ಕರ್ನಾಟಕ

karnataka

ETV Bharat / state

ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಲಿ, ಮೋದಿ ಕ್ಷಮೆ ಯಾಚಿಸಲಿ: ಸಿದ್ದರಾಮಯ್ಯ

ಉತ್ತರ ಪ್ರದೇಶದ ಲಖಿಂಪುರ​ ಹಿಂಸಾಚಾರವನ್ನು ಖಂಡಿಸಿರುವ ಕಾಂಗ್ರೆಸ್ ನಿನ್ನೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದೆ. ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ನರೇಂದ್ರ ಮೋದಿ ಘಟನೆಯ ಹೊಣೆ ಹೊರಬೇಕು ಎಂದು ಆಕ್ರೋಶ ಹೊರಹಾಕಿದೆ.

farmer-cm-siddaramaiah
ಸಿದ್ದರಾಮಯ್ಯ

By

Published : Oct 5, 2021, 9:07 AM IST

ಬೆಂಗಳೂರು: ರೈತರ ಮೇಲೆ ವಾಹನಹರಿಸಿ ಕೊಲ್ಲುವುದು ಅಮಾನವೀಯ. ಹೀಗಾಗಿ ಪ್ರಧಾನಿ ಮೋದಿಯೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ರೈತರು ಪ್ರತಿಭಟನೆ ನಡೆಸುತ್ತಾ 10 ತಿಂಗಳು ಕಳೆದಿದೆ, ಈವರೆಗೂ ಅವರನ್ನು ಕರೆದು ಮಾತನಾಡುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

'ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಲಿ, ಮೋದಿ ಕ್ಷಮೆಯಾಚಿಸಲಿ'

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾಯ ಕೇಳುವುದು, ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಚಳವಳಿ ಮಾಡಿದರೆ ಸಾಯಿಸುತ್ತೀರಾ ನೀವು?, ಇದೇನು ಹಿಟ್ಲರ್ ಸಾಮ್ರಾಜ್ಯನಾ?, ಸರ್ವಾಧಿಕಾರನಾ? ಎಂದು ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಂತಹ ಅಮಾನವೀಯ ಕೃತ್ಯ ನಾನೆಂದೂ ಕಂಡಿರಲಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್

ಕಾಂಗ್ರೆಸ್​​​ನಲ್ಲಿ ದಿಢೀರ್ ಬೆಳವಣಿಗೆಯ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಭೇಟಿಯಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಅವರು ದೆಹಲಿಗೆ ತೆರಳುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲಾ ದೂರವಾಣಿ ಕರೆ ಮಾಡಿರುವ ಕಾರಣ ಮಂಗಳವಾರ ಮಧ್ಯಾಹ್ನ 12:30ಕ್ಕೆ ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ:ರೈತರ ಹತ್ಯೆ 'ಜಲಿಯನ್ ವಾಲಾಬಾಗ್' ನರಮೇಧಕ್ಕಿಂತ ಹೀನಾಯ: ಡಿ.ಕೆ.ಶಿವಕುಮಾರ್

ABOUT THE AUTHOR

...view details