ಬೆಂಗಳೂರು:ನಗರದ ಹೊಸೂರು ರಸ್ತೆಯ ಗೌಸಿಯಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಗೌಸಿಯಾ ಪಾಲಿಟೆಕ್ನಿಕ್ ಫಾರ್ ವುಮೆನ್ ಕಾಲೇಜಿನಲ್ಲಿ ನೌಕರರಿಗೆ 78 ಲಕ್ಷ ರೂ. ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಸುಭಾನ್ ಶರೀಫ್ ಎಂಬವರ ವಿರುದ್ಧ ಸುದ್ದುಗುಂಟೆ ಪಾಳ್ಯ ಠಾಣಾ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಗೌಸಿಯಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟ್ರಸ್ಟ್ ಅಧ್ಯಕ್ಷ ಡಾ.ಅಹ್ಮದ್ ಶರೀಫ್ ಸಿರಾಜ್ ನೀಡಿರುವ ದೂರಿನ ಆಧಾರದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಗೌಸಿಯಾ ಪಾಲಿಟೆಕ್ನಿಕ್ ಫಾರ್ ವುಮೆನ್ ಕಾಲೇಜಿನಲ್ಲಿ ಈ ಹಿಂದೆ 2013 ರಿಂದ 2018ರವರೆಗೆ ಗೌವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾಗಿದ್ದ ಸುಭಾನ್ ಶರೀಫ್ ಕಾಲೇಜನ್ನು ಸರ್ಕಾರದ ಅನುದಾನಿತ ಕಾಲೇಜ್ ಆಗಿ ಸರ್ಕಾರದಿಂದ ಅನುಮೋದನೆ ಪಡೆದು, ಇಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರ್ಕಾರದಿಂದ ಸಂಬಳ ಬರುತ್ತದೆ ಎಂದು ಸುಳ್ಳು ಹೇಳಿದ್ದರು. ಆದರೆ, 2013 ರಿಂದ 2016ರವರೆಗೆ ನೌಕರರಿಗೆ ಸಂಬಳವನ್ನೇ ಕೊಟ್ಟಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
'ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಮಗೆ ಆಪ್ತರು'