ಕರ್ನಾಟಕ

karnataka

By

Published : Sep 22, 2019, 2:56 AM IST

ETV Bharat / state

ಸುಂದರ ನಗರ ನಿರ್ಮಾಣಕ್ಕೆ ಪೌರಕಾರ್ಮಿಕರಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯ: ಮೇಯರ್​ ಗಂಗಾಂಬಿಕೆ

ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಶನಿವಾರ ಪ್ರತಿ ವಲಯದ ಒಂದು ವಾರ್ಡ್‌ನಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛತಾ ಅಭಿಯಾನದಲ್ಲಿ ಮೇಯರ್​ ಗಂಗಾಂಬಿಕೆ ಪಾಲ್ಗೊಂಡಿದ್ದರು.

every-saturday-swachhata-abiyana-program

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಶನಿವಾರ ಪ್ರತಿ ವಲಯದ ಒಂದು ವಾರ್ಡ್‌ನಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛತಾ ಅಭಿಯಾನದಲ್ಲಿ ಮೇಯರ್​ ಗಂಗಾಂಬಿಕೆ ಪಾಲ್ಗೊಂಡಿದ್ದರು.

ಉಪ ಮೇಯರ್ ಭದ್ರೇಗೌಡ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಹಾಗೂ ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್​ ಕುಮಾರ್ ಸೇರಿದಂತೆ ಸ್ಥಳೀಯ ಪಾಲಿಕೆ ಸದಸ್ಯರು, ದಕ್ಷಿಣ ವಲಯದ ಜಂಟಿ ಆಯುಕ್ತರು, ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ಚಿಕ್ಕಪೇಟೆಯ ಧರ್ಮರಾಯ‌ಸ್ವಾಮಿ ದೇವಸ್ಥಾನ ವಾರ್ಡ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಮಾತನಾಡಿದ ಮೇಯರ್, ಪೌರಕಾರ್ಮಿಕರ ಜೊತೆಗೆ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕೈ ಜೋಡಿಸಿ ವಾರ್ಡ್​​ನ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲಾ ವಾರ್ಡ್​ಗಳಲ್ಲೂ ಸಹಕಾರ ದೊರೆತರೆ ಬೆಂಗಳೂರು ಸುಂದರ ನಗರವಾಗುತ್ತದೆ. ಕೆ.ಆರ್.ಮಾರುಕಟ್ಟೆ, ಎಸ್.ಪಿ. ರಸ್ತೆ, ಅವೆನ್ಯು ರಸ್ತೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿರುತ್ತದೆ. ಇದರಿಂದ ಇಲ್ಲಿ ತ್ಯಾಜ್ಯ ಉತ್ಪತ್ತಿ ಅಧಿಕವಾಗಿರುತ್ತದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದರು.

ನಂತರ ಬಿ.ಹೆಚ್.ಅನಿಲ್ ​ಕುಮಾರ್ ಮಾತನಾಡಿ, ಈ ಪ್ರದೇಶದಲ್ಲಿ 500ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳಿವೆ. ಅವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಾತ್ರಿ ವೇಳೆ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆಗೆ ಕಂಟೈನರ್ ಅಳವಡಿಸಲಾಗುವುದು. ಎಸ್.ಜೆ.ಪಿ ರಸ್ತೆಯಲ್ಲಿ ವಾಹನದ ಪಾರ್ಕಿಂಗ್ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಲು ಸಂಚಾರಿ ಪೊಲೀಸರಿಗೆ ತಿಳಿಸುತ್ತೇವೆ ಎಂದರು.

ಇದೇ ವೇಳೆ ಕರ್ನಾಟಕ‌ ಹಾರ್ಡ್​ವೇರ್​​ ಮತ್ತು ಅಲೈಡ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ವಿಕ್ರಮ್ ಅಗರ್ ವಾಲ್, ಎಸ್.ಜೆ.ಪಿ. ರಸ್ತೆಯನ್ನು ದತ್ತು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ABOUT THE AUTHOR

...view details