ಬೆಂಗಳೂರು: ಇವತ್ತಿನವರೆಗೂ ಎಲ್ಲಿಯೂ ಯುಗಾದಿಯನ್ನು ಮಸೀದಿಗಳಲ್ಲಿ ಆಚರಿಸಿದ್ದನ್ನು ನಾನು ನೋಡಿರಲಿಲ್ಲ. ಆದರೆ, ಈ ವರ್ಷ ಬೇವು ಬೆಲ್ಲ ಹಂಚಿ ಸಾಮರಸ್ಯ ತೋರಿಸಿದ್ದಾರೆ. ಇದರಿಂದ ಗೊತ್ತಾಗುತ್ತಲ್ಲ ಸಾಮರಸ್ಯ ಬರ್ತಾ ಇದೆ ಅಂತ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಮಾವು ವ್ಯಾಪಾರದಲ್ಲಿ ಅನೇಕ ಬುದ್ದಿವಂತಿಕೆ ವರ್ಕ್ ಆಗುತ್ತೆ. ಅನೇಕ ಕಂಪನಿಗಳು ತಮ್ಮ ಪ್ರೊಡಕ್ಟ್ ತಗೊಳ್ಳಿ ಅಂತ ಹೇಳ್ತಾರೆ. ಅದನ್ನು ಯಾರಾದರೂ ತಡೆಯೋಕೆ ಆಗಿದ್ಯಾ?. ಹಾಗೆಯೇ ಯಾರೋ ಒಂದಿಷ್ಟು ಜನ ಇಂತವರ ಬಳಿ ಕೊಂಡುಕೊಳ್ಳಿ ಅಂದ್ರೆ ತಪ್ಪೇನಿದೆ. ಪ್ರಜಾಪ್ರಭುತ್ವದಲ್ಲಿ ಖರೀದಿ ಮಾಡೋ ವಿಚಾರವಾಗಿ ಬೆದರಿಕೆ ಹಾಕಿದ್ರೆ ತಪ್ಪು. ಆದರೆ, ಅವರು ಇಂಥವರ ಬಳಿ ಕೊಂಡುಕೊಳ್ಳಿ ಅಂದ್ರೆ ತಪ್ಪೇನಿದೆ ಎಂದರು.
ಅವರವರ ಇಷ್ಟದಂತೆ ಖರೀದಿ ಮಾಡಬಹುದು. ಜನ ಯಾರ ಬಳಿ ಕೊಂಡು ತಿನ್ನಬೇಕು ಅನ್ಸುತ್ತೋ ಅವರ ಹತ್ತಿರ ಕೊಂಡು ತಿಂತಾರೆ. ಏನೋ ಕಾಂಪಿಟೇಷನ್ ನಡೀತಿದೆ. ಯಾಕೆ ಅದನ್ನು ಜಾತಿಗೆ ಟರ್ನ್ ಮಾಡ್ತೀರಾ ಎಂದರು. ಇನ್ನು ಹಲಾಲ್ ಮಾಂಸ ತಿನ್ನಬೇಡಿ ಅಂತ ಸರ್ಕಾರ ಎಲ್ಲಾದರೂ ಹೇಳಿದ್ಯಾ?. ಇಂತವರ ಬಳಿಯೇ ಕೊಂಡುಕೊಳ್ಳಿ ಅಂತ ಹೇಳಿದ್ದಾರಾ?.
ಇತ್ತ ಹಲಾಲ್ ಮಾಂಸ ನಮ್ಮ ದೇವರಿಗೆ ಎಂಜಲು ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿ ಈಗ ಮಂತ್ರಿಗಳಲ್ಲ. ಮಾಜಿ ಮಂತ್ರಿಯಾಗಿದ್ದಾಯ್ತು. ನೀವು ಮಾಜಿ ಮಂತ್ರಿಗಳ ಬಳಿ ಹೋಗಿ ಕೇಳಿದ್ರೆ ಇನ್ನೇನಾಗುತ್ತೆ?. ಈ ಬಗ್ಗೆ ಸರ್ಕಾರ ಏನಾದ್ರೂ ಹೇಳಿದ್ರೆ ದಾಖಲೆ ಕೊಡಿ ಆಗ ಮಾತಾಡ್ತೀನಿ. ಆದರೆ, ಸರ್ಕಾರ ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು ಪೊಲೀಸರೊಂದಿಗೆ ಡಿಜಿ - ಐಜಿಪಿ ಪ್ರವೀಣ್ ಸೂದ್ ಸಭೆ.. ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