ಕರ್ನಾಟಕ

karnataka

ETV Bharat / state

3 ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರೆಷ್ಟು.?: ಸರ್ಕಾರ ಕೈಗೊಂಡ ಕ್ರಮಗಳೇನು..?

ಕಳೆದ ಮೂರು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಗಮನಿಸಿದರೆ ನಿಜಕ್ಕೂ ಅಚ್ಚರಿ ಉಂಟಾಗುತ್ತದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಬರೋಬ್ಬರಿ 2,569. 2018 -19 ನೇ ಸಾಲಿನ ಅಂತ್ಯಕ್ಕೆ ಹೋಲಿಸಿದಾಗ ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಐದನೇ ಸ್ಥಾನದಲ್ಲಿದೆ.

former-sucide-karnataka-actions-taken-by-the-government-story
ಮೂರು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರೆಷ್ಟು.?, ಸರ್ಕಾರ ಕೈಗೊಂಡ ಕ್ರಮಗಳೇನು..?

By

Published : Oct 10, 2020, 7:40 PM IST

Updated : Oct 10, 2020, 9:20 PM IST

ಬೆಂಗಳೂರು:ರಾಜ್ಯದಲ್ಲಿ ರೈತರಿಗೆ ವಿಶೇಷ ಸವಲತ್ತು ನೀಡಿಕೆ, ರಸಗೊಬ್ಬರ ಪೂರೈಕೆ ಹಾಗೂ ಸಾಲಮನ್ನಾದ ಹೊರತಾಗಿಯೂ ರೈತರ ಆತ್ಮಹತ್ಯೆ ಪ್ರಕರಣ ನಿರೀಕ್ಷಿತ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಾರದಿರುವುದು ಸರ್ಕಾರಕ್ಕೆ ತೀವ್ರ ತಲೆಬಿಸಿ ಉಂಟು ಮಾಡಿದೆ.

3 ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರೆಷ್ಟು.?: ಸರ್ಕಾರ ಕೈಗೊಂಡ ಕ್ರಮಗಳೇನು..?

2018ರಲ್ಲಿ ಅಧಿಕಾರ ಮುಗಿಸಿದ ಸಿದ್ದರಾಮಯ್ಯ ಖುದ್ದು ಹಣಕಾಸು ಸಚಿವರಾಗಿದ್ದು, ಚುನಾವಣಾ ಹೊಸ್ತಿಲಲ್ಲಿ ಪ್ರತಿ ರೈತರ 50,000 ರೂಪಾಯಿ ಸಾಲ ಮನ್ನಾ ಘೋಷಣೆ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಮುಖ್ಯಮಂತ್ರಿ ಎಚ್​​ಡಿ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ, 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಘೋಷಿಸಿದರು.

ಇದಾದ ಬಳಿಕ ಅಧಿಕಾರಕ್ಕೆ ಬಂದ ಬಿಎಸ್ ಯಡಿಯೂರಪ್ಪ ಸರ್ಕಾರ ಕೂಡ ಸಾಲಮನ್ನಾ ಘೋಷಿಸಿದೆ. ಅಲ್ಲದೇ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ. ಇದೆಲ್ಲದರ ನಡುವೆ ಕೇಂದ್ರ ಸರ್ಕಾರ ಕೂಡ ಅಗತ್ಯ ರಸಗೊಬ್ಬರ ಹಾಗೂ ಬೀಜಗಳ ಪೂರೈಕೆ ಮಾಡಿದೆ. ಹೊಸ ಸಾಲ ಸೌಲಭ್ಯ ಸವಲತ್ತುಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಿವೆ. ಬಲವಂತವಾಗಿ ಸಾಲ ವಸೂಲಿ ಮಾಡಬೇಡಿ ಎಂದು ಬ್ಯಾಂಕುಗಳಿಗೂ ಸರ್ಕಾರ ಸೂಚನೆ ನೀಡಿದೆ. ಆದರೆ ಇದ್ಯಾವುದು ರೈತರ ಆತ್ಮಹತ್ಯೆಯನ್ನು ಸಂಪೂರ್ಣವಾಗಿ ತಡೆಯುವಲ್ಲಿ ಸಫಲವಾಗಿಲ್ಲ.

