ಬೆಂಗಳೂರು: ಬೆಳ್ಳಂ ಬೆಳಗ್ಗೆಯಿಂದಲೇ ಚಿತಾಗಾರದ ಮುಂದೆ ಆ್ಯಂಬುಲೆನ್ಸ್ ಸಾಲುಗಟ್ಟಿದ್ದು, ಸುಮನಹಳ್ಳಿ ಕ್ರಿಮ್ಯಾಟೋರಿಯಂ ಮುಂದೆ ಮೃತದೇಹ ಹೊತ್ತ ಆ್ಯಂಬುಲೆನ್ಸ್ಗಳ ಸಾಲು ಇಂದೂ ಸಹ ಮುಂದುವರೆದಿದೆ.
ಕೆಲಕಾಲ ಕೈ ಕೊಟ್ಟ ಚಿತಾಗಾರದ ಯಂತ್ರ.. ಹೆಚ್ಚಾಯ್ತು ಶವಹೊತ್ತ ಆ್ಯಂಬುಲೆನ್ಸ್ ಸಾಲು - ಆ್ಯಂಬುಲೆನ್ಸ್
ನಿನ್ನೆ ತಡರಾತ್ರಿ 2ರ ವರೆಗೂ ಶವಸಂಸ್ಕಾರ ನಡೆಸಲಾಗಿತ್ತು. ಇದರಿಂದಾಗಿ ಚಿತಾಗಾರದ ಯಂತ್ರದಲ್ಲಿ ಹೊಗೆ ತುಂಬಿಕೊಂಡಿತ್ತು. ನಿರಂತರ ದೇಹ ದಹನದಿಂದ ಬಿಸಿಯಾಗಿದ್ದ ಯಂತ್ರವನ್ನು ಸಿಬ್ಬಂದಿ ತಣ್ಣಗಾಗಿಸಿದ ಬಳಿಕ ದುರಸ್ತಿ ಕಾರ್ಯ ಕೈಗೊಂಡರು.
ಕೆಲ ಹೊತ್ತು ಕೈ ಕೊಟ್ಟ ಚಿತಾಗಾರದ ಯಂತ್ರ
ಆದರೆ, ಈ ವೇಳೆ ಚಿತಾಗಾರದ ಯಂತ್ರ ಹಾಳಾಗಿದ್ದು, ಕೆಲಕಾಲ ಅಂತ್ಯ ಸಂಸ್ಕಾರಕ್ಕೆ ತಡೆಯಾಗಿತ್ತು. ನಿನ್ನೆ ತಡರಾತ್ರಿ 2ರ ವರೆಗೂ ಶವಸಂಸ್ಕಾರ ನಡೆಸಲಾಗಿತ್ತು. ಇದರಿಂದಾಗಿ ಚಿತಾಗಾರದ ಯಂತ್ರದಲ್ಲಿ ಹೊಗೆ ತುಂಬಿಕೊಂಡಿತ್ತು. ನಿರಂತರ ದೇಹ ದಹನದಿಂದ ಬಿಸಿಯಾಗಿದ್ದ ಯಂತ್ರವನ್ನು ಸಿಬ್ಬಂದಿ ತಣ್ಣಗಾಗಿಸಿದ ಬಳಿಕ ದುರಸ್ತಿ ಕಾರ್ಯ ಕೈಗೊಂಡರು.