ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿ ಸಡಗರ ಸಂಭ್ರಮದ ಈದ್ ಮಿಲಾದ್ ಆಚರಣೆ

ರಾಜಧಾನಿ ಬೆಂಗಳೂರಿನಲ್ಲಿ ಈದ್​ ಮಿಲಾದ್​ ಹಬ್ಬವನ್ನು ಮುಸ್ಲಿಮರು ಬೃಹತ್ ಮೆರವಣಿಗೆ ಮಾಡುವುದರ ಮೂಲಕ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.

Etv Bharat
Etv Bharat

By

Published : Oct 10, 2022, 7:31 AM IST

ಬೆಂಗಳೂರು: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಆಚರಿಸುವ ಈದ್ ಮಿಲಾದ್ ಹಬ್ಬವನ್ನು ರಾಜಧಾನಿ ಬೆಂಗಳೂರಿನಲ್ಲಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಈದ್ ಮಿಲಾದ್ ಆಚರಣೆ

ಕೋವಿಡ್‌ ಹಾವಳಿಯಿಂದಾಗಿ ಕಳೆದ ಮೂರು ವರ್ಷಗಳಿಂದ ಈದ್ ಮಿಲಾದ್ ಅದ್ಧೂರಿ ಆಚರಣೆ ನಡೆದಿರಲಿಲ್ಲ. ಸದ್ಯಕ್ಕೆ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಹಬ್ಬದ ಅಂಗವಾಗಿ ನಗರದ ಮಸೀದಿ, ದರ್ಗಾ ಗಳನ್ನು ಸಂಪರ್ಕಿಸುವ ರಸ್ತೆಯನ್ನು ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಪ್ರವಾದಿಯವರನ್ನು ಗೌರವಿಸುವ ಬರಹಗಳನ್ನು ದೀಪದ ಬೆಳಕಿನಲ್ಲಿ ವಿನ್ಯಾಸಗೊಳಿಸಲಾಗಿತ್ತು.

ಈದ್ ಮಿಲಾದ್ ಆಚರಣೆ

ಇದನ್ನೂ ಓದಿ:ದೆಹಲಿಯ ಜಾಮಾ ಮಸೀದಿ ಮುಂದೆ ಸಾವಿರಾರು ಮುಸ್ಲಿಮರ ಪ್ರತಿಭಟನೆ- ವಿಡಿಯೋ

ಗಿಡ ನೆಟ್ಟು ಪ್ರಾರ್ಥನೆ: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಗಿಡ ನೆಟ್ಟು ವಿಶೇಷ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಆರ್ ಮಾರುಕಟ್ಟೆ ಜಾಮೀಯಾ ಮಸೀದಿ ಮೌಲಾನಾ ಇಮ್ರಾನ್ ರಶಾದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಈದ್ ಮಿಲಾದ್ ಆಚರಣೆ

ಇದನ್ನೂ ಓದಿ:ಚಿಕ್ಕಮಗಳೂರಲ್ಲಿ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ

ಅಖಿಲ ಕರ್ನಾಟಕ ಮೀಲಾದ್-ಓ-ಜುಲೂಸ್-ಇ-ರಸೂಲ್ ಅಲಮೀನ್ ಸಮಿತಿಯು (ಎಕೆಎನ್‌ಎಂಆರ್‌ಸಿ) ಪ್ರವಾದಿ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಅತಿ ದೊಡ್ಡ ಈದ್ ಮಿಲಾದ್ ಮೆರವಣಿಗೆಯನ್ನು ನಗರದಲ್ಲಿ ಆಯೋಜಿಸಿತ್ತು. ಹೆಗ್ಡೆ ನಗರದಿಂದ ಆರಂಭವಾದ ಮೆರವಣಿಗೆ ಗೋವಿಂದಪುರ, ಟ್ಯಾನರಿ ರಸ್ತೆ ಮೂಲಕ ಸಾಗಿ ಶಿವಾಜಿ ನಗರದ ಕಂಬಳಪೋಶ್ ದರ್ಗಾದಲ್ಲಿ ಸಮಾರೋಪಗೊಂಡಿತು.

ಈದ್ ಮಿಲಾದ್ ಆಚರಣೆ

ಸಂಚಾರ ನಿರ್ಬಂಧ:ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ನಗರದ ಇತರೆಡೆ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಡಾ. ಬಿ ಆರ್ ಅಂಬೇಡ್ಕರ್ ರಸ್ತೆ (ವಿಧಾನಸೌಧದ ಮುಂಭಾಗ), ಬಾಳೇಕುಂದ್ರಿ ವೃತ್ತದಿಂದ ಕೆಆರ್ ವೃತ್ತ, ಖೋಡೆ ವೃತ್ತದಿಂದ ಕೆಆರ್ ವೃತ್ತ (ಶೇಷಾದ್ರಿ ರಸ್ತೆ), ಸಿಐಡಿ ಜಂಕ್ಷನ್‌ನಿಂದ ಕೆಆರ್ ವೃತ್ತ (ಅರಮನೆ ರಸ್ತೆ- ಶೇಷಾದ್ರಿ ರಸ್ತೆ), ಕೆಆರ್ ವೃತ್ತದಿಂದ ಪೊಲೀಸ್ ಕಾರ್ನರ್‌ಗೆ (ನೃಪತುಂಗ ರಸ್ತೆ), ಮೈಸೂರು ಬ್ಯಾಂಕ್ ವೃತ್ತದಿಂದ ಕೆಆರ್ ವೃತ್ತದಲ್ಲಿ ಸಂಚಾರ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದರು.

ABOUT THE AUTHOR

...view details