ಕರ್ನಾಟಕ

karnataka

ETV Bharat / state

ಲಂಚಕ್ಕೆ ಬೇಡಿಕೆಯಿಟ್ಟ ಆರೋಪ: ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ವಿರುದ್ಧ ಎಫ್ಐಆರ್ - ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ನಾಲ್ವರು ಸಿಬ್ಬಂದಿ ವಿರುದ್ಧ ಎಫ್ಐಆರ್

ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Victoria Hospital
ವಿಕ್ಟೋರಿಯಾ ಆಸ್ಪತ್ರೆ

By

Published : Feb 1, 2022, 8:32 AM IST

ಬೆಂಗಳೂರು: ನಗರದ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳಾದ ಆನಂದ್, ನಾಗೇಶ್, ಗಿರೀಶ್, ರಂಜಿತ್ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಬಹುಜನ ಸಮಾಜವಾದಿ ಪಾರ್ಟಿ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಗೋಪಾಲ

ಲಕ್ಷ್ಮಿ ಎಂಬುವವರ ತಾಯಿ ಯಲ್ಲಮ್ಮ ಅವರನ್ನು ಚಿಕಿತ್ಸೆಗೆಂದು ಜ.21ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದಿದ್ದರು. ಜ.28 ರಂದು ತಲೆಯ ಭಾಗಕ್ಕೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಐಸಿಯುಗೆ ಶಿಫ್ಟ್​ ಮಾಡಬೇಕಿತ್ತು. ಆಗ ಆಸ್ಪತ್ರೆಯ ನಾಲ್ವರು ಸಿಬ್ಬಂದಿ 50 ಸಾವಿರ ಲಂಚ ಕೊಡಲೇಬೇಕು ಎಂದು ಒತ್ತಡ ಹೇರಿದ್ದಾರೆ. ಕಡು ಬಡವರಾಗಿದ್ದರೂ ನಿಮ್ಮ ತಾಯಿ ಬದುಕಬೇಕೆಂದರೆ ತಕ್ಷಣ ಹಣ ತಂದಿಡಿ ಎಂದು ಸಂಬಂಧಿಕರಿಗೆ ಆರೋಪಿಗಳು ಬೆದರಿಸಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವಿಚಾರಣೆಗೆ ಹಾಜರಾಗುವಂತೆ ನೋಟೀಸ್:ನೊಂದ ಮಹಿಳೆ ಲಕ್ಷ್ಮಿ ದಕ್ಷಿಣ ವಿಭಾಗದ ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ಹಾಗೂ ಸಾಕ್ಷ್ಯಾಧಾರ ಆಧಾರದ ಮೇಲೆ ನಾಲ್ವರು ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೃಢಪಟ್ಟಿದೆ. ಈ ಸಂಬಂಧ ಎಫ್​​ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ಜಾರಿ ಮಾಡಿಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಬಾಲ್ಯದ ಸ್ನೇಹಿತರು: ಗೆಳೆಯನನ್ನು ಕೊಂದಿದ್ಯಾಕೆ?

ABOUT THE AUTHOR

...view details