ಕರ್ನಾಟಕ

karnataka

ETV Bharat / state

ಜನರ ಸುರಕ್ಷತೆ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ: ಭಾಸ್ಕರ್ ರಾವ್

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮೋಟಾರು ವಾಹನ ಕಾಯ್ದೆಯನ್ನು ರಾಜ್ಯದ ಬೊಕ್ಕಸವನ್ನು ತುಂಬಲು ಜಾರಿಗೆ ತಂದಿಲ್ಲ. ಬದಲಿಗೆ ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಮತ್ತು ಅವರ ಸುರಕ್ಷತೆಗಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

ಮೋಟಾರು ವಾಹನ ಕಾಯ್ದೆ ಜಾರಿ

By

Published : Sep 10, 2019, 6:20 PM IST

ಬೆಂಗಳೂರು:ರಾಜ್ಯದ ಬೊಕ್ಕಸ ತುಂಬಲು ಮೋಟಾರು ವಾಹನ ಕಾಯ್ದೆ ಜಾರಿಗೆ ತಂದಿಲ್ಲ. ಬದಲಾಗಿ ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಮತ್ತು ಅವರ ಸುರಕ್ಷತೆಗಾಗಿ ಜಾರಿಗೆ ತರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಈ ಕಾಯ್ದೆ ಜಾರಿ ಬಳಿಕ ವಾಹನ ಸವಾರರಿಗೆ ಭಾರೀ ದಂಡದ ಮೊತ್ತವನ್ನ ಟ್ರಾಫಿಕ್ ಪೊಲೀಸರು ಹಾಕುವ ಹಿನ್ನೆಲೆ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವುದರಿಂದ ಇದಕ್ಕೆ ‌ಹೆದರಿ ಹೆಲ್ಮೆಟ್, ಸೀಟ್ ಬೆಲ್ಟ್, ವೇಗವಾಗಿ ಚಾಲನೆ ಹೀಗೆ ನಾನ ತಪ್ಪುಗಳನ್ನ ಕಡಿಮೆ ಮಾಡುತ್ತಿದ್ದಾರೆ. ಹಾಗೆ ವಾಹನಕ್ಕೆ ಸಂಬಂಧಿಸಿದ ವಿಮೆ, ಆರ್​​​ಸಿ ಪುಸ್ತಕ ಸೇರಿದಂತೆ ಉಳಿದ ದಾಖಲೆಗಳನ್ನ ಜೊತೆಗೆ ಇಟ್ಟುಕೊಂಡು ವಾಹನ ಸವಾರಿ ಮಾಡುತ್ತಿದ್ದಾರೆ ಎಂದರು.

ಜನರ ಸುರಕ್ಷತೆಗಾಗಿ ಮೋಟಾರು ವಾಹನ ಕಾಯ್ದೆ ಜಾರಿಗೆ

ಆದರೂ ಕೆಲವರು ಬೇಜವಾಬ್ದರಿಯಿಂದ ತಪ್ಪುಗಳನ್ನ ಮಾಡಿ ಪೊಲೀಸರ ಕೈಗೆ ಸಿಕ್ಕಿ ದುಬಾರಿ ದಂಡವನ್ನ ಕಟ್ಟುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಇನ್ನು ನಗರ ಪೊಲೀಸರು ಟ್ರಾಫಿಕ್ ನಿಯಮದ ಕುರಿತು ಜಾಗೃತಿ‌ ಮೂಡಿಸಲು ಮುಂದಾಗಿದ್ದರೆ. ಟ್ರಾಫಿಕ್ ನಿಯಮ ಬ್ರೇಕ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡದ ರೀತಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋ ಜಾಗೃತಿ ಮೂಡಿಸಲು ನಿರ್ಧಾರ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಲು ಇಲಾಖೆಗೆ ಸೂಚನೆ ನೀಡಿದ್ದೇನೆ. 5 ಕೋಟಿ ಕರೆ ಪತ್ರಗಳನ್ನ ಮಾಡಿ ಸಾಮಾಜಿಕ ಜಾಲತಾಣ, ನ್ಯೂಸ್ ಪೇಪರ್, ಆಟೋ ರಿಕ್ಷಾ, ಓಲಾ, ಸ್ಕೂಲ್ ಆಸೋಷಿಯನ್ ಜೊತೆ ಮಾತಾಡಿ ಜಾಗೃತಿ ಮೂಡಿಸಲಾಗುತ್ತೆ ಎಂದರು.

ABOUT THE AUTHOR

...view details