ಕರ್ನಾಟಕ

karnataka

ETV Bharat / state

'ರಾಜಕಾರಣಕ್ಕೆ ಬರ್ತಾರೆಂದು ಜಯಪ್ರಕಾಶ್ ನಾರಾಯಣ್ ದಂಪತಿ ಮಕ್ಕಳು ಮಾಡಿಕೊಳ್ಳಲಿಲ್ಲ' - ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 95 ನೇ ಜನ್ಮದಿನಾಚರಣೆ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 95ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಚಿತ್ರಕಲಾ ಪರಿಷತ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್  ಹೇಳಿಕೆ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ

By

Published : Aug 29, 2021, 4:23 PM IST

Updated : Aug 29, 2021, 5:15 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರದ್ದು ಮೌಲ್ಯಯುತ ರಾಜಕಾರಣ. ತಮ್ಮ ಜೀವನದುದ್ದಕ್ಕೂ ಅವರು ಈ ಮೌಲ್ಯವನ್ನು ಕಾಪಾಡಿಕೊಂಡು ಬಂದಿದ್ದರು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊಂಡಾಡಿದರು.

ಕುಟುಂಬ ರಾಜಕಾರಣದ ಬಗ್ಗೆ ವ್ಯಾಖ್ಯಾನ ಮಾಡಿದ ರಮೇಶ್ ಕುಮಾರ್, ಜಯಪ್ರಕಾಶ್ ನಾರಾಯಣ್ ಮದುವೆ ಆಗಿದ್ರೂ, ನಮಗೆ ‌ಸಂತಾನ ಹುಟ್ಟಿದ್ರೆ ರಾಜಕಾರಣಕ್ಕೆ ಬರ್ತಾರೆ. ಹಾಗಾಗಿ ಮಕ್ಕಳು ಬೇಡ ಅಂತ ಶಪಥ ಮಾಡಿದ್ದರು. ಅವರ ಧರ್ಮಪತ್ನಿ ಪ್ರತಿಭಾ ಕೂಡ ಈ ವಿಚಾರಕ್ಕೆ ಬದ್ದರಾಗಿದ್ದರು. ಅವರ ದಾರಿಯಲ್ಲಿ ‌ನಡೆದವರು ಹೆಗಡೆಯವರು. ಹೆಗಡೆಯವರಿಗೆ ಮಕ್ಕಳಿದ್ದಾರೆ ನಿಜ, ಆದ್ರೆ ಯಾರನ್ನೂ ರಾಜಕೀಯದಲ್ಲಿ ಬೆಳೆಸಲಿಲ್ಲ. ಹಾಗಾಗಿ ರಾಮಕೃಷ್ಣ ಮೌಲ್ಯವನ್ನು ಈಗಲೂ ನೆನೆಯುತ್ತೇವೆ ಎಂದರು.

ರಾಜಕಾರಣಿಗೆ ಹೃದಯ ಇರಬೇಕು. ಅದು ಇಲ್ಲದೆ ಹೋದರೆ ಅವರು ಇದ್ದು ವೇಸ್ಟ್. ಚಾಮರಾಜನಗರದಲ್ಲಿ ನಡೆದ ಘಟನೆ ಉಲ್ಲೇಖಿಸಿದ ರಮೇಶ್ ಕುಮಾರ್, ನಾಯಿ ಸತ್ತರೆ ಮೂರು ದಿನ ಅಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಕಾಲೆಳೆದರು.

ಅಷ್ಟು ಜನರು ಸತ್ತರೂ ಯಾರೂ ಕೂಡ‌ ನೋಡಲಿಲ್ಲ. ಎರಡು ದಿನ ಮಾತ್ರ ಘಟನೆ ‌ಬಗ್ಗೆ ಮಾತನಾಡಿದರು. ಆ ಬಳಿಕ ಘಟನೆ ಮರತೆೇ ಬಿಟ್ಟರು. ಇದು ರಾಜಕಾರಣಿಗಳ ಮೌಲ್ಯವನ್ನು ಪ್ರಶ್ನೆ ಮಾಡುತ್ತೆ. ಯಡಿಯೂರಪ್ಪ ಹಣ ಕೊಟ್ರೆ ಸಾಕಾಗಲ್ಲ. ಅವರ ಬದುಕಿಗೆ ಆಸರೆಯಾಗಿದ್ದವರನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಯಾವುದೇ ಪಕ್ಷದ ಚೌಕಟ್ಟಿಲ್ಲ ಎಂದರು.

ರಾಮಕೃಷ್ಣ ಹೆಗಡೆ ನನಗೆ ಆತ್ಮೀಯರಾಗಿರಲಿಲ್ಲ. ನಾನು ಯಾವುದೇ ಸುಳ್ಳು ಹೇಳಲ್ಲ. ನಾಣಯ್ಯ ನಾವು ಸ್ನೇಹಿತರು. ನಾನು ಹೆಚ್ಚು ಹೆಗಡೆ ಜೊತೆ ಮಾತನಾಡುತ್ತಿರಲಿಲ್ಲ. ನಾಣಯ್ಯ ಅವರಿಗೆ ಹೆಗಡೆ, ನಿಮ್ಮ ಸ್ನೇಹಿತನಿಗೆ ಊಟ ಮಾಡಿ‌ಸಿಯೇ ಕಳುಹಿಸುತ್ತೇನೆ ಎಂದ ಹೇಳಿದ್ದರು. ಅಂತಹ ಮೌಲ್ಯವನ್ನು ಹೆಗಡೆ ಹೊಂದಿದ್ದರು. ನನ್ನ ಹೆಂಡತಿ ಹೇಳ್ತಾ ಇದ್ದಳು, ನಿಮಗೆ ಕಾಂಟರ್ವಸಿ ಇಲ್ಲದೆ ಇದ್ರೆ ಬದುಕೋಕೆ ಆಗಲ್ಲಾ ಅಲ್ವ ಅಂತ. ನಾನು ಹೇಳಿದ್ದೆ ಕಾಂಟರ್ವಸಿ ಇಲ್ಲದೆ ಇದ್ರೆ‌ ಊಟ ಸೇರಲ್ಲ ಅಂತ ವಾದ ಮಾಡಿದ್ದೆ ಎಂದರು.

ಅರಸು ಹಾಗೂ ಹೆಗೆಡೆಯವರು ಮೌಲ್ಯವನ್ನು ಕಾಪಾಡಿಕೊಂಡ ರಾಜಕಾರಣಿಗಳಾದ ಕಾರಣಕ್ಕೆ ಇಷ್ಟ ಆಗ್ತಾರೆ. ಅವರ ಬಳಿ ಯಾರೇ ಸಹಾಯ ಕೇಳಿಕೊಂಡು ಬಂದಾಗ ಈಗಿನ ತರ ನನ್ನ ಮಗ ಬರಲಿ, ಸೊಸೆ ಬರಲಿ, ಕಡತಗಳು ಇಲ್ಲಿ ಇಡಿ ಅಂತ ಹೇಳ್ತಾ ಇರಲಿಲ್ಲ. ತಮ್ಮ ಕರ್ತವ್ಯವನ್ನು ಕಾನೂನಿನ‌ ಚೌಕಟ್ಟಿನಲ್ಲಿ‌ ಮಾಡ್ತಾಯಿದ್ದರು. ನಿರ್ದೇಶಕ ಟಿ.ಎನ್.ಸೀತಾರಾಂ ನನಗೆ ಬಹಳ ತೊಂದರೆ ‌ಕೊಟ್ಟಿದ್ದಾರೆ. ಆದ್ರೂ ಆತ್ಮೀಯರಾಗಿ ಉಳಿದಿದ್ದಾರೆ ಎಂದರು.

ಎಲ್ಲರೂ ಹೊಗಳುವವರು ಬರ್ತಾರೆ. ನಿನ್ನ ತರಹ ತಪ್ಪು ಹೇಳೋಕೆ ಯಾರು ಬರಲ್ಲ. ನೀನೂ ಬಂದು ಭೇಟಿ ‌ಮಾಡ್ತಾ ಇರೂ ಅಂತ ಹೆಗಡೆ ನನಗೆ ಹೇಳುತ್ತಿದ್ದರು. ನಾನು ಬರೋಕೆ ರೆಡಿ ಸರ್, ಆದ್ರೆ ಜನರು ಇರ್ತಾರೆ. ಯಾವಾಗ ನೋಡಿದ್ರು ರಷ್ ಇರುತ್ತೆ ಅಂತ ಹೇಳಿದ್ದೆ. ಹೆಗಡೆ ಅವರನ್ನು ಬಹಳ ಜನರು ಬಳಸಿಕೊಂಡ್ರು. ಅನೇಕ ಲಾಭವನ್ನು ‌ಮಾಡಿಕೊಂಡ್ರು. ಆದ್ರೆ ಸತ್ತಾಗ ಮಾತ್ರ ಯಾರೂ ಬರಲಿಲ್ಲ ಎಂದರು.

