮಹತ್ಯೆ - bangalore latest news

ಯಡಿಯೂರಿನ ಟಾಟಾ ಸಿಲ್ಕ್ ಫಾರಂ ಪಿಜಿಯಲ್ಲಿ ಎರಡು ತಿಂಗಳಿನಿಂದ ವಾಸವಿದ್ದ ಈಕೆ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು, ಆತನನ್ನು ನಿನ್ನೆ ಸಂಜೆ ಸುತ್ತಾಡಲು ಕರೆದಿದ್ದಾಳೆ. ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡು ದಾರುಣ ಅಂತ್ಯ ಕಂಡಿದ್ದಾಳೆ.

ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ

By

Published : Sep 23, 2019, 4:31 PM IST

Updated : Sep 23, 2019, 4:38 PM IST

ಬೆಂಗಳೂರು: ನಗರದ ಪಿಜಿಯೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ತನಿಖೆಗೆ ಇಳಿದಾಗ ರೋಚಕ‌ ಕಹಾನಿ ಬೆಳಕಿಗೆ ಬಂದಿದೆ.

ಯಡಿಯೂರಿನ ಟಾಟಾ ಸಿಲ್ಕ್ ಫಾರಂ ಪಿಜಿಯಲ್ಲಿ ಎರಡು ತಿಂಗಳಿನಿಂದ ವಾಸವಿದ್ದ ವಿದ್ಯಾರ್ಥಿನಿ ನಿನ್ನೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೂಲತಃ ತಮಿಳುನಾಡಿನವಳಾದ ಈಕೆ ಜಯನಗರದ ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನಲ್ಲಿ ಟಾಪರ್ ಕೂಡ ಆಗಿದ್ದಳು.

ವಿದ್ಯಾರ್ಥಿನಿ ಆತ್ಮಹತ್ಯೆ ಬಗ್ಗೆ ಡಿಸಿಪಿಯಿಂದ ಮಾಹಿತಿ

ಪಿಜಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಿಯತಮನೊಂದಿಗಿನ ಚಿಕ್ಕ ಗಲಾಟೆ:
ಈ ಹದಿಹರೆಯದ ವಯಸ್ಸಿನಲ್ಲಿ ಗಾಯತ್ರಿ ತಮಿಳುನಾಡು ಮೂಲದ ಸುದರ್ಶನ್ ಎಂಬುವವನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು , ಆತ ಕೂಡ ಜಯನಗರದ ಪಿಜಿ ಯೊಂದರಲ್ಲಿ ವಾಸವಾಗಿದ್ದ.

ಸುದರ್ಶನ ಹಾಗೂ ಯುವತಿ ಒಂದೇ ಊರಿನವರಾಗಿದ್ದು, ನಿನ್ನೆ ಮುಂಜಾನೆಯಿಂದ ಸಂಜೆ ವರೆಗೂ ಇಬ್ಬರೂ ಒಟ್ಟಿಗೆ ಸುತ್ತಾಡಿ ಪಿಜಿಗೆ ಬಂದ ನಂತರ ಮತ್ತೇ ಹೊರಗಡೆ ಸುತ್ತಾಡಲು ಗಾಯತ್ರಿ ಸುದರ್ಶನನ್ನು ಕರೆದಿದ್ದಾಳೆ. ಇದಕ್ಕೆ ಸುದರ್ಶನ್​ ಒಲ್ಲೆ ಎಂದಿದ್ದಕ್ಕೆ ನೀ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಂದೇಶ ಕಳುಹಿಸಿದ್ದಾಳೆ.

ಇದಕ್ಕೆ ಕೋಪಗೊಂಡ ಸುದರ್ಶನ್, ಆಕೆಯ ನಂಬರ್ ಬ್ಲಾಕ್ ಮಾಡಿದ್ದ. ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಬನಶಂಕರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.

Last Updated : Sep 23, 2019, 4:38 PM IST

ABOUT THE AUTHOR

...view details