ಕರ್ನಾಟಕ

karnataka

ETV Bharat / state

ಕರಂದ್ಲಾಜೆ, ಖೂಬಾ, ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ - ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ

ಒಟ್ಟು 43 ಮಂದಿ ನೂತನವಾಗಿ ಕೇಂದ್ರ ಸಚಿವ ಸಂಪುಟ ಸೇರಿದ್ದು, ಈ ಪೈಕಿ ರಾಜ್ಯದ ನಾಲ್ವರಿಗೆ ಮೋದಿ ಸಂಪುಟ ಸೇರುವ ಅವಕಾಶ ಲಭಿಸಿದೆ. ಇಂದು ಸಂಜೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ಕರಂದ್ಲಾಜೆ, ಖೂಬಾ, ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ
ಕರಂದ್ಲಾಜೆ, ಖೂಬಾ, ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ

By

Published : Jul 7, 2021, 4:49 PM IST

ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸ್ಥಾನ ದೊರೆತಿದೆ. ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ, ನಾಲ್ಕು ಸಚಿವ ಸ್ಥಾನಗಳು ರಾಜ್ಯಕ್ಕೆ ಒದಗಿಬಂದಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮೋದಿ ಸಂಪುಟ ಸೇರಿದ್ದಾರೆ.

ಇದನ್ನೂ ಓದಿ: ಕೇಂದ್ರ ಕ್ಯಾಬಿನೆಟ್​ ಪುನರ್​ರಚನೆ: ದೆಹಲಿಯತ್ತ ತೆರಳಿದ ಸಂಸದ ಭಗವಂತ ಖೂಬಾ

ಡಿವಿಎಸ್​ಗೆ ಕೊಕ್:

ಡಿ.ವಿ.ಸದಾನಂದ ಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ABOUT THE AUTHOR

...view details