ಬೆಂಗಳೂರು: ನಗರದಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟ್ವೀಟ್ ಮೂಲಕ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಏ.20ರೊಳಗೆ 6,500 ಕೇಸ್‌ಗಳು ಬರುವ ಸಾಧ್ಯತೆ: ಡಾ.ಗಿರಿಧರ್ ಬಾಬು ಆತಂಕ - Bengaluru
ಕೊರೊನಾ ಕೇಸ್‌ಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದ್ದು, 6,500 ಕೇಸ್‌ಗಳು ಬರುವ ಸಾಧ್ಯತೆ ಇದೆ. ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಿ ಕೊರೊನಾ ಹೆಚ್ಚಾಗಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ಹೇಳಿದ್ದಾರೆ.
ಡಾ. ಗಿರಿಧರ್ ಬಾಬು
"ಬೆಂಗಳೂರಿನಲ್ಲಿ ಏಪ್ರಿಲ್ 20ರೊಳಗೆ ದಿನಕ್ಕೆ ಸರಿಸುಮಾರು 6,500 ಕೇಸ್‌ಗಳು ಬರುವ ಸಾಧ್ಯತೆ ಇದೆ. ಅವರಲ್ಲಿ 10% ಜನರಿಗೆ ಆಸ್ಪತ್ರೆ ಅಗತ್ಯವಿದೆ. ಆರೋಗ್ಯ ವ್ಯವಸ್ಥೆಯ ಬೇಡಿಕೆ ಕೆಲವೇ ದಿನಗಳಲ್ಲಿ ಹೆಚ್ಚಲಿದೆ. ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಿ ಕೊರೋನಾ ಹೆಚ್ಚಾಗಬಹುದು ಎಂದಿದ್ದಾರೆ.
ಜೊತೆಗೆ, ಆದಷ್ಟು ಮನೆಯಲ್ಲಿರಿ, ಹೊರಗೆ ಹೋಗುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ಎಂದು ಅವರು ಮನವಿ ಮಾಡಿದ್ದಾರೆ.