ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ರಾತ್ರಿ ಲಘು ಭೂಕಂಪ - ವಿಜಯಪುರ ಭೂಕಂಪ

ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ವಿವಿಧೆಡೆ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿದೆ.

Representative image
ಪ್ರಾತಿನಿಧಿಕ ಚಿತ್ರ

By

Published : Apr 4, 2023, 1:11 PM IST

ಬೆಂಗಳೂರು: ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ನಿನ್ನೆ(ಸೋಮವಾರ) ರಾತ್ರಿ ವಿವಿಧೆಡೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿದೆ. ನಿನ್ನೆ ರಾತ್ರಿ 10.41ರ ಸಮಯದಲ್ಲಿ ಭೂಮಿ ಕಂಪಿಸಿದೆ.

ಭೂಕಂಪನದ ಕೇಂದ್ರವು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಗ್ರಾಮ ಪಂಚಾಯಿತಿಯಿಂದ ವಾಯುವ್ಯ ಭಾಗದ ಮೂರು ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಇತ್ತು ಎಂದು ತಿಳಿದು ಬಂದಿದೆ. ವಿಜಯಪುರ ತಾಲೂಕಿನ ಈಶಾನ್ಯ ದಿಕ್ಕಿನಲ್ಲಿ 3.3 ಕಿ.ಮೀ. ದೂರದಲ್ಲಿರುವ ಹೆಗಡಿಹಾಳ್, 6.2 ಕಿ.ಮೀ. ದೂರದಲ್ಲಿರುವ ಕತ್ತಕಾನಹಳ್ಳಿ ಗ್ರಾಮ ಹಾಗೂ ವಿಜಯಪುರ ನಗರದಿಂದ 17.6 ಕಿ.ಮೀ. ದೂರದಲ್ಲಿರುವ ಆಗ್ನೇಯ ಭಾಗದಲ್ಲಿ ಭೂಕಂಪನದ ಅನುಭವ ಆಗಿದೆ.

ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಲಘು ಭೂಕಂಪ

ಇದನ್ನೂ ಓದಿ:ವಿಜಯಪುರದಲ್ಲಿ ಭೂಕಂಪನ.. ಸಾರ್ವಜನಿಕರಲ್ಲಿ ಹೆಚ್ಚಿದ ಭೀತಿ

ಭೂಕಂಪನದ ತೀವ್ರತೆಯು ಕಡಿಮೆಯಾಗಿತ್ತು ಮತ್ತು ಭೂಕಂಪನವು ಭೂಕಂಪದ ಕೇಂದ್ರದಿಂದ 30-40 ಕಿ.ಮೀ ವ್ಯಾಪ್ತಿಯವರೆಗೆ ಇರುವವರ ಅನುಭವಕ್ಕೆ ಬಂದಿರಬಹುದು. ಈ ರೀತಿಯ ಭೂಕಂಪವು ಸ್ಥಳೀಯ ಜನರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ ಇದನ್ನು ಗಮನಿಸಿದಾಗ ತೀವ್ರತೆಯು ಕಡಿಮೆ ಇತ್ತು. ಆದರೂ ಸ್ಥಳೀಯರಿಗೆ ಕಂಪನದ ಅನುಭವ ಮಾತ್ರ ಆಗಿರಬಹುದು. ಭೂಕಂಪನ ವಲಯ 3 ರಲ್ಲಿ ಕೇಂದ್ರಬಿಂದು ಇತ್ತು. ಇದನ್ನು ಗಮನಿಸಿದ ಭೂಕಂಪನದ ಪ್ರಮಾಣ ಮತ್ತು ತೀವ್ರತೆ ಎರಡೂ ಕಡಿಮೆ ಇರುವುದರಿಂದ ಜನ ಸಮುದಾಯವು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಹಲವು ಬಾರಿ ಭೂಕಂಪನದ ಅನುಭವವಾಗಿತ್ತು.

ಇದನ್ನೂ ಓದಿ:ವಿಜಯಪುರದಲ್ಲಿ ಮತ್ತೆ ಭೂಕಂಪನ: ಭಾರಿ ಸದ್ದು.. ಭಯಭೀತರಾದ ಜನತೆ

ಪಪುವಾ ನ್ಯೂಗಿನಿಯಾದಲ್ಲಿ ಭೂಕಂಪ: ಸೋಮವಾರ(ನಿನ್ನೆ) ಬೆಳಗ್ಗೆ ಪಪುವಾ ನ್ಯೂ ಗಿನಿಯಾದಲ್ಲಿ ಭೂಕಂಪ ಸಂಭವಿಸಿದ್ದು, ನಾಲ್ಕು ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆಸ್ಟ್ರೇಲಿಯಾದ ಸಮೀಪವಿರುವ ಪಪುವಾ ನ್ಯೂ ಗಿನಿಯಾದಲ್ಲಿ ಸೋಮವಾರ(ಏ.3) ಬೆಳಗ್ಗೆ (ಸ್ಥಳೀಯ ಕಾಲಮಾನ) ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ ಎಂದು ಯುಎಸ್​ ಭೂವೈಜ್ಞಾನಿಕ ಸಮೀಕ್ಷೆ(USGS) ತಿಳಿಸಿದೆ."ಪೆಸಿಫಿಕ್ ರಾಷ್ಟ್ರದ ಉತ್ತರ ಭಾಗದಲ್ಲಿರುವ ಚಂಬ್ರಿ ಸರೋವರದ ಸಮೀಪ ಕೇಂದ್ರ ಬಿಂದು ಇದೆ. ಇದು ಭೂಮಿಯಲ್ಲಿ ಆಳವಾದ ಬಿರುಕುಗಳನ್ನು ಉಂಟು ಮಾಡಿದೆ. ಈ ಪ್ರದೇಶವು ಜೌಗು ಪ್ರದೇಶಗಳಿಂದ ಕೂಡಿದೆ. ಇಲ್ಲಿನ ಜನರು ಬೇಟೆ ಮತ್ತು ಮೀನುಗಾರಿಕೆಯನ್ನು ಜೀವನಾಧಾರವಾಗಿಸಿಕೊಂಡು ಬದುಕು ಸಾಗಿಸುತ್ತಾರೆ" ಎಂದು ಪೋರ್ಟ್ ಮೊರೆಸ್ಬಿ ಜಿಯೋಫಿಸಿಕಲ್ ಅಬ್ಸರ್ವೇಟರಿಯ ಕಾರ್ಯನಿರ್ವಾಹಕ ಸಹಾಯಕ ನಿರ್ದೇಶಕ ಮ್ಯಾಥ್ಯೂ ಮೊಯಿಹೊಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಪಪುವಾ ನ್ಯೂಗಿನಿಯಾದಲ್ಲಿ ಪ್ರಬಲ ಭೂಕಂಪ.. 300ಕ್ಕೂ ಹೆಚ್ಚು ಮನೆಗಳು ನಾಶ, ನಾಲ್ವರು ಸಾವು

ABOUT THE AUTHOR

...view details