ಕರ್ನಾಟಕ

karnataka

ETV Bharat / state

ಬೆಂಗಳೂರಿನ ನಿರ್ಮಾಣ ಹಂತದ ಶಾಪಿಂಗ್ ಮಾಲ್​ನಲ್ಲಿ ಭಾರಿ ಅಗ್ನಿ ಅವಘಡ - ಬೆಂಗಳೂರು ಬೆಂಕಿ ಘಟನೆ

ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಿರ್ಮಾಣ ಹಂತದ ಶಾಪಿಂಗ್ ಮಾಲ್​​ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.

Fire in a under construction apartment building in bengaluru
ಬೆಂಗಳೂರಿನ ನಿರ್ಮಾಣ ಹಂತದ ಅಪಾರ್ಟ್​ಮೆಂಟ್​ನಲ್ಲಿ ಭಾರಿ ಬೆಂಕಿ ಅವಘಡ

By

Published : Jan 8, 2022, 1:47 PM IST

Updated : Jan 8, 2022, 7:48 PM IST

ಬೆಂಗಳೂರು:ನಗರದ ಕೋಣನಕುಂಟೆ ಕ್ರಾಸ್ ಬಳಿ ನಿರ್ಮಾಣ ಹಂತದ ಶಾಪಿಂಗ್ ಮಾಲ್​ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಕನಕಪುರ ರಸ್ತೆಯ 143ನೇ ನಂಬರ್ ಪಿಲ್ಲರ್ ಬಳಿಯಿರುವ ಅಪಾರ್ಟ್​ಮೆಂಟ್ ಇದಾಗಿದೆ.

ಬೆಂಕಿಯಿಂದ ಕಟ್ಟಡದ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಘಟನೆಯಲ್ಲಿ ಈವರೆಗೆ ಯಾವುದೇ ಜೀವಹಾನಿ ಆಗಿರುವ ಬಗ್ಗೆ ಮಾಹಿತಿ ದೊರೆತಿಲ್ಲ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:Weekend Curfew : ಕರ್ಫ್ಯೂಗೆ ಹಲವೆಡೆ ಉತ್ತಮ ಸ್ಪಂದನೆ.. ಕೆಲವೆಡೆ ನಿಯಮ ಉಲ್ಲಂಘನೆ..

ಈ ಸಂಬಂಧ ಮಾತನಾಡಿರುವ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಮಾಲ್‌ನಲ್ಲಿ ಸಿನಿಮಾ ಥಿಯೇಟರ್​​ಗೆ ಸಂಬಂಧಿಸಿದ ಕೆಲಸ ನಡೆಯುತ್ತಿತ್ತು. ಶಾರ್ಟ್ ಸರ್ಕ್ಯೂಟ್​​ನಿಂದ ಥರ್ಮೋಕೋಲ್​ಗೆ ಬೆಂಕಿ ತಗುಲಿದೆ. ಥರ್ಮೋಕೋಲ್​​ಗೆ ಇನ್ನಷ್ಟು ರಾಸಾಯನಿಕಗಳು ಮಿಶ್ರಿತಗೊಂಡ ಕಾರಣ ಇಷ್ಟು ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಸದ್ಯ ಬೆಂಕಿ‌ ನಿಯಂತ್ರಿಸಲಾಗಿದೆ. ಆದರೆ ಘಟನೆಯಲ್ಲಿ‌ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದಿದ್ದಾರೆ.

ಬೆಂಗಳೂರಿನ ನಿರ್ಮಾಣ ಹಂತದ ಅಪಾರ್ಟ್​ಮೆಂಟ್​ನಲ್ಲಿ ಭಾರಿ ಅಗ್ನಿ ಅವಘಡ
Last Updated : Jan 8, 2022, 7:48 PM IST

ABOUT THE AUTHOR

...view details