ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಮೊದಲ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ನಾಪತ್ತೆ ಹಿನ್ನೆಲೆ, ಸದ್ಯ ಸಿಸಿಬಿ ಪೊಲೀಸರು ಎಲ್ಲೆಡೆ ಶೋಧ ಮುಂದುವರೆಸಿದ್ದಾರೆ. ನಿನ್ನೆ ಶಿವಪ್ರಕಾಶ್ ಪೋಷಕರಿಗೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆ ಇಂದು ವಿಚಾರಣೆಗೆ ಶಿವಪ್ರಕಾಶ್ ಪೋಷಕರು ಕೆಲ ದಾಖಲೆಗಳೊಂದಿಗೆ ಹಾಜರಾಗಿದ್ದಾರೆ.
ಮಗ ಮಾಡಿದ ತಪ್ಪಿಗೆ ಸದ್ಯ ತಂದೆ-ತಾಯಿ ಸಿಸಿಬಿ ಕಚೇರಿ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಲೆಮರೆಸಿಕೊಂಡಿರುವ ಚಿಪ್ಪಿಯ ಮಾಹಿತಿಯನ್ನ ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ಪಡೆಯುತ್ತಿದ್ದಾರೆ. ಡ್ರಗ್ಸ್ ಮಾಫಿಯಾದ ಪ್ರಕರಣದಲ್ಲಿ ಶಿವಪ್ರಕಾಶ್ ಚಿಪ್ಪಿ ಮುಖ್ಯ ಪಾತ್ರವಹಿಸಿ ನಟಿಯರಾದ ರಾಗಿಣಿ ಹಾಗೂ ಸಂಜನಾ ಜೊತೆ ಪಾರ್ಟಿಯಲ್ಲಿ ಭಾಗಿಯಾಗ್ತಿದೆ. ಈ ವೇಳೆ ಡ್ರಗ್ಸ್ ಪೂರೈಸುವುದರಲ್ಲಿ ಮುಂಚೂಣಿಯಲ್ಲಿದ್ದ ಎಂದು ಹೇಳಲಾಗ್ತಿದೆ. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೊದಲ ಆರೋಪಿಯಾಗಿ ಆಗಿ ಸಿಸಿಬಿ ಎಸಿಪಿ ಗೌತಮ್ ಅವರು ಚಿಪ್ಪಿ ಹೆಸರನ್ನು ನಮೂದು ಮಾಡಿದ್ದಾರೆ.