ಬೆಂಗಳೂರು:ಪ್ರತಿ ವರ್ಷದಂತೆ ಈ ವರ್ಷವು ಸಹ ಗಣೇಶೋತ್ಸವದ ಆಚರಣೆ ಸಂಬಧಿಸಿದಂತೆ ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಬೆಸ್ಕಾಂ ಸಲಹೆ ಸೂಚನೆಯನ್ನು ನೀಡಿದೆ.
ಎನ್ಒಸಿ ಇದ್ರೆ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ವಿದ್ಯುತ್: ಬೆಸ್ಕಾಂ ಸ್ಟ್ರಿಕ್ಟ್ ಆರ್ಡರ್ - ಗಣೇಶನ ಹಬ್ಬ
ಗಣೇಶನ ಹಬ್ಬಕ್ಕೆ ಬೆಸ್ಕಾಂ ಸಾರ್ವಜನಿಕ ಹಿತ ದೃಷ್ಟಿಯಿಂದ ಕೆಲವು ಸಲಹೆಗಳನ್ನು ಸೂಚಿಸಿದೆ. ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಾತ್ಕಾಲಿಕ ವಿದ್ಯುತ್ ಸಂಪರ್ಕ ಬಳಸುಬೇಕಿದ್ದರೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು. ಸಮಾರಂಭದಲ್ಲಿ 100ಕ್ಕೂ ಹೆಚ್ಚು ಜನಸಂಖ್ಯೆ ಸೇರುವ ಸಂದರ್ಭದಲ್ಲಿ ಕಡ್ಡಾಯವಾಗಿ ಎಲೆಕ್ಟ್ರಿಕಲ್ ಇನ್ ಸ್ಪೆಕ್ಟರ್ರವರ ಅನುಮತಿ ಪಡೆಯಬೇಕು. ವೈರಿಂಗ್ ಮತ್ತು ಇ.ಎಲ್.ಸಿ.ಬಿ ಅಳವಡಿಕೆ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವರದಿಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಎಚ್ಚರ ವಹಿಸುವಂತೆ ಮತ್ತು ಸುರಕ್ಷತೆಯಿಂದ ಗಣೇಶೋತ್ಸವನ್ನು ಆಚರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.