ಕರ್ನಾಟಕ

karnataka

ETV Bharat / state

ಚಿತ್ರಗಳಲ್ಲಿ ಸಮಸ್ಯೆಯ ಭಾವನೆಗಳ ಪ್ರತಿಬಿಂಬ! - ಎಂಎಸ್ ದಿನ

ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ವಿಶ್ವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಚಿತ್ರಕಲಾ ಪ್ರದರ್ಶನದಲ್ಲಿ ಮಲ್ಟಿಪಲ್ ಸ್ಲೇರೋಸಿಸ್ ಎಂಬ ಸಮಸ್ಯೆ ಹಾಗೂ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಸಮಸ್ಯೆಯ ಭಾವನೆಗಳು ಚಿತ್ರಗಳಲ್ಲಿ ಪ್ರದರ್ಶನ

By

Published : May 31, 2019, 1:47 AM IST


ಬೆಂಗಳೂರು:ಮಲ್ಟಿಪಲ್ ಸ್ಲೆರೋಸಿಸ್ ಸೊಸೈಟಿ ಆಫ್ ಇಂಡಿಯಾ ವಿಶ್ವ ಎಂಎಸ್ ದಿನ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಚಿತ್ರಗಳು ಹಾಗೂ ಅದರ ಅರ್ಥವನ್ನು ಛಾಯಾಗ್ರಾಹಕ ಗಿರೀಶ್ ಈಟಿವಿ ಭಾರತಕ್ಕೆ ಸವಿವರವಾಗಿ ವಿವರಿಸಿದ್ದಾರೆ.

ದೃಷ್ಟಿ ಮಂದವಾಗುವುದು, ಕೈ ಕಾಲು ದುರ್ಬಲಗೊಳ್ಳುವುದು, ಸಂವೇದನೆ ಮರಗಟ್ಟುವುದು, ಅಸ್ಥಿರತೆ, ನೆನಪಿನ ಸಮಸ್ಯೆಗಳು ಮತ್ತು ಆಯಾಸ ಕಂಡು ಬಂದಲ್ಲಿ ಇದಕ್ಕೆ ಮಲ್ಟಿ ಸ್ಲೆರೋಸಿಸ್ ಎನ್ನಲಾಗುತ್ತದೆ. ಇಂತಹ ಮಲ್ಟಿಪಲ್ ಸ್ಲೇರೋಸಿಸ್ ಎಂಬ ಸಮಸ್ಯೆ ಹಾಗೂ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ವಿಶ್ವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಎಂಎಸ್ ವಿಶ್ವದಾದ್ಯಂತ ಯುವಜನರನ್ನು ಕಾಡುತ್ತಿರುವ ಅತ್ಯಂತ ಸಾಮಾನ್ಯ ನರ ಸಂಬಂಧಿ ಸಮಸ್ಯೆಯಾಗಿದ್ದು, ವಿಕಲತೆ ಉಂಟು ಮಾಡುತ್ತಿದೆ. ಪ್ರಪಂಚದಲ್ಲಿ 2.3 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ 25ರಿಂದ 31 ವರ್ಷದವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡುಬಂದಿದೆ. ವಿಶೇಷ ಎಂದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಎರಡು ಪಟ್ಟು ಹೆಚ್ಚು.

ಈ ಸಮಸ್ಯೆಗೆ ಕಾರಣ ಹಾಗೂ ಚಿಕಿತ್ಸೆಯು ಇಲ್ಲ. ಆದರೆ, ಸಮಸ್ಯೆ ಉಲ್ಬಣಿಸದಿರಲು ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ 6 ಮಂದಿ ಛಾಯಾಗ್ರಹಕರು ತಾವು ಸೆರೆ ಹಿಡಿದ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಒಂದೊಂದು ಚಿತ್ರವೂ ಒಂದೊಂದು ಸಮಸ್ಯೆಯನ್ನು ಇಲ್ಲಿ ಹೇಳುತ್ತಿದ್ದು, ಈ ಚಿತ್ರಗಳು ಹಾಗೂ ಅದರ ಅರ್ಥವನ್ನು ಛಾಯಾಗ್ರಾಹಕ ಗಿರೀಶ್ ಈಟಿವಿ ಭಾರತಕ್ಕೆ ಸವಿವರವಾಗಿ ವಿವರಿಸಿದ್ದಾರೆ.

ABOUT THE AUTHOR

...view details