ಇದನ್ನೂ ಓದಿ: ಜನತಾಪರಿವಾರದ ಬೇರು ಆಳವಾಗಿ ಬೇರೂರಲು ರಾಮಕೃಷ್ಣ ಹೆಗಡೆ ಕಾರಣ: ಸಿಎಂ ಬೊಮ್ಮಾಯಿ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಚಾರ ಪ್ರಸ್ತಾಪಿಸಿದ ರಮೇಶಕುಮಾರ್, ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನನಗೆ ಆಹ್ವಾನ ಕೊಡೋಕೆ ಬಂದಿದ್ರು. ಆ ಸಮಯದಲ್ಲಿ ಯಡಿಯೂರಪ್ಪಗೆ ‌ಕಿವಿ‌ಮಾತು ಹೇಳಿದ್ದೆ. ಈ ಹಿಂದೆ ಆಡಳಿತವನ್ನು ‌ಮತ್ತೆ ಮರಕಳಿಸಬೇಡಿ. ಉತ್ತಮ ಆಡಳಿತ ನೀಡಿ ಎಂದಿದ್ದೆ. ಆಡಳಿತದಲ್ಲಿ ಇರುವೆಗಳು ಇದ್ರೆ‌ ಪರವಾಗಿಲ್ಲ, ಆದ್ರೆ ಇಲಿ, ಹೆಗ್ಗಣ ಇರಬಾರದು ಎಂದು ಯಡಿಯೂರಪ್ಪ ಮಕ್ಕಳ ಮೊಮ್ಮಕ್ಕಳ ಬಗ್ಗೆ ಲೇವಡಿ ಮಾಡಿದರು.

ಪೊಲೀಸರು ತಪ್ಪು ಮಾಡ್ತಾರೆ, ಅವರಿಗೆ ತಿಳಿ ಹೇಳಬೇಕು. ಅವರಿಗೆ ಬುದ್ದಿವಾದದ ಮಾತು ಹೇಳಬೇಕು. ಒಂದು ಜಿಲ್ಲೆಯಲ್ಲಿ ‌26 ಕಡೆ ವಾಹನ ನಿಲ್ಲಿಸುತ್ತಾರೆ. ಬರುವವರಿಗೆ ಹೋಗುವವರಿಗೆ ತೊಂದ್ರೆ ಆಗಲ್ಲ. ಪಾಪ ‌ಪೊಲೀಸ್ ತಪ್ಪಲ್ಲ ಅದು. ಮೇಲಿನ ಅಧಿಕಾರಿಗಳು ಆದೇಶ ಇರುತ್ತೆ. ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ.

ನಾನು ಊರಿಂದ ಬರುತ್ತಾ ಇದ್ದೆ. ನನ್ನ ಕಾರನ್ನ ಪೊಲೀಸ್ ಹಿಡಿದರು, ಆಮೇಲೆ ಬಿಟ್ರು. ಆದರೆ ಅಲ್ಲಿದ್ದ ವಾಹನ ಬಿಡ್ತಾ ಇರಲಿಲ್ಲ. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದಕ್ಕೆ ‌ನಾನು‌ ಆಕ್ರೋಶ ವ್ಯಕ್ತಪಡಿಸಿದೆ. ನನಗೆ ಒಂದು ಕಾನೂನು ಅವರಿಗೊಂದು ಕಾನೂನು ಅಂತ ಇದೆಯೇ? ಅದ್ರಲ್ಲಿ‌ ನಮ್ಮ ಮತದಾರರು ಇದ್ರೆ ಏನ್ ತಿಳಿದುಕೊಳ್ತಾರೆ. ಇವನು ಮಾತ್ರ ಹೋದ, ನಮ್ಮನ್ನು ಬಿಡಲಿಲ್ಲ ಅಂತ. ಹಾಗಾಗಿ ನಾನು ಧ್ವನಿ ಎತ್ತಿದ್ದೇನೆ. ಇದನ್ನು ದೊಡ್ಡದು ಮಾಡುವುದು ಬೇಡ ಎಂದರು. ಸಮಾರಂಭದಲ್ಲಿ ಡಾ.ಗೊ.ರು.ಚನ್ನಬಸಪ್ಪರಿಗೆ ರಾಮಕೃಷ್ಣ ಹೆಗಡೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Last Updated : Aug 29, 2021, 5:15 PM IST

ABOUT THE AUTHOR

...view details