ಬೆಂಗಳೂರು:ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ಕೇಳಿ ಬಂದಿದ್ದು, ಸದ್ಯ ಸಚಿನ್ ಬನ್ಸಾಲ್ ವಿರುದ್ದ ಕೋರಮಂಗಲ ಠಾಣೆಯಲ್ಲಿ ಪತ್ನಿ ದೂರು ನೀಡಿದ ಹಿನ್ನೆಲೆ ಎಫ್ಐಆರ್ ದಾಖಲಾಗಿ ತನಿಖೆ ಮುಂದುವರೆದಿದೆ.
ಪ್ಲಿಪ್ ಕಾರ್ಟ್ ಸಹಸಂಸ್ಥಾಪಕ ವಿರುದ್ಧ ಎಫ್ಐಆರ್: ಪತ್ನಿಯಿಂದಲೇ ದಾಖಲಾಯ್ತು ದೂರು - ವರದಕ್ಷಿಣೆ ಕಿರುಕುಳ
ಸಚಿನ್ ಬನ್ಸಾಲ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದನೆಂದು ಪತ್ನಿ ಪ್ರಿಯಾ ಬನ್ಸಾಲ್ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಇಚ್ಚೆಯಂತೆಯೇ 2008ರಲ್ಲಿ ಚಂಡಿಗಡ್ನಲ್ಲಿ ಪ್ರಿಯಾ ಬನ್ಸಾಲ್ ಅವರನ್ನು ವಿವಾಹವಾಗಿದ್ದ ಸಚಿನ್ ಬನ್ಸಾಲ್, ನಂತರದ ದಿನಗಳಲ್ಲಿ ಪ್ರಿಯಾ ಕುಟುಂಬದಿಂದ ವರದಕ್ಷಿಣೆ ಬೇಡಿಕೆ ಇಟ್ಟಿದ್ದರು. ಬೇಡಿಕೆಯಂತೆ ಸಂತ್ರಸ್ಥೆ ತಂದೆ ನಗದು ನೀಡಿದ್ದರು ಸಚಿನ್ ತಂದೆ ತಾಯಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಪ್ರಿಯಾ ದೂರಿನಲ್ಲಿ ಹೇಳಿದ್ದಾರೆ.
ಅಲ್ಲದೇ ಸಂತ್ರಸ್ಥೆ ತಂಗಿ ಮೇಲೆ ಸಚಿನ್ ಬನ್ಸಾಲ್ ಲೈಂಗಿಕ ದೌರ್ಜನ್ಯ ಕೂಡ ಮಾಡಿದ್ದಾರೆಂದು ಸಚಿನ್ ಬನ್ಸಾಲ್ ಪತ್ನಿ ಆರೋಪ ಮಾಡಿದ್ದು, ಸದ್ಯ ಕೋರಮಂಗಲ ಠಾಣೆಯಲ್ಲಿ ಸಚಿನ್ ಬನ್ಸಾಲ್ ಹಾಗೂ ಕುಟುಂಬದ ವಿರುದ್ದ ದೂರು ದಾಖಲಾಗಿದ್ದು ಪೊಲೀಸರಿಂದ ತನಿಖೆ ನಡೆಯುತ್ತಿದೆ.