ಕರ್ನಾಟಕ

karnataka

ETV Bharat / state

ಕೋವಿಡ್ - ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ: ಮತ್ತೊಮ್ಮೆ ಬೆಂಗಳೂರು ವಿವಿಯ ಎಲ್ಲ ಪರೀಕ್ಷೆಗಳು ಮುಂದೂಡಿಕೆ!

ಏಪ್ರಿಲ್ 19, 2021ರಂದು ಪರೀಕ್ಷೆಗಳು ನಡೆಯಬೇಕಿತ್ತು. ಸಾರಿಗೆ ವ್ಯತ್ಯಯ ಹಿನ್ನೆಲೆ ಈಗಾಗಲೇ ಹಲವು ಸಲ ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದೂಡಲಾಗಿದೆ.

exams of bangalore university are postponed again !
ಕೋವಿಡ್-ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮತ್ತೊಮ್ಮೆ ಬೆಂಗಳೂರು ವಿವಿಯ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ!

By

Published : Apr 17, 2021, 1:46 PM IST

ಬೆಂಗಳೂರು: ಕೋವಿಡ್ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಇದರ ಜತೆಗೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಬೆಂಗಳೂರು ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮತ್ತೊಮ್ಮೆ ಮುಂದೂಡಲಾಗಿದೆ.

ಬೆಂಗಳೂರು ವಿವಿಯ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ!

ಏಪ್ರಿಲ್ 19, 2021ರಂದು ಪರೀಕ್ಷೆಗಳು ನಡೆಯಬೇಕಿತ್ತು. ಸಾರಿಗೆ ವ್ಯತ್ಯಯ ಹಿನ್ನೆಲೆ ಈಗಾಗಲೇ ಹಲವು ಸಲ ಮುಂದೂಡಲಾಗಿತ್ತು. ಇದೀಗ ಸ್ನಾತಕೋತ್ತರ ಪದವಿಯ ಮೊದಲ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆ, ವಿಶ್ವೇಶ್ವರಯ್ಯ ಇಂಜಿನಿಯರಿಂಗ ಕಾಲೇಜಿನ B.arch/ B.tech ನ ಮೊದಲ, ಎರಡನೇ, ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನೂ ಮುಂದೂಡಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ 10,231 ಕೋವಿಡ್ ಪ್ರಕರಣಗಳು ಪತ್ತೆ!

ಹಾಗೆಯೇ ಎಂಬಿಎ, ಎಂಸಿಎ, ಎಂಎಸ್ಸಿಯ ಮೂರನೇ‌ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್​ನ ಎಂಎ, ಎಂಎಸ್ಸಿ, MASLP/M.VOC ಮತ್ತು ಐದನೇ ಸೆಮಿಸ್ಟರ್​ನ ಎಂಸಿಎ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಗೇಯೇ ಪರೀಕ್ಷಾ ಮುಂದಿನ ವೇಳಾಪಟ್ಟಿಯ ದಿನಾಂಕವನ್ನು ಪ್ರಕಟಿಸುವುದಾಗಿ ಪರೀಕ್ಷಾ ಭವನದ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.

ABOUT THE AUTHOR

...view details