ಬೆಂಗಳೂರು: ಸಂಚಾರಿ ಪೊಲೀಸ್ನಿಂದ ಸೆಪ್ಟಂಬರ್ 20ರಂದು ಹಲ್ಲೆಗೊಳಗಾಗಿದ್ದ ಲಾರಿ ಚಾಲಕ ಸುನೀಲ್ ಎಂಬುವರ ವಿರುದ್ಧವೇ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಪೊಲೀಸನಿಂದ ಹಲ್ಲೆಗೊಳಗಾಗಿದ್ದ ಚಾಲಕನ ವಿರುದ್ಧವೇ ಪ್ರಕರಣ ದಾಖಲು.. - bangalore latest news
ಸಂಚಾರಿ ಪೊಲೀಸನಿಂದ ಹಲ್ಲೆಗೊಳಗಾಗಿದ್ದ ಚಾಲಕನ ಸುನೀಲ ವಿರುದ್ಧವೇ ಎಫ್ಐಆರ್ ದಾಖಲಿಸಲಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಲ್ಲಿನ ಟೌನ್ ಹಾಲ್ ಬಳಿ ಟ್ರಕ್ ಚಾಲಕ ಸುನೀಲ್ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಹಲಸೂರು ಗೇಟ್ ಸಂಚಾರಿ ಪೊಲೀಸ್ ಪೇದೆ ಮಹಾಸ್ವಾಮಿ ಎಂಬುವರು ವಾಹನ ತಡೆದಿದ್ದರು. ಈ ವೇಳೆ ಚಾಲಕ ಹಾಗೂ ಪೇದೆ ನಡುವೆ ಮಾತಿನ ಚಕಮಕಿ ನಡೆದಿತ್ತು.ನಂತರ ಲಾರಿ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು. ಈ ಘಟನೆಯ ದೃಶ್ಯಾವಳಿಯನ್ನು ಚಾಲಕ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೊೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
ಈ ಸಂಬಂಧ ಸಂಚಾರಿ ಕಮಿಷನರ್ ರವಿಕಾಂತೇಗೌಡ ಅವರು ಕಾರಣ ಕೇಳಿ ಪೇದೆಗೆ ಶೋಕಾಸ್ ನೀಡಿದ್ದರು. ಏಕಮುಖ ರಸ್ತೆಯಲ್ಲಿ ಟೆಂಪೊ ಚಲಾಯಿಸಿದ್ದಕ್ಕೆ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಪೇದೆ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.