ಕರ್ನಾಟಕ

karnataka

ETV Bharat / state

ಕೋವಿಡ್ ಶವಗಳಿಗೆ ಮುಕ್ತಿ ನೀಡಲಿದೆ ಜಿಲ್ಲಾಡಳಿತ: ಕಂದಾಯ ಇಲಾಖೆಯಿಂದ ಅಧಿಕೃತ ಆದೇಶ

ಜಿಲ್ಲೆಗಳಲ್ಲಿ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಹಾಗೂ ಅಂತಿಮ ವಿಧಿ ವಿಧಾನಗಳಿಗೆ ಜಿಲ್ಲಾಡಳಿತವೇ ಮುಂದಾಗಲಿದೆ ಎಂದು ತಿಳಿಸಲಾಗಿದ್ದು, ಕೋವಿಡ್ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಲಾಗಿದೆ.

ಕೋವಿಡ್ ಶವಗಳಿಗೆ ಮುಕ್ತಿ ನೀಡಲಿದೆ ಜಿಲ್ಲಾಡಳಿತ
ಕೋವಿಡ್ ಶವಗಳಿಗೆ ಮುಕ್ತಿ ನೀಡಲಿದೆ ಜಿಲ್ಲಾಡಳಿತ

By

Published : Jun 3, 2021, 9:56 PM IST

ಬೆಂಗಳೂರು: ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕೆಲ ಕುಟುಂಬಸ್ಥರು ಮುಂದೆ ಬರದಿರುವ ಹಿನ್ನೆಲೆ ಅಂತಹ ಶವಗಳನ್ನು ಆಯಾ ಧರ್ಮದ ವಿಧಿವಿಧಾನದಂತೆ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಿ ಅಂತಿಮ ವಿಧಿವಿಧಾನಗಳನ್ನು ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ನೆರವೇರಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ ಅಧಿಕೃತ ಆದೇಶ ಪ್ರತಿ

ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್ ಖುದ್ದು ನೇತೃತ್ವವಹಿಸಿ ಸುಮಾರು 500ಕ್ಕೂ ಹೆಚ್ಚು ಅಸ್ಥಿಗಳನ್ನ ಕಾವೇರಿ ನದಿ ತೀರದಲ್ಲಿ ವಿಸರ್ಜನೆ ಮಾಡಿದ್ದರು. ಈ ವೇಳೆಯೇ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಮುಂದಾಗದ ವೇಳೆ ಖುದ್ದು ಕಂದಾಯ ಇಲಾಖೆಯ ವತಿಯಿಂದಲೇ ಅಂತಿಮ ವಿಧಿ ವಿಧಾನಗಳನ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಅದರಂತೆ ಈಗ ಇಲಾಖೆಯ ವತಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಹಾಗೂ ಅಂತಿಮ ವಿಧಿ ವಿಧಾನಗಳಿಗೆ ಜಿಲ್ಲಾಡಳಿತವೇ ಮುಂದಾಗಲಿದೆ ಎಂದು ತಿಳಿಸಲಾಗಿದೆ.

ABOUT THE AUTHOR

...view details