ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರಿಗೆ ಇನ್ಮೇಲೆ 4ನೇ ಶನಿವಾರವೂ ರಜೆ: ಸರ್ಕಾರ ತೀರ್ಮಾನ

ಸರ್ಕಾರಿ ನೌಕರರಿಗೆ 2ನೇ ಶನಿವಾರದ ಜೊತೆಗೆ ತಿಂಗಳ 4ನೇ ಶನಿವಾರವೂ ರಜೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಸರ್ಕಾರಿ ನೌಕರರಿಗೆ ಬಂಪರ್​ ಗಿಫ್ಟ್​​ : ಇನ್ಮೇಲೆ ನಾಲ್ಕನೇ ಶನಿವಾರವೂ ರಜೆ

By

Published : Jun 6, 2019, 8:23 PM IST

ಬೆಂಗಳೂರು :ಸರ್ಕಾರಿ ನೌಕರರಿಗೆ ಎರಡನೇ ಶನಿವಾರದ ಜೊತೆಗೆ ತಿಂಗಳ ನಾಲ್ಕನೇ ಶನಿವಾರವೂ ರಜೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ, ಆರನೇ ವೇತನ ಆಯೋಗದ ಶಿಫಾರಸು ಆಧರಿಸಿ ತಿಂಗಳ ನಾಲ್ಕನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ನೀಡಲು ಘೋಷಿಸಲಾಗಿದೆ ಎಂದರು.

ಸಚಿವ ಕೃಷ್ಣಭೈರೇಗೌಡ

ಕರ್ನಾಟಕ ಹೊರತುಪಡಿಸಿದಂತೆ 17 ರಾಜ್ಯಗಳಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಈ ನಿಯಮ ಜಾರಿಗೆ ತರಲಾಗುವುದು. ಇದು ಎಲ್ಲಾ ಸರ್ಕಾರಿ ಕಚೇರಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಪ್ರಸಿದ್ಧ ವ್ಯಕ್ತಿಗಳ ಜಯಂತಿಗಳ ರಜೆ ಕಡಿತಗೊಳಿಸಿದರೆ, ಸಮುದಾಯಗಳ ಅಸಮಾಧಾನಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಪರ,ವಿರೋಧ ಚರ್ಚೆ ನಡೆದಿದ್ದು, ರಜೆ ಕಡಿತ ನಿರ್ಧಾರದಿಂದ ಸದ್ಯದ ಮಟ್ಟಿಗೆ ಸರ್ಕಾರ ಹಿಂದೆ ಸರಿದಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅನೇಕ ಜಯಂತಿಗಳ ಸಂಬಂಧ ಸರ್ಕಾರಿ ನೌಕರರಿಗೆ ರಜೆ ನೀಡಲಾಗುತ್ತಿದೆ. ಸಾರ್ವತ್ರಿಕ ರಜೆಗಳಿಗಿಂತ ಈ ಜಯಂತಿಗಳಿಗೆ ಅಧಿಕ ರಜೆ ಇರುವ ಹಿನ್ನೆಲೆಯಲ್ಲಿ ನಾಲ್ಕನೇ ಶನಿವಾರದ ರಜೆಯನ್ನು ಕಡಿತಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇತ್ತು. ಆರನೇ ವೇತನ ಆಯೋಗದ ಶಿಫಾರಸಿನಂತೆ ಜಯಂತಿಗಳನ್ನು ರದ್ದುಗೊಳಿಸುವ ಬಗ್ಗೆ ಪರಿಶೀಲನೆಗೆ ಕೃಷ್ಣಬೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ABOUT THE AUTHOR

...view details