ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೆಸರು ಸಹ ತಳಕು ಹಾಕಿಕೊಂಡಿದ್ದು, ಎರಡು ದಿನ ವಿಚಾರಣೆಗೆ ಹಾಜರಾದ ರಿಕ್ಕಿ ಸದ್ಯ ಅನಾರೋಗ್ಯದ ಸಮಸ್ಯೆ ಹೇಳಿ ಮೂರು ದಿನ ಸಮಯಾವಕಾಶ ಕೇಳಿದ್ದಾರೆಂದು ಹೇಳಲಾಗುತ್ತಿದೆ.
ಇಂದು ಸಿಸಿಬಿ ವಿಚಾರಣೆಗೆ ಹಾಜರಾಗ್ತಾರಾ ರಿಕ್ಕಿ ರೈ? - Ricky Rai attend the CCB inquiry
ರಿಕ್ಕಿ ರೈ ಮನೆ ಮೇಲೆ ದಾಳಿ ನಡೆದ ಬಳಿಕ ಚಾಮಾರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಎರಡು ದಿನ ವಿಚಾರಣೆಗೆ ಹಾಜರಾಗಿದ್ದರು. ಆದರೆ ಸದ್ಯ ಅನಾರೋಗ್ಯದ ಸಮಸ್ಯೆ ಹೇಳಿ ಮೂರು ದಿನ ಸಮಯ ಕೇಳಿದ್ದಾರೆನ್ನಲಾಗಿದೆ.
ನಿನ್ನೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರೂ ಗೈರಾಗಿದ್ದ ರಿಕ್ಕಿ, ಸದ್ಯ ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ ಎಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಕ್ಕಿ ರೈ ಮನೆ ಮೇಲೆ ದಾಳಿ ನಡೆದ ಬಳಿಕ ಚಾಮಾರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಎರಡು ದಿನ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ 80ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿಸಿಬಿ ಪೊಲೀಸರು ಕೇಳಿದ್ದರು. ಕೆಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದು, ಕೆಲ ಪ್ರಶ್ನೆಗಳಿಗೆ ಅಸ್ಪಷ್ಟವಾಗಿ ಉತ್ತರಿಸಿದ ಕಾರಣ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆಯಂತೆ.
ಆದಿತ್ಯ ಆಳ್ವಾ ಮತ್ತು ಮತ್ತೊಬ್ಬ ನಟಿಯ ಜೊತೆಗೆ ಸಂಪರ್ಕ ಇರುವ ಬಗ್ಗೆ ಮತ್ತು ಆದಿತ್ಯ ಆಳ್ವಾನ ವ್ಯವಹಾರ, ಪಾರ್ಟಿಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದು, ರಿಕ್ಕಿ ವಿಚಾರಣೆ ಮುಗಿದ ಬಳಿಕ ಅವರ ಹೇಳಿಕೆ ಆಧರಿಸಿ ಆ ನಟಿ ಮತ್ತು ಆದಿತ್ಯ ಆಳ್ವಾನಿಗೆ ಬಲೆ ಬೀಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.