ಕರ್ನಾಟಕ

karnataka

ETV Bharat / state

ಕಣ್ಣೆದುರೇ ಸಾವು ನೋಡಿದ್ವೆ, ಅವರ ರಕ್ತ ನಮ್ಮ ಮೇಲೆ ಹರಿದಾಡಿತು...  ಹೀಗಿತ್ತು ಲಂಕಾ ದಹನದಿಂದ ಪಾರಾದ ಕನ್ನಡಿಗರ ಅನುಭವ - kannada news

ಶ್ರೀಲಂಕಾ ಬಾಂಬ್ ಸ್ಪೋಟ ಸಾವಿನ ದವಡೆಯಿಂದ ಪಾರಾಗಿ ಬಂದ ಪ್ರತ್ಯಕ್ಷ್ಯದರ್ಶಿಗಳು ಆ ಕ್ಷಣದ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ.

ಶ್ರೀಲಂಕಾ ಬಾಂಬ್ ಬ್ಲಾಸ್ಟ್ ಕುರಿತು ಪ್ರತ್ಯಕ್ಷ್ಯದರ್ಶಿಗಳ ಅನುಭವ

By

Published : Apr 22, 2019, 11:36 PM IST

ಬೆಂಗಳೂರು: ಶ್ರೀಲಂಕಾದಲ್ಲಿ ಹೋಟೆಲ್‌‌, ಚರ್ಚ್ ಸೇರಿದಂತೆ ಮೂರು ಕಡೆ ಬಾಂಬ್ ಬ್ಲಾಸ್ಟ್ ಆಗಿದ್ದು, ನೂರಾರು ಜನರು‌ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬೆಳಗ್ಗೆ 8:55 ಕ್ಕೆ ದೊಡ್ಡ ಶಬ್ದ ಆಯ್ತು, ಆ ಶಬ್ದ ಊಹೆ ಮಾಡೊಕೆ ಸಾಧ್ಯವಿಲ್ಲ. ನಾವು ತಿಂಡಿ ತಿನ್ನೋಕೆ ಹೋಟೆಲ್ ಗೆ ಹೋದ್ವಿ. ಅಲ್ಲಿ ನಾವು ಮೂರು ಜನ ಮತ್ತು ನಮ್ಮ ಪಕ್ಕದಲ್ಲೆ ಇಂಡೋನೇಷ್ಯಾ ದಂಪತಿ ಇದ್ರು. ಯಾವುದೋ ದೊಡ್ಡದಾದ ಶಬ್ದ ಆಯ್ತು, ಇಂಡೋನ್ಯಾಷ್ಯಾದ ದಂಪತಿಯ ಪತಿ ಸ್ಥಳದಲ್ಲೆ ಸಾವನ್ನಪ್ಪಿದರು. ನಾಮಗೆ ನಮ್ಮ ಕಣ್ಣೆದುರೇ ಸಾವು ನೋಡಿ ಭಯವಾಯ್ತು.

ನಮ್ಮ ಕಣ್ಣೆದುರೆ 30 ರಿಂದ 50 ಜನ ಹೆಣವಾದ್ರು. ನಮ್ಮ ಅದೃಷ್ಟ ಪಿಲ್ಲರ್ ಅಡ್ಡ ಇದ್ದ ಕಾರಣ ನಾವು ಬದುಕಿ ಉಳಿದ್ವಿ. ಸಾಕಷ್ಟು ಜನ ನಮ್ಮ ಕಣ್ಣೆದುರೇ ನರಳಿ ನರಳಿ ಜೀವ‌ಬಿಟ್ರು.. ನನ್ನ ಮೊಬೈಲ್ ಸಹ ಅಲ್ಲೆ ಬ್ಲಾಸ್ಟ್ ನಲ್ಲಿ ಹಾಳಾಯ್ತು. ಹೊಟೆಲ್ ಶಾಂಗ್ರೀಲಾ ಡೈನಿಂಗ್ ಹಾಲ್ ನಲ್ಲಿ ನಡೆದ ಘಟನೆಯನ್ನು ಬೆಂಗಳೂರಿನ ಉದ್ಯಮಿ ಸುರೇಂದ್ರ ಬಾಬು ವಿವರಿದರು.

