ಕರ್ನಾಟಕ

karnataka

ETV Bharat / state

ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಮಾರಾಟ: ಬೆಂಗಳೂರಿನಲ್ಲಿ ನಾಲ್ವರ ಬಂಧನ - ಬೆಂಗಳೂರು ಪೊಲೀಸ್​

ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

Remdesivir
ರೆಮ್ ಡಿಸಿವರ್ ಮಾರಾಟ

By

Published : May 6, 2021, 10:42 AM IST

ಬೆಂಗಳೂರು:ಕೊರೊನಾ ಜೀವರಕ್ಷಕ ಎನ್ನಲಾಗುವ ರೆಮ್​ಡಿಸಿವಿರ್ ಚುಚ್ಚುಮದ್ದುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಜ ಸೇರಿದಂತೆ‌ ಒಟ್ಟು ನಾಲ್ವರನ್ನು ಬಂಧಿಸಲಾಗಿದ್ದು, 12 ರೆಮ್​ಡಿಸಿವಿರ್ ಇಂಜೆಕ್ಷನ್​ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ‌ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದ ರೆಮ್ ಡಿಸಿವಿರ್ ಔಷಧ

ಆರೋಪಿಗಳು ಆಸ್ಪತ್ರೆಗೆ ಬರುವ ರೆಮ್​ಡಿಸಿವಿರ್ ಇಂಜೆಕ್ಷನ್​ಗಳನ್ನು ಅಕ್ರಮವಾಗಿ ತೆಗೆದಿರಿಸಿಕೊಂಡು ಕೊರೊನಾ ರೋಗಿಗಳ ಕುಟುಂಬಸ್ಥರನ್ನು ಸಂಪರ್ಕಿಸಿ ಸಾವಿರಾರು ರೂಪಾಯಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯ ದಾರಿ ಕಂಡುಕೊಂಡಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದೆ.

ಕಳೆದ 20 ದಿನಗಳ ಅಂತರದಲ್ಲಿ ಇದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 50ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

ABOUT THE AUTHOR

...view details