ಕರ್ನಾಟಕ

karnataka

ETV Bharat / state

ಸುಪ್ರೀಂಕೋರ್ಟ್ ಅಭಿಪ್ರಾಯ ಕೇಂದ್ರದ ಸೊಕ್ಕಿನ ವರ್ತನೆಗೆ ಅಂಕುಶ ಹಾಕುವಂತಿದೆ: ದಿನೇಶ್ ಗುಂಡೂರಾವ್

ಕೃಷಿ ಕಾಯ್ದೆ ಕುರಿತಂತೆ ಸುಪ್ರಿಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಕೇಂದ್ರದ ಸೊಕ್ಕಿನ ವರ್ತನೆಗೆ ಅಂಕುಶ ಹಾಕುವಂತಿದೆ. ಕಾಯ್ದೆಗಳು ರೈತರಿಗೆ ಮಾರಕ ಎನ್ನುವ ವಿಚಾರ ಇಡೀ ದೇಶಕ್ಕೆ ತಿಳಿದಿದ್ದರೂ ಜಾರಿ ಮಾಡಲು ಸರ್ಕಾರದ ಹುನ್ನಾರವೇನು? ಕಾಯ್ದೆ ವಿಚಾರದಲ್ಲಿ ಮೊಂಡು ಹಠ ಬಿಟ್ಟು ರೈತಸ್ನೇಹಿಯಾಗಿ ನಡೆದುಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Former KPCC president Dinesh Gundurao
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್

By

Published : Jan 12, 2021, 7:37 AM IST

ಬೆಂಗಳೂರು:ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆ ಪ್ರಕ್ರಿಯೆ ನಿರಾಸೆ ತಂದಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ನಿಲುವನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೃಷಿ ಕಾಯ್ದೆ ಕುರಿತಂತೆ ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಕೇಂದ್ರದ ಸೊಕ್ಕಿನ ವರ್ತನೆಗೆ ಅಂಕುಶ ಹಾಕುವಂತಿದೆ. ಕಾಯ್ದೆಗಳು ರೈತರಿಗೆ ಮಾರಕ ಎನ್ನುವ ವಿಚಾರ ಇಡೀ ದೇಶಕ್ಕೆ ತಿಳಿದಿದ್ದರೂ ಜಾರಿ ಮಾಡಲು ಸರ್ಕಾರದ ಹುನ್ನಾರವೇನು? ಕಾಯ್ದೆ ವಿಚಾರದಲ್ಲಿ ಮೊಂಡು ಹಠ ಬಿಟ್ಟು ರೈತಸ್ನೇಹಿಯಾಗಿ ನಡೆದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಓದಿ:ಟೋಪಿ ಹಾಕುವ ಸ್ಕೀಂಗಳಿಗೂ, ಪಿಎಂ-ಕೇರ್ಸ್‌ಗೂ ವ್ಯತ್ಯಾಸವಿದೆಯೇ; ದಿನೇಶ್ ಗುಂಡೂರಾವ್

ರಾಷ್ಟ್ರ ರಾಜಧಾನಿಯಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ಕಾರಣಗಳಿಗೆ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾಕಷ್ಟು ದಿನದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕೇಂದ್ರ ಕೃಷಿ ಸಚಿವ ತೋಮರ್ ಅವರನ್ನು ಮುಂದಿಟ್ಟು 8 ಸಭೆಯನ್ನು ನಡೆಸಿದ್ದರೂ ಯಾವುದೇ ಫಲ ಕೊಟ್ಟಿಲ್ಲ. ರೈತರ ಸಮಸ್ಯೆಯನ್ನು ಪರಿಹರಿಸುವ ಆಶ್ರಯ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ನಿರಂತರವಾಗಿ ಆರೋಪ ಮಾಡುತ್ತಾ ಬಂದಿದ್ದು, ಇದೀಗ ದಿನೇಶ್ ಗುಂಡೂರಾವ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details