ಕರ್ನಾಟಕ

karnataka

ETV Bharat / state

ಎಂಟು ಜನ ಶ್ರೀಗಂಧ ಮರ ಕಳ್ಳರ ಬಂಧನ: ₹3 ಕೋಟಿ ಮೌಲ್ಯದ ಮಾಲು ವಶ - ಹೈಗ್ರೌಂಡ್ ಪೊಲೀಸರು ಭರ್ಜರಿ ಬೇಟೆ

ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಶ್ರೀಗಂಧ ಮಾರಾಟ ಮಾಡುತ್ತಿದ್ದ ಎಂಟು ಜನರ ಗ್ಯಾಂಗ್​ ಅನ್ನು ಹಿಡಿದಿದ್ದಾರೆ.

Eight sandalwood thieves arrested in Bangalore
ಎಂಟು ಜನ ಶ್ರೀಗಂಧ ಮರ ಕಳ್ಳರ ಬಂಧನ

By

Published : Sep 2, 2022, 1:19 PM IST

Updated : Sep 2, 2022, 2:29 PM IST

ಬೆಂಗಳೂರು: ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಎಂಟು ಜನರ ಗ್ಯಾಂಗ್ ಅ​ನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಪತ್ತೂರು ಮೂಲದ ಗೋವಿಂದ ಸ್ವಾಮಿ, ಮಾಧು, ವೆಂಕಟೇಶ, ರಾಮಚಂದ್ರ, ವಾಸಿಂ ಬೇಗ್, ರಾಮಚಂದ್ರಪ್ಪ, ನಂಜೇಗೌಡ ಹಾಗು ವರದರಾಜು ಬಂಧಿತರು. ಆರೋಪಿಗಳಿಂದ ಸುಮಾರು 3 ಕೋಟಿ ಮೌಲ್ಯದ 147 ಕೆ.ಜಿ.ಗಂಧದ ಎಣ್ಣೆ, 730 ಕೆಜಿ ಮರದ ತುಂಡನ್ನು ವಶಕ್ಕೆ ಪಡೆಯಲಾಗಿದೆ.

ಆಗಸ್ಟ್ 1ರಂದು ಗಾಲ್ಫ್ ಕ್ಲಬ್ ಆವರಣದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ಪಿಎಸ್ಐ ಸಚಿನ್ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕೆ.ಆರ್.ಪುರ, ಸದಾಶಿವನಗರ, ಬನ್ನೇರುಘಟ್ಟ,‌ ಮಡಿವಾಳ ಹಾಗೂ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಗಳಲ್ಲಿ ಗಂಧದ ಮರ ಕಡಿಯುತ್ತಿದ್ದ ಆರೋಪಿಗಳು ಪೊಲೀಸರ ಕೈಗೆ ಸಿಗದಂತೆ ಎಚ್ಚರವಹಿಸಿದ್ದರು.

ಶ್ರೀಗಂಧ ಮಾರಾಟ ಮಾಡುತ್ತಿದ್ದ ಎಂಟು ಜನರ ಗ್ಯಾಂಗ್​ ಬಂಧನ

ಬೆಂಗಳೂರಿನ ನಿವಾಸಿ ಅರೋಪಿ ರಾಮಚಂದ್ರ ಎಂಬಾತ ನಗರದಲ್ಲಿ ಎಲ್ಲೆಲ್ಲಿ ಶ್ರೀಗಂಧ ಮರಗಳಿವೆ ಎಂಬುದರ ಬಗ್ಗೆ ತಮಿಳುನಾಡಿನ ಗ್ಯಾಂಗ್​ಗೆ ಮಾಹಿತಿ ನೀಡುತ್ತಿದ್ದ. ಈ‌ ಮಾಹಿತಿ ಆಧರಿಸಿ ನಗರಕ್ಕೆ 15 ದಿನಗಳ ಹಿಂದೆ ಬಂದು ವ್ಯವಸ್ಥಿತವಾಗಿ ಸಂಚು ರೂಪಿಸಿ ಗಂಧದ‌ ಮರಗಳನ್ನು‌ ಕಡಿಯುತ್ತಿದ್ದರು‌‌. ನಂತರ ಕದ್ದ ಮರದ ತುಂಡುಗಳನ್ನು ಚಿಕ್ಕಬಳ್ಳಾಪುರದ ವಾಸೀಂಬೇಗ್ ತಂಡದ ಗ್ಯಾಂಗ್ ಸ್ವೀಕರಿಸಿದ ಬಳಿಕ ಆಂಧ್ರದ ಪುಟ್ಟಪರ್ತಿ ಜಿಲ್ಲೆಯ ಮಡಕಶಿರಾ ಬಳಿಯ ರೊಳ್ಳಾ ಮಂಡಲ್ ಗಂಧದ ಎಣ್ಣೆ ಫ್ಯಾಕ್ಟರಿಯೊಂದಕ್ಕೆ ಮಾರಾಟ ಮಾಡುತ್ತಿದ್ದರು‌.

ಫ್ಯಾಕ್ಟರಿ ಹಲವು ವರ್ಷಗಳಿಂದ ಕಡಿಮೆ ಬೆಲೆಗೆ ಮಾಲು ಸ್ವೀಕರಿಸಿ ಗಂಧದ ಎಣ್ಣೆ ತಯಾರು ಮಾಡುತಿತ್ತು. ಸದ್ಯ ಈ‌‌ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳ‌ ಪೈಕಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಭೀಮಾತೀರದ ಬಂದೂಕುಗಳಿಗೆ ಮಧ್ಯಪ್ರದೇಶದ ನಂಟು: ಅಫಜಲಪುರದಲ್ಲಿ ನಾಲ್ವರ ಬಂಧನ

Last Updated : Sep 2, 2022, 2:29 PM IST

ABOUT THE AUTHOR

...view details