ಕರ್ನಾಟಕ

karnataka

ETV Bharat / state

ಕಂಬಳ ಉತ್ಸವದಲ್ಲಿ ಪ್ರಾಚ್ಯವಸ್ತುಗಳ ಪ್ರದರ್ಶನ: ಇಲ್ಲಿದೆ ಕಾಂತಾರ ಸಿನಿಮಾದಲ್ಲಿ ಬಳಸಿದ್ದ ಪಂಜುರ್ಲಿ ಮೊಗ - ಭೂತರಾಧನೆ

ಕಂಬಳ ಉತ್ಸವದಲ್ಲಿ ಕರಾವಳಿ ಸಂಸ್ಕೃತಿಯನ್ನು ಪ್ರಚುರ ಪಡಿಸಲು ಭೂತರಾಧನೆ, ದೈವರಾಧನೆ ಸೇರಿದಂತೆ ಪುರಾತನ ಕಾಲದ ವಸ್ತುಗಳನ್ನು ಪ್ರದರ್ಶನಕ್ಕೆ‌‌ ಇಡಲಾಗಿದೆ.

Etv Bharatexhibition-of-antiques-in-bengaluru-kambala
ಕಂಬಳ ಉತ್ಸವದಲ್ಲಿ ಪ್ರಾಚ್ಯವಸ್ತುಗಳ ಪ್ರದರ್ಶನ: ಇಲ್ಲಿದೆ ಕಾಂತಾರ ಸಿನಿಮಾದಲ್ಲಿ ಬಳಸಿದ್ದ ಪಂಜುರ್ಲಿ ಮೊಗ

By ETV Bharat Karnataka Team

Published : Nov 25, 2023, 8:13 PM IST

Updated : Nov 25, 2023, 10:58 PM IST

ಕಂಬಳ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿರುವ ಪ್ರಾಚ್ಯವಸ್ತುಗಳ ಪ್ರದರ್ಶನ

ಬೆಂಗಳೂರು: ಮರೆಯಾಗುತ್ತಿರುವ ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿಸಿ ಬೆಳೆಸಲು ಹಾಗೂ ಇಂದಿನ ಯುವ ಜನಾಂಗದವರಲ್ಲಿ ಕರಾವಳಿ ಸಂಸ್ಕೃತಿ ಪ್ರಚುರ ಪಡಿಸಲು ಕಳೆದ‌ 30 ವರ್ಷಗಳಿಂದ ದೈವರಾಧನೆ, ನಾಗರಾಧನೆ ಸೇರಿದಂತೆ ಪುರಾತನ ಕಾಲದ ವಸ್ತುಗಳ ಸಂಗ್ರಹಿಸಿ ಅರಮನೆ ಮೈದಾನದಲ್ಲಿ ಪ್ರದರ್ಶನಕ್ಕೆ‌‌ ಇಡಲಾಗಿದೆ. ಇದು ಕಂಬಳ ನೋಡಲು ಬಂದ ಜನರ ಗಮನ ಸೆಳೆಯುತ್ತಿದೆ.

ಮಂಗಳೂರಿನ ಬಜ್ಪೆಯ ನಿರಂಜನಸ್ವಾಮಿ ಪದವಿಪೂರ್ವ ಕಾಲೇಜಿನ‌ ಇತಿಹಾಸ ಪ್ರಾಧ್ಯಾಪಕ ಸುಧಾಕರ್‌ ಶೆಟ್ಟಿ ಅವರು, ಕಳೆದ‌ 30 ವರ್ಷಗಳಿಂದ ಪ್ರಾಚ್ಯ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆ ಊರಿನ ಸುಧಾಕರ್, ಇದುವರೆಗೆ ಸುಮಾರು 15 ಸಾವಿರದಷ್ಟು ಬ್ರಿಟಿಷ್ ಕಾಲದ ಹಳೆಯ ವಸ್ತುಗಳನ್ನ ಸಂಗ್ರಹಿಸಿದ್ದಾರೆ. ನಶಿಸಿ ಹೋಗುತ್ತಿರುವ ತುಳು ಸಂಸ್ಕೃತಿ ಉಳಿಸಿ ಬೆಳೆಸಲು ಹಳೆಯ ಕಾಲದ ವಸ್ತುಗಳನ್ನ ಸಂಗ್ರಹಿಸಿದ್ದಾರೆ. ಸದ್ಯ ಈ ವಸ್ತುಗಳನ್ನು ಕಂಬಳ‌ ಉತ್ಸವದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ‌.

ವಸ್ತು ಪ್ರದರ್ಶದಲ್ಲಿ ಭೂತರಾಧನೆ, ದೇವರಾಧನೆ, ನಾಗರಾಧನೆ, ಕುಲಕಸುಬುಗಳು, ಗೃಹಪಯೋಗಿ ವಸ್ತು, ಯಕ್ಷಗಾನ, ವಾದನಗಳು ಹಾಗೂ ಗೊಬ್ಬಲು ಕ್ರೀಡೆಗೆ ಸಂಬಂಧಿಸಿದ ಸಾವಿರಾರು ವಸ್ತುಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಆದಿಮಾನವರಿಂದ ಬ್ರಿಟಿಷ್ ಕಾಲದವರೆಗಿನ ಪ್ರಾಚ್ಯವಸ್ತುಗಳು ನೋಡುಗರ ಗಮನ ಸೆಳೆಯುತ್ತಿದೆ.

