ಕರ್ನಾಟಕ

karnataka

ETV Bharat / state

ಕೋವಿಡ್-19 ಸೇವೆಯಲ್ಲಿರುವ ಸರ್ಕಾರಿ‌‌ ನೌಕರರಿಗೆ ಉಚಿತ ತಪಾಸಣೆ

ಹೊರದೇಶಗಳಲ್ಲಿರುವ 10,823 ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಸಮನ್ವಯ ಕಾರ್ಯದ ನಿರ್ದೇಶನ ನೀಡಿದೆ.

ಕೋವಿಡ್-19 ಸೇವೆಯಲ್ಲಿರುವ ಸರ್ಕಾರಿ‌‌ ನೌಕರರಿಗೆ ಉಚಿತ ತಪಾಸಣೆ
ಕೋವಿಡ್-19 ಸೇವೆಯಲ್ಲಿರುವ ಸರ್ಕಾರಿ‌‌ ನೌಕರರಿಗೆ ಉಚಿತ ತಪಾಸಣೆ

By

Published : Apr 29, 2020, 8:21 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 535 ಕ್ಕೆ ಏರಿಕೆಯಾಗಿದ್ದು, ತುಮಕೂರಿನಲ್ಲಿ ವೃದ್ಧರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಟ್ಟು 21 ಜನ ಸಾವನ್ನಪ್ಪಿದ್ದು, 216 ಜನ ಗುಣಮುಖರಾಗಿದ್ದಾರೆ. ಉಳಿದ ಪ್ರಕರಣಗಳಲ್ಲಿ 296 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದ್ದು, 7 ಜನರನ್ನು ತೀವ್ರ ನಿಗಾ ಘಟಕಗಳಲ್ಲಿ ಇರಿಸಲಾಗಿದೆ.

ಇಂದು ಒಟ್ಟಾರೆ‌ 12 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಈ ಪ್ರಕರಣಗಳಲ್ಲಿ, ಕಲಬುರಗಿ-8, ಬಾಗಲಕೋಟೆ-3 ಪ್ರಕರಣಗಳು, ಬೆಳಗಾವಿ, ದಾವಣಗೆರೆ, ಮೈಸೂರಿನಿಂದ ತಲಾ ಒಂದು ಪ್ರಕರಣಗಳು, ತುಮಕೂರು-1 ವರದಿಯಾಗಿವೆ‌.. ಇಂದು 4892 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಕರ್ನಾಟಕದಲ್ಲಿ ಕೋವಿಡ್ ಬೆಳವಣಿಗೆ ಗತಿ ಶೇ.1.25% :

ಕಳೆದ ಐದು ದಿನಗಳಲ್ಲಿ 60 ಪ್ರಕರಣಗಳು ಖಚಿತಗೊಂಡಿದ್ದು, 64 ಪ್ರತ್ಯೇಕ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಹಿಂತಿರುಗಿದ್ದಾರೆಂಬ ಮಾಹಿತಿ ಸಚಿವ ಸುರೇಶ್ ಕುಮಾರ್ ನೀಡಿದ್ದು, ರಾಜ್ಯದಲ್ಲಿ ಕೋವಿಡ್ ಬೆಳವಣಿಗೆಯ ಗತಿ ಶೇ.1.25 ರಷ್ಟಿದೆ ಎಂದರು.

ಕೊರೊನಾ ಸೇವೆಯಲ್ಲಿರುವ ಸರ್ಕಾರಿ‌‌ ನೌಕರರಿಗೆ ಉಚಿತ ತಪಾಸಣೆ :

ಬೆಂಗಳೂರು ನಗರದಲ್ಲಿ ಕೋವಿಡ್-19 ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇಂದಿನಿಂದ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಯಲ್ಲಿ ತಪಾಸಣಾ ಅಭಿಯಾನವು ಪ್ರಾರಂಭವಾಗಲಿದೆ‌. ಅದೇ ರೀತಿ ಗುಣಮುಖರಾಗಿ ಹಿಂತಿರುಗಿರುವ ವ್ಯಕ್ತಿಗಳಿಗೆ ನಂತರದ ದಿನಗಳಲ್ಲಿ ಕ್ವಾರಂಟೈನ್ ಅನ್ನು ಯಾವ ರೀತಿಯಲ್ಲಿ ಅನುಸರಿಸಬೇಕೆಂಬ ಬಗ್ಗೆ ಸಹ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯದ ಆರೋಗ್ಯ ಇಲಾಖೆ ಹೊರಡಿಸಿದೆ.

ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕಕ್ಕೆ :

ಹೊರದೇಶಗಳಲ್ಲಿ ಸಂಕಷ್ಟದಲ್ಲಿರುವ 10,823 ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಸಮನ್ವಯ ಕಾರ್ಯದ ನಿರ್ದೇಶನ ನೀಡಿದೆ. ಈ ಪೈಕಿ 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,284 ವೃತ್ತಿಪರ ಕೆಲಸ ಮಾಡುವವರೂ‌ ಇದ್ದಾರೆ. ಪ್ರಧಾನವಾಗಿ ಕೆನಡಾ (328), ಅಮೆರಿಕ (927), ಅರಬ್ ದೇಶಗಳಿಂದ ಹಿಂತಿರುಗುತ್ತಿರುವ ವ್ಯಕ್ತಿಗಳನ್ನು ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಮಾಡಿ ಅವರ ದೇಹ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಅವಶ್ಯಕ‌ ಚಕಿತ್ಸೆ ಒದಗಿಸಲಾಗುವುದು.

For All Latest Updates

TAGGED:

ABOUT THE AUTHOR

...view details