ಆತ್ಮಹತ್ಯೆ ಸರಣಿ:

ಕಳೆದ ಮೂರು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಗಮನಿಸಿದರೆ ನಿಜಕ್ಕೂ ಅಚ್ಚರಿ ಉಂಟಾಗುತ್ತದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಬರೋಬ್ಬರಿ 2,569. 2018 -19 ನೇ ಸಾಲಿನ ಅಂತ್ಯಕ್ಕೆ ಹೋಲಿಸಿದಾಗ ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಐದನೇ ಸ್ಥಾನದಲ್ಲಿದೆ. ಮೊದಲ 4 ಸ್ಥಾನಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ರಾಜ್ಯಗಳಿವೆ. ಇನ್ನು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿಗೆ ಕಾರಣ ಹುಡುಕಿದರೆ ಅತ್ಯಂತ ಪ್ರಮುಖವಾಗಿ ಗೋಚರಿಸುವುದು ಸಾಲಭಾದೆ. ಸಾಮರ್ಥ್ಯಕ್ಕೆ ಮೀರಿ ಸಾಲ ಮಾಡಿಕೊಂಡಿರುವುದು, ಪ್ರಕೃತಿ ವಿಕೋಪ, ಅತಿವೃಷ್ಟಿ ಹಾಗೂ ಅನಾವೃಷ್ಟಿ, ಬೆಳೆಯ ಬೆಲೆ ಕುಸಿತ, ಬೆಳೆ ಹಾನಿ, ಬರ ಇತ್ಯಾದಿ ಆಗಿದೆ.

ಪರಿಹಾರ ಹಾಗೂ ಆತ್ಮಸ್ಥೈರ್ಯ ವೃದ್ಧಿ:

ಆತ್ಮಹತ್ಯೆ ಮಾಡಿಕೊಂಡ ಮೃತ ರೈತರ ಕುಟುಂಬಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪರಿಶೀಲಿಸಿ, ದೃಢೀಕರಿಸಿ ಪ್ರಮಾಣ ಪತ್ರವನ್ನು ನೀಡಬೇಕು. 'ವಾಜಪೇಯಿ ಆರೋಗ್ಯಶ್ರೀ' ಯೋಜನೆಯಡಿ ಏಳು ಗಂಭೀರ ಕಾಯಿಲೆಗಳಿಗೆ ಸರ್ಕಾರಿ ಹಾಗೂ ನೋಂದಾಯಿತ ಅತ್ಯುತ್ತಮ ದರ್ಜೆಯ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮತ್ತು ಆರೈಕೆ ಸೌಲಭ್ಯವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಒದಗಿಸಬೇಕು. ಇನ್ನುಳಿದ ಇತರ ಪ್ರಾಥಮಿಕ ಹಾಗೂ ಪ್ರೌಢ ಸ್ವರೂಪದ ತಪಾಸಣೆ ಮತ್ತು ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಆರೋಗ್ಯ ಚಿಕಿತ್ಸಾ ಸೌಲಭ್ಯವನ್ನ ನೀಡಲು ಸರ್ಕಾರ ಆದೇಶಿಸಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಿಂದ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ವಾಣಿ 104 ಮೂಲಕ ವೈದ್ಯಕೀಯ ಕೌನ್ಸೆಲಿಂಗ್ ಸೌಲಭ್ಯವನ್ನು ಒದಗಿಸಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,485 ಅರ್ಜಿಗಳನ್ನು ಪಡೆದಿದ್ದು, ಅದರಲ್ಲಿ 1,370 ಮಂದಿ ಆತ್ಮಹತ್ಯೆ ಮಾಡಿಕೊಂಡ ಅರ್ಹ ಕುಟುಂಬದವರಿಗೆ ಸುವರ್ಣ ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ವಿತರಿಸಲಾಗಿದೆ. ತದನಂತರ ಈ ಯೋಜನೆಯನ್ನು 2018ರ ಮಾ.1 ರಿಂದ ಆರೋಗ್ಯ ಕರ್ನಾಟಕ ಯೋಜನೆ ಯನ್ನಾಗಿ ಪರಿವರ್ತಿಸಲಾಗಿದೆ. ಈ ಯೋಜನೆಯಡಿ ಬಿಪಿಎಲ್‌ ಹಂತದಲ್ಲಿ ಬರುವ ಎಲ್ಲ ವರ್ಗದ ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಮೂರು ವರ್ಷದ ಅಂಕಿಅಂಶ:

ಜಿಲ್ಲಾವಾರು ಆತ್ಮಹತ್ಯೆ ಮಾಡಿಕೊಂಡ ರೈತರ ಅಂಕಿ ಅಂಶ ಗಮನಿಸಿದರೆ, 2017- 18 ರಲ್ಲಿ ಒಟ್ಟು 1,320 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 272 ಪ್ರಕರಣವನ್ನು ತಿರಸ್ಕರಿಸಲಾಗಿದೆ ಆರೋಹ ಪ್ರಕರಣವೆಂದು 1,048 ಪ್ರಕರಣವನ್ನು ಸಮಿತಿ ತೀರ್ಮಾನಿಸಿದೆ. ಇದರಲ್ಲಿ ಎಲ್ಲ 1,048 ರೈತರ ಕುಟುಂಬಕ್ಕೂ ಪರಿಹಾರ ವಿತರಿಸಲಾಗಿದೆ. ಈ ಸಾಲಿನಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಮೈಸೂರಿನಲ್ಲಿ ದಾಖಲಾಗಿದ್ದು, 130 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದಂತೆ ಮಂಡ್ಯದಲ್ಲಿ 108, ಬೆಳಗಾವಿ 96, ಚಿಕ್ಕಮಗಳೂರು 92, ಹಾಸನ 94, ಬೀದರ್ 82, ದಾವಣಗೆರೆ 76, ಹಾವೇರಿ 75 ಸೇರಿದಂತೆ ಒಟ್ಟು 1320 ಪ್ರಕರಣಗಳು ದಾಖಲಾಗಿದ್ದವು.