ಕಾಂತಾರ ಸಿನಿಮಾದಲ್ಲಿ ಬಳಸಿದ್ದ ವಸ್ತುಗಳು ಇವರದ್ದೆ:ಕನ್ನಡ ಸಿನಿಮಾದ ಖ್ಯಾತಿಯನ್ನು ಹೆಚ್ಚಿಸಿದ ಕಾಂತಾರ ಸಿನಿಮಾದಲ್ಲಿ ಬರುವ ದೈವರಾಧನೆಗೆ ಬಳಸಿದ್ದ ಪರಿಕರಗಳನ್ನ ಸುಧಾಕರ್‌ ಶೆಟ್ಟಿಯಿಂದ ಪಡೆದಿದ್ದಾರೆ. ಭೂತರಾಧನೆಗೆ ಬಳಸಲಾಗಿದ್ದ ಪಂಜುರ್ಲಿ ಮೊಗ, ಸೊಂಟಪಟ್ಟಿ, ದಂಡೆ, ಕೊರಳಪಟ್ಟಿ, ತಲೆಪಟ್ಟಿ ಹಾಗೂ ಖಡಸಾಲೆ ಸೇರಿದಂತೆ ವಿವಿಧ ವಸ್ತುಗಳನ್ನ ಬಳಸಿಕೊಳ್ಳಲಾಗಿದೆ. ಕಾಂತಾರ ಮಾತ್ರವಲ್ಲದೇ, ಹಲವು ಕನ್ನಡ ಹಾಗೂ ತುಳು ಸಿನಿಮಾಗಳಿಗೆ ದೈವರಾಧನೆಗೆ ವಸ್ತುಗಳನ್ನ ನೀಡಲಾಗಿದೆ. 30 ವರ್ಷಗಳಿಂದ ಪ್ರಾಚ್ಯವಸ್ತುಗಳನ್ನ ಸಂಗ್ರಹಿಸುತ್ತಿದ್ದೇನೆ. ಹಣಕ್ಕಾಗಿ ಈ ಕೆಲಸ‌ ಮಾಡುತ್ತಿಲ್ಲ. ತುಳು ಸಮಾಜದ‌ ಸಂಸ್ಕೃತಿ ಉಳಿಸಲು ಹಾಗೂ ಬೆಳೆಸಿ ಯುವ ಜನಾಂಗದವರಲ್ಲಿ ಜಾಗೃತಿ ಮೂಡಿಸುವ‌ ಕೆಲಸದಲ್ಲಿ‌ ನಿರತನಾಗಿರುವುದಾಗಿ ಸುಧಾಕರ್​ ಈಟಿವಿ ಭಾರತಕ್ಕೆ ತಿಳಿಸಿದರು.

2500 ಕಾಲದ ಹಿಂದಿನ ನಾಣ್ಯಗಳ‌ ಸಂಗ್ರಹ:ವಸ್ತು ಪ್ರದರ್ಶನದಲ್ಲಿ‌ 2500 ವರ್ಷಗಳ ನಾಣ್ಯಗಳನ್ನ‌ ಪ್ರದರ್ಶನಕ್ಕೆ‌ ಇಡಲಾಗಿದೆ. ಮೌರ್ಯರು, ಶಾತವಾಹನರು, ಚೋಳರು, ವಿಜಯನಗರ ಅರಸರು, ಮೈಸೂರು ಒಡೆಯರ್​, ಪಾಂಡ್ಯರು, ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಆಳ್ವಿಕೆ ಮಾಡಿದ್ದ ಆಗಿನ ರಾಜ - ಮಹರಾಜರ ಅವಧಿಯಲ್ಲಿ ಚಲಾವಣೆಗಿದ್ದ ನಾಣ್ಯಗಳನ್ನ ಪ್ರದರ್ಶನದಲ್ಲಿ ಇಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ನಾಣ್ಯಗಳಿವೆ‌. ಸುಮಾರು 20 ಚಿನ್ನದ ನಾಣ್ಯಗಳಿವೆ. ಅಲ್ಲದೇ 160ರಿಂದ 170 ದೇಶಗಳ ದೇಶ - ವಿದೇಶಗಳ ನೋಟುಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ಇದನ್ನೂ ಓದಿ:ನೀರಿಗಿಳಿಯುವ ಮುನ್ನ ಕೋಣಗಳ ತಯಾರಿ ಹೇಗಿರುತ್ತೆ ಗೊತ್ತಾ ?

Last Updated : Nov 25, 2023, 10:58 PM IST

ABOUT THE AUTHOR

...view details