ಬೆಂಗಳೂರು: ಅಮ್ನೆಸ್ಟಿ ಇಂಟರ್ನ್ಯಾಶನಲ್ಗೆ ಸೇರಿದ 1.54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ. ಒಟ್ಟಾರೆ ಈವರೆಗೆ ಅಮ್ನೆಸ್ಟಿಗೆ ಸೇರಿದ 21.07 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು.
ಅಮ್ನೆಸ್ಟಿ ಸಂಸ್ಥೆಗೆ ಎನ್‌ಜಿಒ ಚಟುವಟಿಕೆಗಳನ್ನು ನಡೆಸಲು ಕೆಲ ವರ್ಷಗಳ ಹಿಂದೆ ವಿದೇಶದಿಂದ 51.72 ಕೋಟಿ ರೂ. ಬಂದಿತ್ತು. ಆದರೆ ಈ ಬಗ್ಗೆ ಸಂಸ್ಥೆ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಹಣ ಪಡೆದುಕೊಂಡಿತ್ತು. ಈ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ ಎನ್ನಲಾಗ್ತಿದೆ.