ಬೆಂಗಳೂರು:ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಸರ್ಕಾರ ಉರುಳಲು ಕಾರಣರಾಗಿರುವ ಅತೃಪ್ತ ಶಾಸಕರ ಭೇಟಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಅತೃಪ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಸದನದಲ್ಲಿ ಕಳೆದೆರಡು ಅತೃಪ್ತ ಶಾಸಕರಿಗೆ ಸದನದ ಒಳ ಮತ್ತು ಹೊರಗೆ ಎಚ್ಚರಿಕೆಯ ಸಂದೇಶವನ್ನು ಮೈತ್ರಿ ಪಕ್ಷದ ನಾಯಕರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು. ಸದ್ಯ ಇದೇ ವಿಚಾರಕ್ಕೆ ಆರ್.ಅಶೋಕ್ ಅತೃಪ್ತ ಧೈರ್ಯ ತುಂಬುವ ಕಾರ್ಯ ಮಾಡಲಿದ್ದಾರೆ.
ಮುಂಬೈಗೆ ಪ್ರಯಾಣ ಬೆಳೆಸಿದ ಮಾಜಿ ಡಿಸಿಎಂ ಆರ್.ಅಶೋಕ್ ಪ್ರತಿಪಕ್ಷದ ನಾಯಕ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷಗಾದಿಗೆ 'ಕೈ' ನಾಯಕರ ರಹಸ್ಯ ಸಭೆ..!
ಹಿಂದಿನ ಪ್ರಕರಣಗಳಲ್ಲಿ ಆದ ತೀರ್ಪು ಇತ್ಯಾದಿಗಳ ವಿವರಗಳನ್ನು ನೀಡಿ ಕಾನೂನು ಸಮರದಲ್ಲಿ ಜೊತೆಗಿರುವ ಅಭಯ ನೀಡುವ ಜೊತೆಗೆ ಸರ್ಕಾರದಲ್ಲಿ ಮುಂದೆ ಸಿಗಬಹುದಾದ ಸ್ಥಾನಮಾನದ ಬಗ್ಗೆ ಭರವಸೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇವೆಲ್ಲದರ ಜೊತೆಯಲ್ಲಿ ಈ ಎಲ್ಲಾ ವಿದ್ಯಮಾನಗಳು ಮುಗಿಯುವವರೆಗೂ ಮುಂಬೈನಲ್ಲಿಯೇ ಅತೃಪ್ತರ ವಾಸ ಮುಂದುವರೆಸಲು ಅಶೋಕ್ ಮನವೊಲಿಸಲಿದ್ದಾರೆ ಎಂದು ತಿಳಿದು ಬಂದಿದೆ.