ಕರ್ನಾಟಕ

karnataka

ETV Bharat / state

ನಿರ್ಗಮಿತ ಪೊಲೀಸ್ ಆಯುಕ್ತರ ಅನುಪಸ್ಥಿತಿಯಲ್ಲಿ ಹೊಸ ಕಮೀಷನರ್ ಅಧಿಕಾರ ಸ್ವೀಕಾರ!

ಬೆಂಗಳೂರಿನವರೇ ಆದ ನೂತನ ಕಮೀಷನರ್ ಭಾಸ್ಕರ್‌ ರಾವ್ ಅಧಿಕಾರ ಸ್ವೀಕರಿಸಿದ್ದು, ಜನಸ್ನೇಹಿ ಪೊಲೀಸ್ ಎಂದು ಬಿಂಬಿಸದೆ ಪ್ರಾಮಾಣಿಕವಾಗಿ ಜನರ ಪರವಾಗಿ ಕೆಲಸ ಮಾಡಿ, ಮುಕ್ತ, ಪಾರದರ್ಶಕ ಆಡಳಿತ ನೀಡುವ ಆಶಯ ವ್ಯಕ್ತಪಡಿಸಿದ್ದಾರೆ.

ನೂತನ ಕಮೀಷನರ್ ಭಾಸ್ಕರ್‌ ರಾವ್

By

Published : Aug 2, 2019, 9:59 PM IST

ಬೆಂಗಳೂರು: ಇದೇ ಮೊದಲ ಬಾರಿಗೆ ನಿರ್ಗಮಿತ ನಗರ ಪೊಲೀಸ್ ಆಯುಕ್ತರೊಬ್ಬರ ಅನುಪಸ್ಥಿತಿಯಲ್ಲಿ ನೂತನ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್ ಅನುಪಸ್ಥಿತಿಯಲ್ಲಿ ಭಾಸ್ಕರ್‌ ರಾವ್ ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಶುಕ್ರವಾರ ರಾತ್ರಿ ಪದಗ್ರಹಣ ಮಾಡಿದ್ದಾರೆ.

ಪದಗ್ರಹಣ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಹೊಸ ಜವಾಬ್ದಾರಿ ನೀಡಿದ ಮುಖ್ಯಮಂತ್ರಿಗಳಿಗೆ ಅಭಾರಿಯಾಗಿದ್ದೇನೆ. ಬೆಂಗಳೂರು ನನಗೆ ಹೊಸದಲ್ಲ. 1970ರಿಂದ ಬೆಂಗಳೂರನ್ನು ನಾನು ಬಲ್ಲೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಓದಿ ಬೆಳೆದವನು ನಾನು. ಇಲ್ಲೇ ಹುಟ್ಟಿದ್ದೇನೆ. ಇಲ್ಲೇ ಸಾಯುತ್ತೇನೆ. ನಾನೇನು ಹೊರಗಿನಿಂದ ಬಂದವನಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ನಗರ, ಹೆಚ್ಚೆಚ್ಚು ಅಪರಾಧ ನಡೆಯದಂತೆ ಎಚ್ಚೆತ್ತುಕೊಳ್ಳಬೇಕಿದೆ. 1.30 ಕೋಟಿ ಜನರ ಸುರಕ್ಷತೆ ಜವಾಬ್ದಾರಿ ನೀಡಿದ ಸರ್ಕಾರಕ್ಕೆ ಅಭಿನಂದನೆ. ಕೇವಲ ಬಾಯಲ್ಲಿ ಮಾತ್ರ ಜನಸ್ನೇಹಿ ಪೊಲೀಸ್ ಎಂದು ಬಿಂಬಿಸದೆ ಪ್ರಾಮಾಣಿಕವಾಗಿ ಜನರ ಬಳಿ ಬೆರೆಯಬೇಕು. ನಗರದಲ್ಲಿ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಬೇಕು. ಇದಕ್ಕೆ ಸಾರ್ವಜನಿಕರ ಹಾಗೂ ಮಾಧ್ಯಮಗಳ ಸಹಕಾರ ಬೇಕಾಗಿದೆ ಎಂದರು.

ನೂತನ ಕಮೀಷನರ್ ಭಾಸ್ಕರ್‌ ರಾವ್

ಬೆಂಗಳೂರಿನಲ್ಲಿ ಹಫ್ತಾ ವಸೂಲಿ, ಗೂಂಡಾ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾಗಿದೆ. ಸ್ಚಚ್ಛ ಹಾಗೂ ಪ್ರಾಮಾಣಿಕತೆ ಆಡಳಿತ ನೀಡುವುದೇ ನನ್ನ ಗುರಿ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬಂದಿರುವವರಿಗೂ ಸುರಕ್ಷತೆ ನೀಡಬೇಕು. ನಾವು ಕನ್ನಡಿಗರು, ನಗರಕ್ಕೆ ಯಾರೇ ಬಂದರೂ ಸ್ವೀಕರಿಸುವ ಮನೋಭಾವವಿದೆ. ಬೆಂಗಳೂರು ಸುರಕ್ಷಿತ ನಗರ ಎಂದು ಮತ್ತೆ ಬಿಂಬಿಸಿಕೊಳ್ಳಬೇಕಿದೆ. ಮುಕ್ತ, ಪಾರದರ್ಶಕ ಆಡಳಿತ ನೀಡುವುದೇ ನನ್ನ ಮೊದಲ ಆದ್ಯತೆ. ಪೊಲೀಸ್ ಇಲಾಖೆಯಲ್ಲಿ ಸಮಸ್ಯೆಯಿದೆ. ಮೊದಲು ಅದನ್ನು ಹೋಗಲಾಡಿಸುವೆ. ವೈಟ್ ಕಾಲರ್ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಹೊಸ ಸವಾಲನ್ನು ಸ್ವೀಕರಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರ ಜೊತೆ ಚರ್ಚಿಸುತ್ತೇನೆ ಎಂದರು.

ಕಮೀಷರ್ ಕಚೇರಿ ಒಳಗೆ ಬಂದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಶಾಕ್ ಕಾದಿತ್ತು. ಕಚೇರಿಯ ಕಮೀಷನರ್ ಆಸನದಲ್ಲಿ ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಇರಲಿಲ್ಲ. ಅಲೋಕ್ ಕುಮಾರ್‌ಗಾಗಿ ಐದು ನಿಮಿಷಗಳ ಕಾಲ ನೂತನ ಆಯುಕ್ತರು ಕಾದಿದ್ದಾರೆ. ಆದರೂ ಅವರು ಬರಲೇ ಇಲ್ಲ. ಕೊನೆಗೆ ಅಲೋಕ್ ಕುಮಾರ್ ಇಲ್ಲದ ಪರಿಣಾಮ ಕಮೀಷನರ್ ಆಸನದಲ್ಲಿ ಹೊಸ ಕಮೀಷನರ್ ಆದ ಭಾಸ್ಕರ್ ರಾವ್ ಕುಳಿತುಕೊಂಡು ಇದೇ ಮೊದಲ ಬಾರಿಗೆ ಸ್ವಯಂ ಅಧಿಕಾರ ಸ್ವೀಕರಿಸಿದ್ದಾರೆ.

ABOUT THE AUTHOR

...view details