ಕರ್ನಾಟಕ

karnataka

ETV Bharat / state

ರೇಖಾ ಕದಿರೇಶ್ ಹತ್ಯೆ ಪ್ರಕರಣ: ಪೊಲೀಸರಿಂದ ಬಂಧಿತರ ತೀವ್ರ ವಿಚಾರಣೆ; ಹಲವು ಅಚ್ಚರಿ ಮಾಹಿತಿ ಬಹಿರಂಗ - ರೇಖಾ ಕದಿರೇಶ್​ ಹತ್ಯೆ ಪ್ರಕರಣ

ರೇಖಾ ಕದಿರೇಶ್​ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಲ್ಲಿಯವರೆಗೆ ಏಳು ಆರೋಪಿಗಳ ಬಂಧನ ಮಾಡಲಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

Rekha Kadiresh murder
Rekha Kadiresh murder

By

Published : Jun 30, 2021, 2:52 PM IST

ಬೆಂಗಳೂರು:ಮಾಜಿ ಕಾರ್ಪೋರೇಟರ್​ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಈವರೆಗೆ 7 ಆರೋಪಿಗಳನ್ನ ಬಂಧನಕ್ಕೊಳಪಡಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಅನೇಕ ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿವೆ. ಕೊಲೆಯ ಲಾಭಶಾಲಿಗಳಿಂದ ಹಿಡಿದು ಕೊಲೆ ಮಾಡಿದವರವರೆಗೂ ಪ್ರತ್ಯೇಕ ಜವಾಬ್ದಾರಿ ವಹಿಸಲಾಗಿತ್ತು ಎಂದು ಆರೋಪಿಗಳು ಹೇಳಿಕೊಂಡಿದ್ದು, ತಾವು ನಿಭಾಯಿಸಿರುವ ಪಾತ್ರದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

ಮಾಲಾ ಮತ್ತು ಅರುಣ್ ಅಲಿಯಾಸ್ ಅರುಳ್, ರೇಖಾ ಹತ್ಯೆಯ ನಿರ್ಧಾರ ಮಾಡಿದವರು. ರೇಖಾ ಕೊಲೆಯಿಂದ ಹೆಚ್ಚು ಲಾಭ ಹೊಂದಿದ್ದು ಇವರಿಗೆ. ಇದಕ್ಕಾಗಿ ಬಳಸಿಕೊಂಡಿದ್ದು ಪೀಟರ್ ಹಾಗೂ ಸೂರ್ಯನನ್ನು ಎನ್ನುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಕದಿರೇಶ್ ಕಾಲದಿಂದಲೂ ನಂಬಿಕಸ್ಥರಾಗಿ ಗುರುತಿಸಿಕೊಂಡಿದ್ದ ಪೀಟರ್ ಮತ್ತು ಸೂರ್ಯನನ್ನು ರೇಖಾ ಹತ್ಯೆಗೆ ಬಳಸಿಕೊಂಡಿದ್ದು, ಇದೇ ಮಾಲಾ ಮತ್ತು ಅರುಣ್. ರೇಖಾ ಇಲ್ಲವಾದರೆ ಛಲವಾದಿಪಾಳ್ಯ ವಾರ್ಡ್ ನಮ್ಮ ಕೈ ಸೇರುತ್ತದೆ ಎನ್ನುವ ದುರುದ್ದೇಶ ಹೊಂದಿದ್ದರು. ಜತೆಗೆ ಮುಂದಿನ ಚುನಾವಣೆಯಲ್ಲಿ ತಮ್ಮ ಕುಟುಂಬಕ್ಕೆ ಪಟ್ಟ ಸಿಗತ್ತದೆ ಎಂದು ನಂಬಿದ್ದರು. ಇದೇ ಕಾರಣಕ್ಕೆ ನಾಲ್ಕು ತಿಂಗಳ ಹಿಂದೆ ಸಭೆ ಸೇರಿ ಕೊಲೆಗೆ ಪ್ಲಾನ್ ಹಾಕಿದ್ದರು. ಪೀಟರ್, ಸೂರ್ಯ ಇಬ್ಬರೇ ರೇಖಾ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿರಿ: ಕೊರೊನಾ ಲಸಿಕೆ ಪೂರೈಕೆ ಸಂಬಂಧ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರದಿಂದ ಹೊಸ ನೀತಿ

