ಯಲಹಂಕ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ಯಿಯ ಜಿಕೆವಿಕೆ ಆವರಣದಲ್ಲಿ ಆಕ್ಸಿಜನ್ ವ್ಯವಸ್ಥೆಯುಳ್ಳ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.
ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೋವಿಡ್ ಆರೈಕೆ ಕೇಂದ್ರದ ಸುತ್ತಲು ಪರಿಸರ ಸ್ನೇಹಿಯಾಗಿ, ಹಸಿರು ಮರಗಳಿಂದ ಕೂಡಿದ್ದು, ರೋಗಿಗಳು ಶೀಘ್ರಗುಣವಾಗಲು ಮತ್ತು ಚೇತರಿಸಿಕೊಳ್ಳಲು ಉತ್ತಮ ಕೇಂದ್ರವಾಗಿದೆ.
ಈ ಕೇಂದ್ರದಲ್ಲಿ 380 ಹಾಸಿಗೆಗಳಿವೆ. 80 ಹಾಸಿಗೆಗಳು ಪುರುಷರಿಗೆ, 80 ಮಹಿಳೆಯರಿಗೆ, 170 ಸಾಮಾನ್ಯ ವರ್ಗ ಹಾಸಿಗೆ ಹಾಗೂ 50 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚಿಸಲಾಗುವುದು. ಸದರಿ ಕೋವಿಡ್ ಆರೈಕೆ ಕೇಂದ್ರಕ್ಕೆ ಎರಡು ಆ್ಯಂಬುಲೆನ್ಸ್‌ಗಳನ್ನು ಸಹ ನಿಯೋಜಿಸಲಾಗಿದೆ.
Drive to the Covid care center at GKVK campus 12 ವೈದ್ಯರು, 12 ದಾದಿಯರು, 24 ಆರೋಗ್ಯ ಸಹಾಯಕರು ಹಾಗೂ 36 ಹೌಸ್ ಕೀಪಿಂಗ್, ಡಾಟಾ ಆಪರೇಟರ್‌ಗಳು ಹಾಗೂ ಮಾರ್ಷಲ್‌ಗಳನ್ನು ಸಹ ನಿಯೋಜಿಸಲಾಗಿದೆ.
ಹೆಚ್ಚಿನ ಓದಿಗೆ: ಕೋವಿಡ್ ಸೋಂಕಿಗೊಳಗಾದ ಪೋಷಕರು: ಆರು ತಿಂಗಳ ಮಗುವಿನ ರಕ್ಷಣೆಗೆ ಮುಂದಾದ ಪೊಲೀಸ್!
ಅಸಿಂಪ್ಟಮ್ಯಾಟಿಕ್ ಮತ್ತು ಮೈಲ್ಡ್ ಸಿಂಪ್ಟಮ್ಸ್ ರೋಗಿಗಳ ಆರೈಕೆ ನಡೆಯಲಿದ್ದು, ರೋಗಿಗಳ ಮೇಲ್ವಿಚಾರಣೆ ಮತ್ತು ಆರೈಕೆಗಾಗಿ ನುರಿತ ವೈದ್ಯ ವೃಂದ ಹಾಗೂ ಸಿಬ್ಬಂದಿ ಲಭ್ಯವಿದ್ದು, ರೋಗಿಗಳಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಲಾಗಿದೆ.
ಮೊದಲಿಗೆ ವೈದ್ಯರು ಕೋವಿಡ್ ಪಾಸಿಟಿವ್ ಬಂದವರಿಗೆ ಟ್ರಯಾಜ್ ಮಾಡಿ, ಸೂಕ್ತ ಔಷಧಿಗಳನ್ನು ನೀಡಲಾಗುತ್ತದೆ. ದಿನದಲ್ಲಿ ಮೂರು ಬಾರಿ ರೋಗಿಗಳ ವಿಚಾರಣೆ ಹಾಗೂ ಆರೈಕೆ ಮಾಡಲಾಗುತ್ತದೆ. 60ನ ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳ ಲಭ್ಯವಿದ್ದು, 90-94 S1O2 ಪ್ರಮಾಣವಿರುವ ರೋಗಿಗಳ ಚಿಕಿತ್ಸೆಗೆ ಅನುಕೂಲಕರವಾಗಿದೆ.
ಅಗತ್ಯವಿರುವ ರೋಗಿಗಳಿಗೆ ಕೌನ್ಸಲಿಂಗ್ ವ್ಯವಸ್ಥೆ ಕೂಡ ಒದಗಿಸಲಾಗುತ್ತದೆ. ಪೌಷ್ಟಿಕ ಹಾಗೂ ಆರೋಗ್ಯಕರವಾದ ಆಹಾರವನ್ನು ದಿನದಲ್ಲಿ ಆರು ಬಾರಿ ಒದಗಿಸಲಾಗುತ್ತದೆ. ನುರಿತ ತಜ್ಞರ ಸಲಹೆಯ ಮೇರೆಗೆ ಡಯಟ್ ಪ್ಲಾನ್ ಕೂಡ ಹೇಳಿಕೊಡಲಾಗುತ್ತದೆ.
ಮುಂಜಾನೆಯ ಉಪಾಹಾರ, ಅಪರಾಹ್ನದ ಹಣ್ಣು ಮತ್ತು ಸೂಪ್, ಮಧ್ಯಾಹ್ನದ ಊಟ, ಸಂಜೆಯ ಚಹಾ ಮತ್ತು ಬಿಸ್ಕತ್ತು, ರಾತ್ರಿಯ ಊಟ ನಂತರ ಬಿಸಿ ಹಾಲು ನೀಡಲಾಗುತ್ತದೆ.