ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿದ್ದರೂ ಅದರ ಲಾಭ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಆಸಕ್ತಿಯಿಲ್ಲ. ಸಚಿವ ಸ್ಥಾನಕ್ಕಾಗಿ ಭಾರತೀಯ ಜನತಾ ಪಕ್ಷದಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳಲ್ಲಿ ಕಾಂಗ್ರೆಸ್ ಪಕ್ಷ ಹಸ್ತಕ್ಷೇಪ ಮಾಡ ಅಂತಾ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಅವರು ಮಾತಾಡಿದ್ದಾರೆ.
ಆಪರೇಷನ್ ಕಮಲದ ಕೆಟ್ಟ ರಾಜಕೀಯ ಪರಂಪರೆ ಹಾಕಿದವರೇ ಬಿಎಸ್‌ವೈ.. ಸಂದರ್ಶನದಲ್ಲಿ ಎಂಬಿಪಿ ವಾಗ್ದಾಳಿ!! - ಈ ಟಿವಿ ಭಾರತಕ್ಕೆ ನೀಡಿದ " ಸಂದರ್ಶನ
ಕೊರೊನಾ ವೈರಸ್‌ನ ಸಮರ್ಥವಾಗಿ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೋವಿಡ್-19 ಹರಡಲು ಪ್ರಧಾನಿ ಮೋದಿಯವರ ವೈಫಲ್ಯತೆ ಕಾರಣ. ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಭೋಗಸ್.
ಒಂದು ವೇಳೆ ಆಂತರಿಕ ಕಲಹ ಹೆಚ್ಚಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಪತನಗೊಂಡರೆ, ಪಕ್ಷದ ಹೈಕಮಾಂಡ್ ಮತ್ತು ಹಿರಿಯ ನಾಯಕರು ಸಮಯೋಚಿತ ನಿರ್ಧಾರ ತಗೆದುಕೊಳ್ಳುತ್ತಾರೆ. 'ಆಪರೇಷನ್ ಕಮಲದಂತಹ' ಕೆಟ್ಟ ರಾಜಕೀಯ ಪರಂಪರೆ ಹುಟ್ಟುಹಾಕಿದ ಮುಖ್ಯಮಂತ್ರಿ ಯಡಿಯೂರಪ್ಪನವರ ಪರಿಸ್ಥಿತಿ ಈಗ 'ಮಾಡಿದ್ದುಣ್ಣೋ ಮಹಾರಾಯ' ಅನ್ನೋವಂತಾಗಿದೆ ಎಂದರು.
ದೇಶದಲ್ಲಿ ಕೊರೊನಾ ವೈರಸ್‌ನ ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೋವಿಡ್-19 ಹರಡಲು ಪ್ರಧಾನಿ ಮೋದಿಯವರ ವೈಫಲ್ಯತೆ ಕಾರಣವಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಭೋಗಸ್ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಸಮುದಾಯದ ಬೆಂಬಲದ ಅವಶ್ಯಕತೆ ಹೆಚ್ಚಾಗಿದೆ. ಜೊತೆಗೆ ಇತರ ಸಮುದಾಯದ ಸಪೋರ್ಟ್ ಸಹ ಬೇಕಾಗಿದೆ ಎಂದು ಸಂದರ್ಶನದಲ್ಲಿ ಹೇಳಿದರು.