2018 -19ರ ಅಂಕಿ ಅಂಶ ಗಮನಿಸಿದಾಗ 1075 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 213 ಪ್ರಕರಣಗಳನ್ನು ತಿರಸ್ಕೃತ ಗೊಳಿಸಿ 861 ಪ್ರಕರಣಗಳನ್ನು ಪರಿಗಣಿಸಲಾಗಿದೆ. ಎಲ್ಲ 861 ರೈತರ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಈ ಸಾಲಿನಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಬೆಳಗಾವಿಯಲ್ಲಿ ದಾಖಲಾಗಿದ್ದು, 105 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದಂತೆ ಹಾವೇರಿಯಲ್ಲಿ 80, ಮೈಸೂರಿನಲ್ಲಿ 81, ಕಲ್ಬುರ್ಗಿಯಲ್ಲಿ 76 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಬಹುದಾಗಿದೆ.

2019 -20 ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 908 ಆಗಿದ್ದು, ಇದರಲ್ಲಿ 122 ಪ್ರಕರಣವನ್ನು ತಿರಸ್ಕೃತ ಗೊಳಿಸಲಾಗಿದೆ. 660 ಪ್ರಕರಣಗಳನ್ನು ಅರ್ಹ ಪ್ರಕರಣಗಳು ಎಂದು ಸದ್ಯ ಪರಿಗಣಿಸಲಾಗಿದೆ. 571 ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು, 89 ಪ್ರಕರಣಗಳಲ್ಲಿ ಪರಿಹಾರ ನೀಡಬೇಕಾಗಿದೆ. 127 ಪ್ರಕರಣಗಳು ಬಾಕಿ ಇದ್ದು, ಇದನ್ನು ತೀರ್ಮಾನಿಸಬೇಕಾಗಿದ್ದು 42 ಪ್ರಕರಣಗಳಲ್ಲಿ ಎಫ್ಎಸ್ಎಲ್ ವರದಿಗಾಗಿ ಕಾಯಲಾಗುತ್ತಿದೆ ಹಾಗೂ ಇತರೆ ದಾಖಲಾತಿಗಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 77 ಆಗಿದೆ.

ಇಳಿಕೆಯಾಗುತ್ತಿರುವುದು ಗಮನಾರ್ಹ ಸಂಗತಿ:

ಮೂರು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರೆಷ್ಟು.?, ಸರ್ಕಾರ ಕೈಗೊಂಡ ಕ್ರಮಗಳೇನು..?

ರೈತರ ಆತ್ಮಹತ್ಯೆ ಪ್ರಕರಣಗಳು ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಸರ್ಕಾರ ಕೈಗೊಂಡ ಕ್ರಮದ ಜೊತೆ ಕೇಂದ್ರ ಸರ್ಕಾರ ನೀಡಿರುವ ಸವಲತ್ತುಗಳನ್ನು ಆಧರಿಸಿ ಹೇಳುವುದಾದರೆ, ರೈತರಿಗೆ ಸಹ ಕಷ್ಟ ಅನುಕೂಲ ಸವಲತ್ತು ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆ ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಪ್ರಕರಣ ಗಣನೀಯವಾಗಿ ಕಡಿಮೆಯಾಗುತ್ತಿದೆ. 2018ರಲ್ಲಿ ಸಾವಿರದಷ್ಟಿದ್ದ ರೈತರ ಆತ್ಮಹತ್ಯೆ ಪ್ರಕರಣ 2019ರಲ್ಲಿ 860 ಕುಸಿದಿದೆ. 2020ರಲ್ಲಿ ಈ ಪ್ರಮಾಣ 660 ಕ್ಕೆ ಇಳಿದಿರುವುದು ಗಮನಿಸಬಹುದಾಗಿದೆ. ರೈತರಲ್ಲಿ ಒತ್ತಡ ಕಡಿಮೆ ಮಾಡಿ ಜೀವನೋತ್ಸಾಹ ಹೆಚ್ಚಳ ಮಾಡುವಂತಹ ಕ್ರಮಗಳನ್ನು ಕೈಗೊಂಡಿರುವುದು ಪ್ರಗತಿಗೆ ಕಾರಣ. ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳದ ರೈತರನ್ನು ಹೊಂದಿರುವ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗುವ ನಿಟ್ಟಿನಲ್ಲಿ ಸಾಗಿದ್ದೇವೆ ಎಂದಿದ್ದಾರೆ.


Last Updated : Oct 10, 2020, 9:20 PM IST

ABOUT THE AUTHOR

...view details