ಕರ್ನಾಟಕ

karnataka

ETV Bharat / state

ವಾರ್ತಾ ಇಲಾಖೆ ಹಿರಿಯ ಶ್ರೇಣಿ ನಿರ್ದೇಶಕರಾಗಿ ಡಿ.ಪಿ.ಮುರಳೀಧರ್ ನೇಮಕ - ಹಿರಿಯ ಶ್ರೇಣಿಯ ನಿರ್ದೇಶಕರ ಹುದ್ದೆಗೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ್​ಗೆ ಹಿರಿಯ ಶ್ರೇಣಿಯ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.

muralidhar
ಡಿ ಪಿ ಮುರಳೀಧರ್

By

Published : Mar 29, 2023, 2:22 PM IST

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ್​ ಅವರಿಗೆ ಮುಂಬಡ್ತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಂಟಿ ನಿರ್ದೇಶಕ ಸ್ಥಾನದಿಂದ ಗ್ರೂಪ್ "ಎ" ಹಿರಿಯ ಶ್ರೇಣಿಯ ನಿರ್ದೇಶಕರ ಹುದ್ದೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಅಧಿಸೂಚನೆ ಪ್ರಕಟಿಸಿದ್ದಾರೆ. ಜಂಟಿ ನಿರ್ದೇಶಕರ ಹುದ್ದೆಯಿಂದ ವೇತನ ಶ್ರೇಣಿ ರೂ. 82,000 - 1,17,700 ರೂ. ಗೆ ಏರಿಕೆ ಆಗಲಿದೆ.

ಇದನ್ನೂ ಓದಿ :ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ : ವಾರ್ತಾ ಇಲಾಖೆ ವಿನೂತನ ಪ್ರಯತ್ನ

ವಾರ್ತಾ ಇಲಾಖೆಯ ವಿವಿಧ ಹುದ್ದೆಯಲ್ಲಿ ಸಾಕಷ್ಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವ ಮುರುಳೀಧರ್ ಇದೀಗ ತಮ್ಮ ವೃತ್ತಿ ಬದುಕಿನ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಸಾಮಾನ್ಯವಾಗಿ ಐಎಎಸ್​, ಐಪಿಎಸ್​ ಅಧಿಕಾರಿಗಳೇ ನಿಭಾಯಿಸುತ್ತಿದ್ದ ನಿರ್ದೇಶಕರ ಜವಾಬ್ದಾರಿಯನ್ನು ಇವರು ಹೊರಲಿದ್ದಾರೆ.

ಇದನ್ನೂ ಓದಿ :ಕಾರು ಬಿಟ್ಟು ವಾರ್ತಾ ಇಲಾಖೆ ವಾಹನದಲ್ಲಿ ಹಳ್ಳಿಗಳಿಗೆ ಸಂಚರಿಸಿದ ‌ಸಚಿವ ಸುರೇಶ್ ಕುಮಾರ್

2022ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಸಹ ಮುರುಳೀಧರ್ ಭಾಜನರಾಗಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಯ್ಕೆ ಸಮಿತಿ ಸಭೆಯು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಸಲ್ಲಿಸಿರುವ ಎಲ್ಲಾ ಅರ್ಹ ನಾಮ ನಿರ್ದೇಶನಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಂತಿಮವಾಗಿ 30 ಅರ್ಹ ಅಧಿಕಾರಿ / ನೌಕರರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿತ್ತು. ಇವರಲ್ಲಿ ಡಿ ಪಿ ಮುರಳೀಧರ್​ ಕೂಡ ಒಬ್ಬರು.

ಇದನ್ನೂ ಓದಿ :ಕೂಲಿ ಕಾರ್ಮಿಕರಿಗೆ ಊಟ: ವಾರ್ತಾ ಇಲಾಖೆ ಜೊತೆ ಕೈ ಜೋಡಿಸಿದ ಸಿವಿಲ್ ಡಿಫೆನ್ಸ್

ಪ್ರೋತ್ಸಾಹ ಧನ ಮಂಜೂರು : ಇನ್ನು ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದು ಈ ಹಿಂದೆ ಸರ್ಕಾರ ತಿಳಿಸಿತ್ತು. ಹಾಗೆಯೇ, ಜನವರಿ 25 ರಂದು ಮತ್ತೊಂದು ಆದೇಶ ಹೊರಡಿಸಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನೌಕರರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹ ಧನ ಮುಂದಾಗಿರುವುದಾಗಿ ತಿಳಿಸಿತ್ತು. ಪ್ರೋತ್ಸಾಹ ಧನದ ಸೌಲಭ್ಯ ಏಪ್ರಿಲ್‌ 17, 2021ರೊಳಗೆ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಉತ್ತೀರ್ಣರಾದ ದಿನಾಂಕವನ್ನ ಖಚಿತಪಡಿಸಿಕೊಂಡು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳು ಪ್ರೋತ್ಸಾಹಧನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

ಇದನ್ನೂ ಓದಿ :ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾದ ಸರ್ಕಾರಿ ನೌಕರರಿಗೆ ₹5 ಸಾವಿರ ಪ್ರೋತ್ಸಾಹ ಧನ

ವಾರ್ತಾ ಇಲಾಖೆಯ ವಾಹನ ಚಾಲಕನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪೊಲೀಸರು

ABOUT THE AUTHOR

...view details