ಬೆಂಗಳೂರು:ಬಿಜೆಪಿ ಶಾಸಕರನ್ನು ಡಿ.ಕೆ ಶಿವಕುಮಾರ್ ಸೆಳೆಯುವುದರಲ್ಲಿ ಯಾವುದೇ ಅರ್ಥ ಇಲ್ಲ. ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆಪರೇಷನ್ ಹಸ್ತ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು.
ಬಿಜೆಪಿ ಶಾಸಕರನ್ನು ಡಿಕೆಶಿ ಸೆಳೆಯುವುದರಲ್ಲಿ ಯಾವುದೇ ಅರ್ಥ ಇಲ್ಲ, ಇಲ್ಲಿಂದ ಯಾರೂ ಹೋಗಲ್ಲ: ಬಿಎಸ್ವೈ ಟಾಂಗ್ - ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ
ಕಾಂಗ್ರೆಸ್ನ ಸ್ನೇಹಿತರು ಎತ್ತಿನಗಾಡಿ, ಸೈಕಲ್‌ನಲ್ಲಿ ವಿಧಾನಸೌಧಕ್ಕೆ ಬರುವುದಕ್ಕೆ ಮುನ್ನ ನಾವು ಬೈಕ್ ಕಾರಿನಲ್ಲಿ 140 ಜನ ವಿಧಾನಸೌಧಕ್ಕೆ ಬಂದು ಕುಳಿತಿರ್ತೆವೆ. ಆ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಬಿಎಸ್ ವೈ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅದು ಅವರ ವ್ಯರ್ಥ ಪ್ರಯತ್ನ, ಕಾಂಗ್ರೆಸ್ ಶಾಸಕರೇ ನಮ್ಮ ಜತೆ ಬರುತ್ತಾರೆ. ಕಾಂಗ್ರೆಸ್ ಶಾಸಕರು ಯಾರು ಎಂಬದು ನಿಮಗೆ ಸ್ವಲ್ಪ ದಿನದಲ್ಲೇ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ನ ಸ್ನೇಹಿತರು ಎತ್ತಿನಗಾಡಿ, ಸೈಕಲ್‌ನಲ್ಲಿ ವಿಧಾನಸೌಧಕ್ಕೆ ಬರುವುದಕ್ಕೆ ಮುನ್ನ ನಾವು ಬೈಕ್ ಕಾರಿನಲ್ಲಿ 140 ಜನ ವಿಧಾನಸೌಧಕ್ಕೆ ಬಂದು ಕುಳಿತಿರುತ್ತೇವೆ. ಆ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಟಾಂಗ್ ನೀಡಿದರು. ಕಾಂಗ್ರೆಸ್ ಅವರು ಕೂಡ ಅವರ ಪ್ರಯತ್ನ ಮಾಡ್ತಾರೆ. ಆದರೆ, ನಾವು 140 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಎಸ್ ವೈ ಹೇಳಿದರು.