ಬೆಂಗಳೂರು: ನಗರದ ಪ್ರಮುಖ ಮುಖ್ಯ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿ ಬ್ಯಾರಿಕೇಡ್ ಹಾಕಿ ತೀವ್ರ ತಪಾಸಣೆ ಮುಂದುವರೆಸಿದ್ದಾರೆ.
ಅಗತ್ಯ ಸೇವೆಗಳಿಗೆ ಮಾತ್ರ ಗುರುತಿನ ಚೀಟಿ ಪರಿಶೀಲಿಸಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಜೊತೆಗೆ ಔಷಧಿ ಸರಬರಾಜು ಮತ್ತು ಅಂಗಡಿಗಳಿಗೆ ಮಾರ್ಗಸೂಚಿಯಂತೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.
ನಗರದ ಪ್ರಮುಖ ಜನನಿಬಿಡ ಪ್ರದೇಶಗಳು ಖಾಲಿ ಖಾಲಿಯಾಗಿದ್ದು, ಅಂಗಡಿ- ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸಿಟಿ ಮಾರ್ಕೆಟ್ನಲ್ಲಿ ಮಾಸ್ಕ್ ಹಾಕದಿರುವ ಜನರಿಗೆ ಮಾರ್ಷಲ್ಗಳು ಫೈನ್ ಹಾಕಿದ್ದಾರೆ.
ವೀಕೆಂಡ್ ಕರ್ಫ್ಯೂ ಮೊದಲ ದಿನ ಯಶಸ್ವಿ ಆನ್ಲೈನ್ ಫುಡ್ ಒದಗಿಸುವವರನ್ನು ಸಹ ಚೆಕ್ ಮಾಡಿ ವಾಹನಗಳನ್ನು ಬಿಡಲಾಗುತ್ತಿದೆ. ಆಸ್ಪತ್ರೆಗಳಿಗೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ಕೂಡ ಸಂಬಂಧಿಸಿದ ದಾಖಲೆ ತೋರಿಸಿ ಹೋಗುತ್ತಿದ್ದಾರೆ.