ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ರಾಜ್ಯದ ನಾಲ್ಕು ದಿಕ್ಕಿನಿಂದ ರಥಯಾತ್ರೆಗೆ ಸಜ್ಜಾಗಿದೆ. ಅದಕ್ಕಾಗಿ ರಥಗಳು ಸನ್ನದ್ಧಗೊಂಡಿವೆ. ಬಿಜೆಪಿ ನಾಯಕರನ್ನು ಹೊತ್ತು ರಾಜ್ಯ ಸುತ್ತುವ ವಿಜಯ ಸಂಕಲ್ಪ ಯಾತ್ರೆ ಹೆಸರಿನ ಈ ರಥಗಳ ವಿಶೇಷದ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿರುವ ಬಿಜೆಪಿ ನಾಲ್ಕು ತಂಡಗಳಲ್ಲಿ ರಥಯಾತ್ರೆ ನಡೆಸಲಿದೆ. ಇದಕ್ಕಾಗಿ ಸಿದ್ಧಪಡಿಸಿರುವ ರಥಗಳನ್ನು ರಾಷ್ಟ್ರೀಯ ನಾಯಕರು ಉದ್ಘಾಟಿಸಲಿದ್ದಾರೆ.
ರಥದ ವಿಶೇಷತೆ:ಪರಿವರ್ತನಾ ಯಾತ್ರೆ, ಏಕತಾ ಯಾತ್ರೆ ಹಾಗು ರಥಯಾತ್ರೆ ನಂತರ ಈಗ ಕರ್ನಾಟಕದಲ್ಲಿ ಬಹುಮತದ ಸರ್ಕಾರ ತರಲು ನಾಲ್ಕು ರಥಯಾತ್ರೆ ಮಾಡಲಿದ್ದೇವೆ. ನಾಲ್ಕೂ ರಥಗಳಿಗಾಗಿ ಅಶೋಕ್ ಲೇಲ್ಯಾಂಡ್ ವಾಹನವನ್ನು ಪರಿವರ್ತಿಸಲಾಗಿದೆ. 30 ಅಡಿ ಉದ್ದ 8 ಅಡಿ ಅಗಲದ ವಾಹನ ಇದಾಗಿದೆ. ಭಾಷಣ ಮಾಡಲು ಕೆನೋಪಿ ರಚನೆ ಮಾಡಿದ್ದು, ನಾಲ್ಕು ಮೊಬೈಲ್ ಚಾರ್ಜರ್ ಅಳವಡಿಸಲಾಗಿದೆ. ರೋಡ್ ಶೋ ಮಾಡಲು ಪೂರಕವಾಗಿ ಮೈಕ್ ಇದೆ. ಒಂದು ಕಿಲೋಮೀಟರ್ ದೂರದವರೆಗೆ ಧ್ವನಿ ಕೇಳಲಿದೆ.
ನಾಲ್ಕು ಹಾರ್ನ್ಗಳನ್ನು ಕೆನೋಪಿ ಮೇಲೆ ಅಳವಡಿಸಲಾಗಿದೆ. ಬಸ್ಸಿನ ಒಳಗಡೆ ಏಳು ಆಸನ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ ಸಭೆಗೆ ವ್ಯವಸ್ಥೆ ಕಲ್ಪಿಸಿದ್ದು, ಯಾತ್ರೆ ವೇಳೆ ಸಣ್ಣಪುಟ್ಟ ಸಭೆಗಳನ್ನು ನಡೆಸಲಾಗುತ್ತದೆ. ಒಳಗಡೆಯೇ ಹೋಂ ಥಿಯೇಟರ್ ಇದೆ. 32 ಇಂಚು ಟಿವಿ ಇದೆ. ಚಾಲಕನ ಜೊತೆ ಮಾತನಾಡಲು ಇಂಟರ್ ಕಾಮ್ ವ್ಯವಸ್ಥೆ, ಜನರೇಟರ್, ಆಡಿಯೋ ಸಿಸ್ಟಂ, ಕ್ಯಾಮರಾಗಳು, ಎಲ್ಇಡಿ ಡಿಸ್ಲ್ಪೇ ಇದೆ. ಪಕ್ಷದ ಘೋಷ ವಾಕ್ಯವನ್ನು ಡಿಸ್ ಪ್ಲೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಪಕ್ಷದ ಪರವಾಗಿ ಗೀತೆಗಳ ರಚನೆ ಮಾಡಿದ್ದು, ರಥಯಾತ್ರೆ ವೇಳೆ ಗೀತೆಗಳ ಪ್ರಸ್ತುತಪಡಿಸಲಾಗುತ್ತದೆ. ರಥಯಾತ್ರೆ ವಾಹನ ಹೋಗುವ 15-30 ನಿಮಿಷ ಮೊದಲು ಒಂದು ವಾಹನ ಹೋಗಿ ರಥಯಾತ್ರೆ ಆಗಮಿಸುತ್ತಿರುವ ಮಾಹಿತಿ ನೀಡಲಿದೆ. ಒಟ್ಟು 8000 ಕಿಲೋಮೀಟರ್ ದೂರವನ್ನು ರಥಯಾತ್ರೆಯ ಬಸ್ ಗಳು ಸಂಚರಿಸಲಿವೆ. ಈ ವೇಳೆ 80 ರ್ಯಾಲಿಗಳನ್ನು ಆಯೋಜನೆ ಮಾಡಲಿದ್ದು, 75 ಸಭೆಗಳಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. 150 ರೋಡ್ ಶೋಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ರಥದಲ್ಲಿ ವಾಹನದಿಂದಲೇ ಭಾಷಣ ಮಾಡಲು ಹೈಡ್ರಾಲಿಕ್ ಸ್ಟೇಜ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ರಥಯಾತ್ರೆಯನ್ನು ಮಾರ್ಚ್ 1 ರಿಂದ ಮಲೆ ಮಹಾದೇಶ್ವರ ಬೆಟ್ಟದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟನೆ ಮಾಡಲಿದ್ದು, ಎರಡನೇ ತಂಡವನ್ನು ಮಾರ್ಚ್ 2 ರಂದು ನಂದಗಡದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಮೂರನೇ ರಥಯಾತ್ರೆ ಬಸವಕಲ್ಯಾಣ ಮತ್ತು ನಾಲ್ಕನೇ ರಥಯಾತ್ರೆ ತಂಡವನ್ನು ಬೆಂಗಳೂರಿನಲ್ಲಿ ಕೇಂದ್ರದ ನಾಯಕರು ಉದ್ಘಾಟನೆ ಮಾಡಲಿದ್ದಾರೆ.
ಮಾರ್ಚ್ 1 ರಿಂದ ಆರಂಭಗೊಳ್ಳಲಿರುವ ರಥಯಾತ್ರೆಗಳು ಮಾರ್ಚ್ 21-22ರೊಳಗೆ ಎಲ್ಲಾ 224 ಕ್ಷೇತ್ರ ಗಳಲ್ಲೂ ಸಂಚರಿಸಲಿದೆ. ಪ್ರತಿದಿನ ಬೆಳಿಗ್ಗೆ ರೋಡ್ ಶೋ ಮಾಡಿ ಅಲ್ಲೇ ಒಂದು ಸಭೆ ನಡೆಸಿ ಭಾಷಣ ಮಾಡಲಾಗುತ್ತದೆ. ಮಧ್ಯಾಹ್ನ ಮತ್ತೊಂದು ರೋಡ್ ಶೋ ಮಾಡಿ ಸಂಜೆ ಬೃಹತ್ ಸಮಾವೇಶ ನಡೆಸಲಾಗುತ್ತದೆ. ದಿನ ನಿತ್ಯವೂ ಇದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ಇರುತ್ತದೆ. ಅಂತಿಮವಾಗಿ ದಾವಣಗೆರೆಯಲ್ಲಿ ಮಹಾ ಸಮಾವೇಶ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶಕ್ಕೆ ಆಗಮಿಸಲಿದ್ದಾರೆ. ತಂಡಗಳ ವಿವರ:
ಮೊದಲ ತಂಡ:
ಈಶ್ವರಪ್ಪ
ಸೋಮಣ್ಣ
ನಾರಾಯಣ ಗೌಡ
ಸುನೀಲ್ ಕುಮಾರ್
ಶ್ರೀನಿವಾಸ ಪ್ರಸಾದ್
ಎನ್.ಮಹೇಶ್
ಎರಡನೇ ತಂಡ: