ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಹೆಚ್ಡಿಸಿಎಲ್ ) ಗೆ ಕೊಟ್ಯಾಂತರ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಆರೋಪಿ ಬಿ.ವೈ.ಶ್ರೀನಿವಾಸ್ರ 1.30 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ.
ಕೆಹೆಚ್ಡಿಸಿಎಲ್ ವಂಚನೆ ಪ್ರಕರಣ: ವಿಜಯ ಬ್ಯಾಂಕ್ ಮಾಜಿ ವ್ಯವಸ್ಥಾಪಕನ ಆಸ್ತಿ ಮುಟ್ಟುಗೋಲು
ಕೆಹೆಚ್ಡಿಸಿಎಲ್ಗೆ ಕೊಟ್ಯಾಂತ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಜಯಾ ಬ್ಯಾಂಕ್ ಮಾಜಿ ಹಿರಿಯ ವ್ಯವಸ್ಥಾಪಕರಾಗಿದ್ದ ಬಿ.ವೈ.ಶ್ರೀನಿವಾಸ್ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.
ವಿಜಯಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕರಾಗಿದ್ದ ಬಿ.ವೈ ಶ್ರೀನಿವಾಸ್, ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಇಲಾಖೆಯಾದ ಕೆಹೆಚ್ಡಿಸಿಎಲ್ಗೆ ಕೊಟ್ಯಾಂತ ರೂ. ವಂಚಿಸಿದ್ದರು. ಸುಮಾರು 16.67 ಕೋಟಿ ರೂ. ನಕಲಿ ಖಾತೆಗೆ ರವಾನಿಸಲಾಗಿತ್ತು. ಪ್ರಕರಣದಲ್ಲಿ ಕೆಹೆಚ್ಡಿಸಿಎಲ್ನ ಅಂದಿನ ವ್ಯವಸ್ಥಾಪಕ ಕಿಶೋರ್ ಕುಮಾರ್ ವಿರುದ್ಧವೂ ಆರೋಪ ಕೇಳಿ ಬಂದಿತ್ತು.
ಈ ಕುರಿತು ಅಶೋಕನಗರ ಠಾಣೆಯಲ್ಲಿ ಕೆಎಚ್‌ಡಿಸಿಎಲ್‌ನ ವ್ಯವಸ್ಥಾಪಕ ಸಲಹೆಗಾರ ದೂರು ದಾಖಲಿಸಿದ್ದರು. ಆ ಹಿನ್ನೆಲೆ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ಕೈಗೆತ್ತಿಕೊಂಡಿದ್ದ ಇಡಿ ಅಧಿಕಾರಿಗಳು, ಆರೋಪಿ ಬಿ.ವೈ.ಶ್ರೀನಿವಾಸ್ ಒಡೆತನದ 1.30 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.