ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಯರು ಪೊಲೀಸ್​​​ ವಶಕ್ಕೆ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ವೀಸಾ ಮುಗಿದ ಬಳಿಕವೂ ಅಕ್ರಮವಾಗಿ ನೆಲೆಸಿದ್ದ ಸುಮಾರು 14 ವಿದೇಶಿಯರನ್ನು ಈಶಾನ್ಯ ವಿಭಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

foreigners-were-taken-into-police-custody-for-illegally-staying-in-bangalore
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಯರು ಪೊಲೀಸ್​​​ ವಶಕ್ಕೆ

By

Published : Dec 21, 2022, 8:29 PM IST

ಬೆಂಗಳೂರು :ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಈಶಾನ್ಯ ವಿಭಾಗದ ಪೊಲೀಸರು 14 ವಿದೇಶಿಯರನ್ನು ವಶಕ್ಕೆ ಪಡೆದಿದ್ದಾರೆ. ಈಶಾನ್ಯ ವಿಭಾಗದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ನೈಜೀರಿಯಾ, ತಾಂಜಾನಿಯಾ, ಕೀನ್ಯಾ, ಉಗಾಂಡ ಮೂಲದ ಒಟ್ಟು 9 ಪುರುಷರು ಹಾಗೂ ಐವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಉನ್ನತ ಶಿಕ್ಷಣ, ಉದ್ಯಮದ ಕಾರಣದಡಿ ವೀಸಾ ಪಡೆದು ಬಂದು ಅವಧಿ ಮುಗಿದ ಬಳಿಕವೂ ನೆಲೆ ನಿಂತಿದ್ದರು. ಸದ್ಯ ಆರೋಪಿಗಳನ್ನು ವಿದೇಶಿಗರ ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಈಶಾನ್ಯ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಅಕ್ರಮವಾಗಿ ಭಾರತ ಪ್ರವೇಶಿಸಿದ 14 ವಿದೇಶಿ ಪ್ರಜೆಗಳ ಬಂಧನ

ABOUT THE AUTHOR

...view details