ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಚಿಕನ್ ತರಲು ಹೋಗಿದ್ದ ವ್ಯಕ್ತಿಗೆ ಚಾಕು ಇರಿತ: ನಾಲ್ವರ ಬಂಧನ - ಚಾಕು ಇರಿದ ಪ್ರಕರಣ

ಬೆಂಗಳೂರಲ್ಲಿ ಚಾಕು ಇರಿತ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಚಾಕು ಇರಿತ
ಚಾಕು ಇರಿತ

By

Published : Oct 15, 2022, 10:40 AM IST

ಬೆಂಗಳೂರು:ಚಿಕನ್ ತರಗು ಹೋಗಿದ್ದ ವ್ಯಕ್ತಿಗೆ ಕುಡಿದ ಮತ್ತಿನಲ್ಲಿ ಚಾಕು ಇರಿದ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರೋಹಿತ್, ಗೌಸಿದ್ದಿನ್, ಮಂಜುನಾಥ್ ಮತ್ತು ಭಾಗೇಶ್ ಕೊಡಿಗೇಹಳ್ಳಿ ಬಂಧಿತ ಆರೋಪಿಗಳು.

ಹಲ್ಲೆಗೊಳಗಾದ ಅಶ್ವತ್ಥ್ ಕುಮಾರ್ ಮೂಲತಃ ಹಾಸನದವರು. ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ತಿಂಗಳು 9ರ ಭಾನುವಾರ ಸಂಜೆ 5.30 ಕ್ಕೆ ಚಿಕನ್ ತರಲು ಮನೆಯಿಂದ ಹೊರ ಬಂದಿದ್ದರು. ದೇವಿನಗರ ಬಸ್ ನಿಲ್ದಾಣ ಹತ್ತಿರದ ಶ್ರೀಜಾ ಬೇಕರಿ ಬಳಿ ಬರ್ತಿದ್ದಾಗ ಅಲ್ಲೇ ಇದ್ದ ಬಾರ್​​ನಲ್ಲಿ ಕುಡಿದು ಟೈಟಾಗಿದ್ದ ಇಬ್ಬರು ರಸ್ತೆಯಲ್ಲಿ ಓಡಾಡೋರಿಗೆಲ್ಲ ಬೈಯುತ್ತಿದ್ದರು. ಹಾಗೆ ಅಶ್ವತ್ಥ್ ಕುಮಾರ್​ಗೂ ಬೈದಿದ್ದರು. ಇದನ್ನು ಅಶ್ವತ್ಥ್ ಕುಮಾರ್ ಪ್ರಶ್ನಿಸಿದ್ದರು. ಇಷ್ಟಕ್ಕೆ ರೊಚ್ಚಿಗೆದ್ದ ಆರೋಪಿಗಳು, ಅಶ್ವತ್ಥ್ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಫೋನ್ ಮಾಡಿ ಮತ್ತಿಬ್ಬರನ್ನ ಕರೆಸಿ ಹಿಗ್ಗಾಮುಗ್ಗಾ ರಸ್ತೆಯಲ್ಲಿಯೇ ಥಳಿಸಿದ್ದರು.

ಬಳಿಕ ರೋಹಿತ್ ಚಾಕು ತೆಗೆದು ಅಶ್ವತ್ಥ್ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದರು. ಗಾಯಗೊಂಡ ಅಶ್ವತ್ಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿ ಕೊಡಿಗೆಹಳ್ಳಿ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

(ಓದಿ: ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ: ಭಾರತೀಯ ವಿದ್ಯಾರ್ಥಿಗೆ 11 ಬಾರಿ ಚಾಕು ಇರಿತ)

ABOUT THE AUTHOR

...view details