ಕರ್ನಾಟಕ

karnataka

ETV Bharat / state

ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಗರಣ: ಸಾವಿರಾರು ಜನರಿಂದ ಕೋಟ್ಯಂತರ ರೂ. ಪಡೆದು ಮಾಲೀಕ ಎಸ್ಕೇಪ್! - ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಿರುದ್ಧ ವಂಚನೆ ಪ್ರಕರಣ

ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಗರಣ ಬೆಳಕಿಗೆ ಬಂದಿದೆ. ಬೃಹತ್ ಬೆಂಗಳೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ.

Society Owner Escape
ಸೊಸೈಟಿ ಮಾಲೀಕ ಎಸ್ಕೇಪ್

By

Published : Sep 6, 2021, 7:03 PM IST

ಬೆಂಗಳೂರು: ಬೃಹತ್ ಬೆಂಗಳೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಸೊಸೈಟಿ ಮಾಲೀಕ ನೂರಾರು ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ಪರಾರಿಯಾಗಿದ್ದಾನೆ ಎಂದು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರತಿ

ನಗರದ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಘಟನೆ ವರದಿಯಾಗಿದ್ದು, ಶರೀಶ್ ಸುಬ್ರಾಯ ಹೆಗಡೆ ಎಂಬುವರ ಒಡೆತನದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಕಳೆದ ಕೆಲವು ದಿನಗಳಿಂದ ಬೀಗ ಹಾಕಲಾಗಿದೆ. ಮಾಲೀಕ ಹಾಗೂ ಸಿಬ್ಬಂದಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಆತಂಕದಲ್ಲಿದ್ದಾರೆ.

ಮೊದಲು ಜನರ ನಂಬಿಕೆ ಗಳಿಸಿದ್ದ ಸೊಸೈಟಿ ಗೋಲ್ಡ್ ಲೋನ್ ಕೂಡ ಕೊಡುತ್ತಿತ್ತು. ಇದೀಗ ಜನರ ಹಣ ಮತ್ತು ಚಿನ್ನದ ಸಮೇತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಹಣ ಕಟ್ಟಿಸಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಟ್ಟಿರುವ ಚೆಕ್​​​ಗಳು ಕೂಡ ಬೌನ್ಸ್ ಆಗಿವೆ ಎನ್ನಲಾಗುತ್ತಿದೆ.

ಸುಮಾರು 3 ಸಾವಿರಕ್ಕೂ ಅಧಿಕ ಜನರಿಂದ ಹಣ ಕಟ್ಟಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಇದೀಗ ನ್ಯಾಯಕ್ಕಾಗಿ ಸಾವಿರಾರು ಮಂದಿ ಹೂಡಿಕೆದಾರರು ಬಾಗಲಗುಂಟೆ ಪೊಲೀಸರ ಮೊರೆ ಹೋಗಿದ್ದಾರೆ.

ಓದಿ: ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಜೈ ಎಂದ ಸಚಿವ ವಿ ಸೋಮಣ್ಣ

ABOUT THE AUTHOR

...view details