ಕರ್ನಾಟಕ

karnataka

ETV Bharat / state

ಸಂಚಾರ ನಿಯಮ ಉಲ್ಲಂಘಿಸಿದ  ನಟ ರಾಜೀವ್ ರಾಥೋಡ್.. ಆಡಿ ಕಾರ್ ದರ್ಬಾರ್​ಗೆ ಬ್ರೇಕ್ - ಆಡಿ ಕಾರ್ ದರ್ಬಾರ್​ಗೆ ವಿಜಯನಗರ ಸಂಚಾರ ಪೊಲೀಸರು ಬ್ರೇಕ್

ಸಂಚಾರ ನಿಯಮ ಉಲ್ಲಂಘಟಿಸಿದ ನಟ ರಾಜೀವ್ ರಾಥೋಡ್ ಅವರಿಂದ ವಿಜಯನಗರ ಸಂಚಾರ ಪೊಲೀಸರು 14,000 ದಂಡ ಕಟ್ಟಿಸಿಕೊಂಡಿದ್ದಾರೆ.

fine for Actor Rajeev Rathod who violated traffic rules
ಸಂಚಾರ ನಿಯಮ ಉಲ್ಲಂಘಟಿಸಿದ ನಟ ರಾಜೀವ್ ರಾಥೋಡ್

By

Published : Aug 17, 2022, 2:06 PM IST

ಬೆಂಗಳೂರು: ಮಂಡ್ಯ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಅಳಿಯ ನಟ ರಾಜೀವ್ ರಾಥೋಡ್ ಆಡಿ ಕಾರ್ ದರ್ಬಾರ್​ಗೆ ವಿಜಯನಗರ ಸಂಚಾರ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಸಂಚಾರ ನಿಯಮ ಉಲ್ಲಂಘಟಿಸಿದ ನಟ ರಾಜೀವ್ ರಾಥೋಡ್

ಖಾಸಗಿ ಕಾರಿಗೆ ವಿಐಪಿ ಹಾರ್ನ್ ಅಳವಡಿಸಿ, ಟ್ರಾಫಿಕ್​ನಲ್ಲಿ ಹಾರ್ನ್ ಮಾಡಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ರಾಜೀವ್ ಕಾರ್​​ ದರ್ಬಾರ್​ಗೆ ಬ್ರೇಕ್ ಬಿದ್ದಿದೆ‌.‌ ಸಂಚಾರ ನಿಯಮ‌ ಉಲ್ಲಂಘಿಸಿ ಎಮರ್ಜೆನ್ಸಿ ಹಾರ್ನ್ ಮಾಡಿಕೊಂಡು ಆಡಿ ಕಾರಿನ‌ ಮೇಲೆ ಎಂ‌ಎಲ್​ಎ ಪಾಸ್ ಹಾಕಿಕೊಂಡು ಸಂಚಾರ ಮಾಡ್ತಿದ್ದ ವೇಳೆ ಸಾರ್ವಜನಿಕರು ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ಕಾರನ್ನು ವಶಕ್ಕೆ ಪಡೆದ ಸಂಚಾರ ಪೊಲೀಸರು ದಂಡ‌ ಕಟ್ಟಿಸಿದ್ದಾರೆ. ಎಮರ್ಜೆನ್ಸಿ ಹಾರ್ನ್ ಬಳಸಿದ್ದಕ್ಕೆ 2,000ರೂ. ದಂಡ ಹಾಗೂ ಹಿಂದೆ ಇದ್ದ 12,000 ದಂಡ ಸೇರಿ ಒಟ್ಟು 14,000 ದಂಡ ಕಟ್ಟಿಸಿಕೊಂಡು ಮಾಜಿ ಎಂಪಿ ಅಳಿಯನಿಗೆ ಮತ್ತೊಮ್ಮೆ ಈ ರೀತಿ ಮಾಡದಂತೆ ವಾರ್ನ್ ಮಾಡಿದ್ದಾರೆ.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ..ರಾಜ್​ಕುಮಾರ್ ಸಮಾಧಿ ಅಭಿವೃದ್ಧಿಗೆ ಸಿಎಂ ಸ್ಪಂದನೆ

ABOUT THE AUTHOR

...view details