ನಮ್ಮ ಕಣ್ಣ ಮುಂದೇಯೇ ಸುಮಾರು ನೂರು ಜನರು ಸಾವನ್ನಪ್ಪಿದರು. ನಾವು ಬದುಕಿರುವುದೇ ಅದೃಷ್ಟ. ನಾವು ಐದು ಜನರು ವ್ಯಾಪಾರದ ದೃಷ್ಟಿಯಿಂದ ಶ್ರೀಲಂಕಾಗೆ ಹೋಗಿದ್ವಿ. ಸುರೇಂದ್ರ ಬಾಬು, ನಾನು, ವೆಂಕಟೇಶಲು, ಮಹೀದರ್ ರೆಡ್ಡಿ, ರಾಜಗೋಪಲ್ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದಾಗ ಒಂದು ಶಬ್ದ ಬಂತು. ಅದನ್ನು ನಾವು ಸಿಲಿಂಡರ್ ಸ್ಪೋಟಗೊಂಡಿದೆ ಅಂತ ತಿಳಿದುಕೊಂಡಿದ್ದೆವು, ನಾವು ಒಂದು ಸೈಡ್ ನಲ್ಲಿ ಕುಳಿತುಕೊಂಡಿದ್ದು ಪಿಲ್ಲರ್ ಅಡ್ಡ ಇತ್ತು ಇದ್ದಿದ್ದರಿಂದ ನಮಗೆ ಯಾವುದೇ ಅಪಾಯವಾಗಿಲ್ಲ.

ಶ್ರೀಲಂಕಾ ಬಾಂಬ್ ಬ್ಲಾಸ್ಟ್ ಕುರಿತು ಪ್ರತ್ಯಕ್ಷ್ಯದರ್ಶಿಗಳ ಅನುಭವ

ನಮ್ಮ ಮುಂದೆಯೇ ನೂರಾರು ಜನ ನರಳಿ ನರಳಿ ಪ್ರಾಣ ಕಳೆದುಕೊಂಡಿದ್ದರು, ಅವರ ರಕ್ತ ನಮ್ಮ ಮೇಲೆ ಬಿದ್ದಿತ್ತು ಒಂದು ಕ್ಷಣ ನಮ್ಮ ಪ್ರಾಣ ಕೈಗೆ ಬಂದಿತ್ತು. ನಾವು ಬದುಕಿದ್ದೇ ಹೆಚ್ಚು. ಸುರೇಂದ್ರ ಬಾಬುಗೆ ಸ್ವಲ್ಪ ಗಾಯವಾಗಿದ್ದು ಬಿಟ್ಟರೆ ಯಾರಿಗೂ ಏನೂ ಆಗಿಲ್ಲ. ನಮಗ್ಯಾರಿಗು ಏನೂ ಆಗಿಲ್ಲ ಎಂದು ನಮ್ಮ ಕುಟುಂಬಕ್ಕೆ ಪೋನ್ ಮಾಡಿ ತಿಳಿಸಿದ್ವಿ. ‌ಇದೀಗ ನಾವು ಎಲ್ಲಾರೂ ಸೇಪಾಗಿ ಬೆಂಗಳೂರಿಗೆ ಬಂದಿದ್ದಿವಿ ಎಂದು ಭಕ್ತವತ್ಸಂ ಕೃತ್ಯವನ್ನ ಬಿಚ್ಚಿಟ್ಟರು.

ಶ್ರೀಲಂಕದಿಂದ ಆಗಮಿಸಿದ ಬಸವೇಶ್ವರ ನಗರದ ಡಾಕ್ಟರ್ ಗುಪ್ತ ಅಂಡ್ ಪ್ಯಾಮಿಲಿಯ ಮಾತು ಇದು. ದೇವರ ದಯೆ ನಮ್ಮ ನಮ್ಮ ಜೀವ ಉಳಿದಿದೆ. ಪ್ರವಾಸಕ್ಕಾಗಿ ಶ್ರೀಲಂಕಾಕ್ಕೆ ಹೋಗಿದ್ವಿ. ನಾವು ಇದ್ದ ಜಾಗದಿಂದ ಎರಡು ಕಿ.ಮೀ ದೂರದಲ್ಲಿ ಬಾಂಬ್ ಬ್ಲಾಸ್ಟ್ ಆಯ್ತು. ಇದರಿಂದ ಶ್ರೀಲಂಕಾ ಸರ್ಕಾರ ಕರ್ಪ್ಯು ಜಾರಿ‌ ಮಾಡಿತ್ತು. ನಮಗೆ ವಿಮಾನ ನಿಲ್ದಾಣದಲ್ಲಿ ಯಾವುದೇ ತೊಂದರೆಯಗಿಲ್ಲ. ಇವಾಗ ಶ್ರೀಲಂಕಾದಲ್ಲಿ ಎಲ್ಲಾ ನಾರ್ಮಲ್ ಆಗಿದೆ ಎಂದು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಗುಪ್ತಾ ತಮ್ಮ ಅನುಭವ ಹಂಚಿಕೊಂಡರು.

ABOUT THE AUTHOR

...view details