ಈ ಹಿಂದೆ ಕದಿರೇಶ್ ಜೊತೆಗೆ ಜೋಪಡಿ ರಾಜೇಂದ್ರನ ಕೊಲೆ ನಡೆಸಿದ್ದ ಪೀಟರ್ 2002ರಲ್ಲಿ ಜೈಲು ಸೇರಿದ್ದನು. ರೇಖಾ ತನಗೆ ಕದಿರೇಶ್​​ರಂತೆ ಸಹಕಾರ ನೀಡುತ್ತಿಲ್ಲ ಎನ್ನುವ ಕೋಪ ಕೂಡ ಇತ್ತು. ಹೀಗಾಗಿ ಮಾಲಾ ಮತ್ತು ಅರುಣ್ ಜೊತೆಗೆ ಸೇರಿ ಕೊಲೆಗೆ ತೀರ್ಮಾನ ಮಾಡಿದ್ದರು ಎನ್ನಲಾಗಿದೆ.

ಈ ಕೊಲೆಗೆ ಸಾಥ್ ನೀಡಿದ್ದು ಅಜಯ್, ಪುರುಷೋತ್ತಮ ಹಾಗೂ ಸ್ಟೀಫನ್. ಹತ್ಯೆಯ ದಿನ ಪೀಟರ್ ಹಾಗೂ ಸೂರ್ಯನಿಗೆ ಸಹಾಯ ಮಾಡಿದ್ದು ಸ್ಟೀಫನ್ ಮತ್ತು ಅಜಯ್ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೃತ್ಯಕ್ಕೆ ಯಾರೂ ಅಡ್ಡಿಪಡಿಸದಂತೆ ಸ್ಟೀಫನ್ ಮತ್ತು ಅಜಯ್ ಕಾರ್ಯನಿರ್ವಹಿಸಿದ್ದರು. ಜತೆಗೆ ಸಿಸಿ ಕ್ಯಾಮೆರಾಗಳನ್ನ ತಿರುಗಿಸುವ ಕೆಲಸ ಮಾಡಿದ್ದು ಪುರುಷೋತ್ತಮ್. ಪುರುಷೋತ್ತಮ್ ಕದಿರೇಶ್ ಕೊಲೆಗೆ ಪ್ರತೀಕಾರದ ಕೊಲೆಯಾದ ಶೋಭನ್ ಕೊಲೆ ಯಲ್ಲಿ ಭಾಗಿಯಾಗಿದ್ದನು.

ನಾಲ್ಕು ತಿಂಗಳ ಹಿಂದೆಯೇ ರೆಡಿಯಾಗಿತ್ತು ಹತ್ಯೆಯ ಸ್ಕೆಚ್:

ಸುಮಾರು ನಾಲ್ಕು ತಿಂಗಳ ಹಿಂದೆಯೇ ಹತ್ಯೆಗೆ ಸ್ಕೆಚ್ ರೆಡಿಯಾಗಿತ್ತು. ಆರೋಪಿಗಳ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಲಾಗಿತ್ತು. ಆರೋಪಿಗಳ ಮೇಲೆಯೇ ಅವಲಂಬಿತವಾಗಿದ್ದ ಕುಟುಂಬದವರಿಗೆ ನಿರ್ವಹಣೆಯ ಭರವಸೆಯನ್ನು ಮಾಲಾ ಅರುಳ್ ನೀಡಿದ್ದರು.

ABOUT THE AUTHOR

...view details