ಕರ್ನಾಟಕ

karnataka

ETV Bharat / state

ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂಕಿ... ಲಕ್ಷಾಂತರ ಮೌಲ್ಯದ ಮೇವು ನಾಶ

ವ್ಯಯಕ್ತಿಕ ದ್ವೇಷದ ಹಿನ್ನಲೆ ಜಾನುವಾರುಗಳಿಗಾಗಿ ಸಂಗ್ರಹಿಸಿಡಲಾಗಿದ್ದ ಹುಲ್ಲಿನ ಬಣವೆಗೆ ಕಿಡಗೇಡಿಗಳು ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.

By

Published : Apr 7, 2019, 12:36 PM IST

ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂ

ನೆಲಮಂಗಲ: ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿಡಲಾಗಿದ್ದ ಹುಲ್ಲಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಲಕ್ಷಾಂತರ ಮೌಲ್ಯದ ಮೇವು ಬೆಂಕಿಗಾಹುತಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಕುಂಟಬೊಮ್ಮನಹಳ್ಳಿಯಲ್ಲಿ ಘಟನೆ ನಡೆದಿದೆ.

ರೈತ ಸಿದ್ದಯ್ಯ, ವೆಂಕಟಪ್ಪ ಎಂಬುವರಿಗೆ ಸೇರಿದ ಬಣವೆಗಳು ಸುಟ್ಟು ಬೂದಿಯಾಗಿವೆ. ವೈಯಕ್ತಿಕ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹುಲ್ಲು ಬಣವೆ ಸುಟ್ಟು ಬೂದಿಯಾಗಿದೆ.

ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂ

ಬೆಂಕಿ ತಗುಲಿದ ತಕ್ಷಣವೇ ಗ್ರಾಮಸ್ಥರು ಬೆಂಕಿ ನಂದಿಸಲು ಮುಂದಾದರೂ ಬೆಂಕಿಯ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರಿಂದ ಲಕ್ಷಾಂತರ ಮೌಲ್ಯದ ಮೇವು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details