ಕರ್ನಾಟಕ

karnataka

ETV Bharat / state

ಗ್ರಹಣ ವಿಮೋಚನೆ: ರಾಜ್ಯದ ದೇಗುಲಗಳಲ್ಲಿ ವಿಶೇಷ ಪೂಜೆ

ಚಂದ್ರಗ್ರಹಣ ಅಂತ್ಯ ಹಿನ್ನೆಲೆ ರಾಜ್ಯದ ಎಲ್ಲಾ ದೇಗುಲಗಳಲ್ಲಿ ಇಂದು ವಿಶಿಷ್ಟ ಪೂಜೆ ಸಲ್ಲಿಸಲಾಯ್ತು.

ಚಂದ್ರಗ್ರಹಣ ಅಂತ್ಯ ಹಿನ್ನೆಲೆ ರಾಜ್ಯದ ಎಲ್ಲಾ ದೇಗುಲಗಳಲ್ಲಿ ವಿಶಿಷ್ಟ ಪೂಜೆ

By

Published : Jul 17, 2019, 12:02 PM IST

ಬೆಂಗಳೂರು/ಹುಬ್ಬಳ್ಳಿ:ರಾತ್ರಿ ಚಂದ್ರಗ್ರಹಣ ಹಿನ್ನೆಲೆ ಇಂದು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಂಗಳೂರಿನ ಹಲವು ದೇವಾಲಯಗಳಲ್ಲಿ ಬುಧವಾರ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕಗಳು ಹಾಗೂ ಶಾಂತಿಹೋಮ ನಡೆದವು. ಕೋರಮಂಗಲದ ನೂರಾರು ವರ್ಷದ ಇತಿಹಾಸವುಳ್ಳ ಸುಂದರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಹಲವು ಭಕ್ತರು ಗ್ರಹಣ ಹಿನ್ನೆಲೆಯಲ್ಲಿ ದೋಷ ಪರಿಹಾರಕ್ಕಾಗಿ ಅಕ್ಕಿ ಹಾಗೂ ಹುರುಳಿ ಮುಂತಾದ ಧಾನ್ಯಗಳನ್ನು ದಾನ ಮಾಡಿದರು. ಹಲವು ಮಂದಿ ಭಕ್ತರು ಚಂದ್ರಗ್ರಹಣದ ಮೋಕ್ಷ ಕಾಲದಲ್ಲಿ ಪೂಜೆ ಮಾಡಿಸಿದರು.

ಚಂದ್ರಗ್ರಹಣ ಅಂತ್ಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇಗುಲಗಳಲ್ಲಿ ವಿಶಿಷ್ಟ ಪೂಜೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಚಂದ್ರಗ್ರಹಣ ಮುಕ್ತಾಯವಾದ ಹಿನ್ನೆಲೆಯಲ್ಲಿ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿಯಿಡೀ ಜಾಗರಣೆ ಮಾಡಿದ ಕೆಲವರು ಇಂದು ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಆಗಮಿಸುವ ದೃಶ್ಯ ಕಂಡು ಬಂತು. ನಗರದ ಸಾಯಿ ಮಂದಿರ, ಶಿವಮಂದಿರ ಹಾಗೂ ಸಿದ್ದಾರೂಢ ಮಠದಲ್ಲಿ ಬೆಳಗ್ಗೆಯೇ ದೇವಾಲಯ ಸ್ವಚ್ಚಗೊಳಿಸಿ ಪೂಜೆ ಪುನಸ್ಕಾರಗಳು ನಡೆದೆವು.‌ ಭಕ್ತರು ಹೆಚ್ಚಿನ‌ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ABOUT THE AUTHOR

...view details