ಕರ್ನಾಟಕ

karnataka

ETV Bharat / state

ಬೆಂಗಳೂರು: ಬಸವೇಶ್ವರ ಪುತ್ಥಳಿಗೆ ಅಮಿತ್ ಶಾ ಮಾಲಾರ್ಪಣೆ - Floral tributes to Basaveshwara statue in Bengaluru

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವ ಜಯಂತಿ ನಿಮಿತ್ತ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ಬಸವೇಶ್ವರ ಪುತ್ಥಳಿಗೆ ಅಮಿತ್ ಶಾ ಮಾಲಾರ್ಪಣೆ
ಬಸವೇಶ್ವರ ಪುತ್ಥಳಿಗೆ ಅಮಿತ್ ಶಾ ಮಾಲಾರ್ಪಣೆ

By

Published : May 3, 2022, 11:56 AM IST

ಬೆಂಗಳೂರು: ಇಂದು 889ನೇ ವಿಶ್ವ ಬಸವ ಜಯಂತ್ಯೋತ್ಸವ. ಬೆಳಗ್ಗೆ 10 ಗಂಟೆಗೆ ಬಸವೇಶ್ವರ ವೃತ್ತದಲ್ಲಿರುವ ಬಸವ ಪುತ್ಥಳಿ ಆವರಣದಲ್ಲಿ ಬಸವ ಸಮಿತಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಲಾರ್ಪಣೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಅಮಿತ್ ಶಾ ಅವರಿಗೆ ಬಸವಣ್ಣನ ಪುತ್ಥಳಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವ ಸಲ್ಲಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗು ಇತರರು ಈ ವೇಳೆ ಉಪಸ್ಥಿತರಿದ್ದರು.

ಕಾರ್ಯಕರ್ತರ ಜಯಘೋಷ: ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡಿದ್ದರು. ಪಕ್ಷದ ಧ್ವಜ ಹಿಡಿದು ಜಯಘೋಷಗಳನ್ನು ಮೊಳಗಿಸಿದರು. ಕಾರ್ಯಕರ್ತರಿಗೆ ನಿರಾಶೆ ಮಾಡದ ಅಮಿತ್ ಶಾ ಕಾರ್ಯಕರ್ತರು ಜಮಾಯಿಸಿದ್ದ ಸ್ಥಳಕ್ಕೆ ಮುಖಂಡರ ಜೊತೆ ತೆರಳಿ ಕೈಬೀಸಿದರು.

ಇದನ್ನೂ ಓದಿ:ಮಂಗಳೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

For All Latest Updates

TAGGED:

ABOUT THE AUTHOR

...view details