ಕರ್ನಾಟಕ

karnataka

ETV Bharat / state

ಗಲಭೆ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ

ಬೆಂಗಳೂರು ಗಲಭೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್​​ನನ್ನು ಸಿಸಿಬಿ ಅಧಿಕಾರಿಗಳು ಐದು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

-five-days
ಸಿಬಿ ಕಸ್ಟಡಿಗೆ

By

Published : Dec 4, 2020, 6:24 PM IST

ಬೆಂಗಳೂರು: ಗಲಭೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್​​ನನ್ನು ಸಿಸಿಬಿ ಅಧಿಕಾರಿಗಳು ಐದು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಜಾಕೀರ್​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ, ವಿಚಾರಣೆಗೆಂದು ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ.

ಕಳೆದ ಆಗಸ್ಟ್ 11ರಂದು ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಗೆ ಪರೋಕ್ಷ ಕುಮ್ಮಕ್ಕು ಹಾಗೂ‌ ಜನ ಸೇರಿಸಿದ ಆರೋಪ ಕೇಳಿ ಬರುತ್ತಿದ್ದಂತೆ ಮೂರು ತಿಂಗಳಿನಿಂದ ಜಾಕೀರ್ ನಾಪತ್ತೆಯಾಗಿದ್ದ. ಈತನ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ನಿರಂತರ ಹುಡುಕಾಟದ ಬಳಿಕ ಎರಡು ದಿನಗಳ ಹಿಂದೆ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.

ಗಲಭೆ ಸಂಬಂಧ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಜಾಕೀರ್​​ಗೆ ಈ ಹಿಂದೆ ಸಿಸಿಬಿ ನೋಟಿಸ್ ನೀಡಿತ್ತು‌‌. ವಿಚಾರಣೆಗೆ ಹಾಜರಾದ ವೇಳೆ ಇಬ್ಬರ ಮೊಬೈಲ್​​ಗಳನ್ನು ವಶಕ್ಕೆ ಪಡೆದುಕೊಂಡು ಸಿಸಿಬಿ ಪೊಲೀಸರು ರಿಟ್ರೈವ್​ಗಾಗಿ ಎಫ್​​ಎಸ್ಎಲ್ ಕಳುಹಿಸಿದ್ದರು. ರಿಟ್ರೈವ್ ವರದಿ ಬರುತ್ತಿದ್ದಂತೆ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದರು‌. ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ.

ABOUT THE AUTHOR

...view details