ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಇಂದೋರ್ ಮಾದರಿಯಂತೆ ಮನೆಗಳಿಂದ ಕಸ ಸಂಗ್ರಹ

ಬೆಂಗಳೂರಿನ ನಾಲ್ಕು ವಾರ್ಡ್​​ಗಳಲ್ಲಿ ಪ್ರಾಯೋಗಿಕವಾಗಿ ಇಂದೋರ್ ಮಾದರಿಯ ಕಸ ನಿರ್ವಹಣೆಯನ್ನು ಜಾರಿಗೆ ತರಲಾಗಿದೆ.

ಕಸ ಸಂಗ್ರಹ
ಕಸ ಸಂಗ್ರಹ

By

Published : Feb 1, 2020, 10:59 PM IST

ಬೆಂಗಳೂರು:ನಗರದ ನಾಲ್ಕು ವಾರ್ಡ್​​ಗಳಲ್ಲಿ ಪ್ರಾಯೋಗಿಕವಾಗಿ ಇಂದೋರ್ ಮಾದರಿಯ ಕಸ ನಿರ್ವಹಣೆಯನ್ನು ಜಾರಿಗೆ ತರಲಾಗಿದೆ.

ರಾತ್ರಿ ವೇಳೆಯಲ್ಲಿ ವಾಣಿಜ್ಯ ಕಟ್ಟಡಗಳಿಂದ ಕಸ ಸಂಗ್ರಹ ಮಾಡುವುದರಿಂದ ಬ್ಲಾಕ್ ಸ್ಪಾಟ್​ಗಳು ಕಡಿಮೆಯಾಗಲಿವೆ. ಅಲ್ಲದೆ ಇದೇ ರೀತಿಯಲ್ಲಿ ಪ್ರತಿ ಮನೆ ಬಾಗಿಲಿನಿಂದ ರಾತ್ರಿ ಹೊತ್ತು ಹಾಗೂ ಅಗತ್ಯ ಬಿದ್ದೆಡೆ ಮೂರೂ ಪಾಳಿಯಲ್ಲಿ ಕಸ ಸಂಗ್ರಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಇಂದೋರ್ ಮಾದರಿಯ ಕಸ ಸಂಗ್ರಹ ಕುರಿತು ಮೇಯರ್​​ ಸ್ಪಷ್ಟನೆ

ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ನೂರು ದಿನದಲ್ಲಿ ಪ್ರಾಯೋಗಿಕ ಯೋಜನೆಯ ಸಂಕ್ಷಿಪ್ತ ಚಿತ್ರಣ ಸಿಗಲಿದೆ. ಬ್ಲಾಕ್ ಸ್ಪಾಟ್​ಗಳು ಯಾಕೆ ಸೃಷ್ಟಿಯಾಗ್ತಿವೆ ಎಂದು ಕಾರಣ ಹುಡುಕಲಾಗ್ತಿದೆ. ಮುಂದೆ ಬರುವ ದಿನಗಳಲ್ಲಿ ಅಧ್ಯಯನ ಮಾಡಿ, ಈ ಯೋಜನೆಯ ಲೋಪದೋಷ ಸರಿಪಡಿಸಿ ಎಲ್ಲಾ ವಾರ್ಡ್​ಗಳಲ್ಲೂ ಯೋಜನೆ ಜಾರಿಗೆ ತರಲಾಗುವುದು ಎಂದರು.

ಕೆಲವೊಂದು ಕಡೆ ಡೇ ಶಿಫ್ಟ್, ನೈಟ್ ಶಿಫ್ಟ್, ಮಧ್ಯಾಹ್ನದ ಶಿಫ್ಟ್​ನಲ್ಲಿ ಕಸ ತೆಗೆದು, ಜನರಿಗೆ ಕಸ ಹೊರಗೆ ಎಸೆಯದಂತೆ ಮಾಡಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಬರುವವರಿಗೆ ಬೆಳಗ್ಗೆ ಬೇಗ ಕಸ ಕೊಡಲು ಸಾಧ್ಯವಾಗೋದಿಲ್ಲ. ಹೀಗಾಗಿ ಯಾವ ಯಾವ ಪ್ರದೇಶದಲ್ಲಿ ಕಸ ಹೇಗೆ ಸಂಗ್ರಹಿಸಬೇಕು ಎಂಬುದು ಗೊತ್ತಾಗಲಿದೆ ಎಂದರು.

ABOUT THE AUTHOR

...view details